‘ಶೆಫ್ ಚಿದಂಬರ’ ಸಿನಿಮಾದಲ್ಲಿ ನನ್ನ ಪಾತ್ರ ನೋಡಿ ಶಾಕ್-ಸರ್ಪ್ರೈಸ್ ಆಗ್ತಾರೆ: ನಿಧಿ ಸುಬ್ಬಯ್ಯ

|

Updated on: Oct 10, 2023 | 9:28 PM

Nidhi Subbaiah: 'ಶೆಫ್ ಚಿದಂಬರ' ಸಿನಿಮಾದಲ್ಲಿ ನಟಿಸಿರುವ ನಿಧಿ ಸುಬ್ಬಯ್ಯ ಈ ಸಿನಿಮಾದಲ್ಲಿನ ನನ್ನ ಪಾತ್ರ ನೋಡಿ ಹಲವರಿಗೆ ಶಾಕ್ ಹಾಗೂ ಸರ್ಪ್ರೈಸ್ ಆಗಬಹುದು ಎಂದಿದ್ದಾರೆ.

2009ರಲ್ಲಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ನಟಿ ನಿಧಿ ಸುಬ್ಬಯ್ಯ (Nidhi subbaiah) ಆರಂಭದಲ್ಲಿಯೇ ಯಶಸ್ಸು, ಜನಪ್ರಿಯತೆ ಗಳಿಸಿಕೊಂಡ ನಟಿ. ವೃತ್ತಿಯ ಉತ್ತುಂಗದಲ್ಲಿದ್ದಾಗಲೇ 2012ರ ಬಳಿಕ ಚಿತ್ರರಂಗದಿಂದ ನಾಲ್ಕು ವರ್ಷಗಳ ಕಾಲ ದೂರಾಗಿ 2016ರಲ್ಲಿ ಮತ್ತೆ ಕಮ್ ಬ್ಯಾಕ್ ಮಾಡಿದರು. ಇದೀಗ ಸಾಲು-ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದು, ಇದೀಗ ‘ಶೆಫ್ ಚಿದಂಬರ’ ಹೆಸರಿನ ಸಿನಿಮಾದಲ್ಲಿ ನಟಿಸಿದ್ದಾರೆ. ಸಿನಿಮಾಕ್ಕೆ ಅನಿರುದ್ಧ್ ನಾಯಕ. ಸಿನಿಮಾ ಕುರಿತ ಸುದ್ದಿಗೋಷ್ಠಿಯಲ್ಲಿ ತಮ್ಮ ಪಾತ್ರದ ಬಗ್ಗೆ ಮಾತನಾಡಿದ ನಿಧಿ ಸುಬ್ಬಯ್ಯ, ‘ಶೆಫ್ ಚಿದಂಬರ’ ಸಿನಿಮಾದಲ್ಲಿನ ನನ್ನ ಪಾತ್ರ ನೋಡಿದ ಹಲವರಿಗೆ ಶಾಕ್ ಹಾಗೂ ಸರ್ಪ್ರೈಸ್ ಆಗಬಹುದು ಅಷ್ಟು ಭಿನ್ನವಾಗಿದೆ. ಈ ಪಾತ್ರ ಮಾಡುವಾಗ ನನಗೆ ಸ್ವಾತಂತ್ರ್ಯ ಇತ್ತು ಎಂದು ನಿರ್ದೇಶಕರನ್ನು, ಸಹ ನಟರನ್ನು ಕೊಂಡಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ