New Year Celebration: ಮದಿರೆ ಮತ್ತಲ್ಲಿ ನಡು ರಸ್ತೆಯಲ್ಲೇ ತೂರಾಡಿದ ಯುವತಿಯರು

| Updated By: ಆಯೇಷಾ ಬಾನು

Updated on: Jan 01, 2024 | 8:44 AM

ಹೊಸ ವರ್ಷ ಸಂಭ್ರಮಾಚರಣೆ ವೇಳೆ ಕೋರಮಂಗಲ, ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಇಂದಿರಾನಗರ ಸೇರಿದಂತೆ ಎಲ್ಲೆಡೆ ಪಾರ್ಟಿ ಮುಗಿದ ಬಳಿಕ ಯುವಕ, ಯುವತಿಯರು ಕುಡಿದು ತೂರಾಡಿದ್ದಾರೆ. ಎಂಜಿ ರೋಡ್‌, ಬ್ರಿಗೇಡ್‌ ರೋಡ್‌ಗೆ ಅಂದಾಜು ಒಂದೂವರೆ ಲಕ್ಷಕ್ಕೂ ಹೆಚ್ಚು ಜನ ಬಂದಿದ್ರು. ಕಾಲಿಡಲು ಜಾಗವೇ ಇರದಷ್ಟು ಜನ ಸೇರಿದ್ರು.

ಬೆಂಗಳೂರು, ಜ.01: ಹೊಸ ವರ್ಷವನ್ನು ಅದ್ದೂರಿಯಾಗಿ ಬರ ಮಾಡಿಕೊಳ್ಳಲಾಗಿದೆ. ಹೊಸ ವರ್ಷ ಸಂಭ್ರಮಾಚರಣೆ ವೇಳೆ ಕೋರಮಂಗಲ, ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಇಂದಿರಾನಗರ ಸೇರಿದಂತೆ ಎಲ್ಲೆಡೆ ಪಾರ್ಟಿ ಮುಗಿದ ಬಳಿಕ ಯುವಕ, ಯುವತಿಯರು ಕುಡಿದು ತೂರಾಡಿದ್ದಾರೆ. ಕುಡಿದು ಪ್ರಜ್ಞೆ ತಪ್ಪಿದ ಯುವತಿಯರನ್ನ ಪೊಲೀಸರು ಸೇಫ್ಟಿ ಹೈಲ್ಯಾಂಡ್‌ಗೆ ರವಾನಿಸಿದರು.

ಎಂಜಿ ರೋಡ್‌, ಬ್ರಿಗೇಡ್‌ ರೋಡ್‌ಗೆ ಅಂದಾಜು ಒಂದೂವರೆ ಲಕ್ಷಕ್ಕೂ ಹೆಚ್ಚು ಜನ ಬಂದಿದ್ರು. ಕಾಲಿಡಲು ಜಾಗವೇ ಇರದಷ್ಟು ಜನ ಸೇರಿದ್ರು. ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿ ಬಂದೋಬಸ್ತ್‌ ಕೈಗೊಂಡಿದ್ರೂ ಕೂಡ ಜನರನ್ನು ನಿಯಂತ್ರಿಸಲು ಸಾಕಾ ಸಾಕಾಗಿ ಹೋದ್ರು. ತಳ್ಳಾಟ.. ನೂಕಾಟದಿಂದ ಯುವತಿಯರ ಸಂಕಟ ಪಡುವಂತಾಯಿತು.

ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ