ಅಂತರ್ಧರ್ಮೀಯ ವಿವಾಹದಲ್ಲಿ ಬೆಸೆದಿರುವ ಚಿಕ್ಕಬಳ್ಳಾಪುರ ಯುವಕ-ಯುವತಿಗೆ ತಮ್ಮ ಕುಟುಂಬಗಳ ಭೀತಿ
ಹರೀಶ್ ಮತ್ತು ನಜ್ಮಾ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಾರೆ ಮತ್ತು ಅಲ್ಲೇ ಇಬ್ಬರ ನಡುವೆ ಪ್ರೇಮಾಂಕುರವಾಗಿದೆ. ನಜ್ಮಾ ಕುಟುಂಬದಿಂದ ಎದುರಾಗುವ ವಿರೋಧ ಮತ್ತು ತೊಂದರೆಗಳ ಬಗ್ಗೆ ಹರೀಶ್ ಮಾತಾಡುತ್ತಾರೆ. ಆದರೆ ಅವರ ಕುಟುಂಬದಿಂದಲೂ ವಿರೋಧ ಇದ್ದೀತು. ಅದೇನೆ ಇದ್ದರೂ ಇಬ್ಬರೂ ಧೈರ್ಯ ಮಾಡಿ ಬದುಕು ನಡೆಸಬೇಕು, ಅಂತರ್ಧರ್ಮೀಯ ಮದುವೆಗಳು ಹೊಸತೇನಲ್ಲ.
ಚಿಕ್ಕಬಳ್ಳಾಪುರ, ಮೇ 16: ಬೇರೆ ಬೇರೆ ಧರ್ಮಗಳಿಗೆ ಸೇರಿದ ಯುವಕ ಮತ್ತು ಯುವತಿ ಮದುವೆಯಾದಾಗ ಇಬ್ಬರ ಕುಟುಂಬಗಳಿಂದ, ಸಮಾಜದಿಂದ ವಿರೋಧ ಇದ್ದೇಇರುತ್ತದೆ. ಚಿಕ್ಕಬಳ್ಳಾಪುರದಲ್ಲಿ ಹೀಗೊಂದು ಅನ್ಯಧರ್ಮೀಯ ವಿವಾಹ ನಡೆದಿದೆ. ಚಿಕ್ಕಬಳ್ಳಾಪುರದ ತಾಲೂಕಿನ ಯಾಪಲಹಳ್ಳಿಯ ಹರೀಶ್ ಬಾಬು ಮತ್ತು ಗುಡಿಬಂಡೆ ತಾಲೂಕಿನ ಸೋಮೇಶ್ವರ ಗ್ರಾಮದ ನಜ್ಮಾ ದೇವಸ್ಥಾನವೊಂದರಲ್ಲಿ ಸರಳವಾಗಿ ಮದುವೆಯಾಗಿದ್ದಾರೆ. ನಜ್ಮಾಳ ಕುಟುಂಬದವರಿಂದ ತೊಂದರೆಯಾಗಬಹುದು ಎಂಬ ಕಾರಣಕ್ಕೆ ರಕ್ಷಣೆ ಕೇಳಲು ಹರೀಶ್ ತನ್ನ ಪತ್ನಿಯನ್ನು ಕರೆದುಕೊಂಡು ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಬಂದಾಗ ಮಾಧ್ಯಮಗಳೊಂದಿಗೆ ತಮ್ಮ ಲವ್ ಸ್ಟೋರಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಹಿಂದೂ ಯುವಕರು ಅನ್ಯ ಧರ್ಮದ ಯುವತಿಯರನ್ನು ಮದ್ವೆಯಾಗ್ಬೇಕೆಂದ ಸೂಲಿಬೆಲೆಗೆ ಸಂಕಷ್ಟ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ