12 ವರ್ಷಗಳ ಬಳಿಕ ದಿಗಂತ್ ಒಟ್ಟಿಗೆ ನಟನೆ: ನಿಧಿ ಸುಬ್ಬಯ್ಯ ಹೇಳಿದ್ದು ಹೀಗೆ
Diganth-Nidhi: 'ಪಂಚರಂಗಿ' ಸಿನಿಮಾದ ಕ್ಯೂಟ್ ಜೋಡಿ ದಿಗಂತ್ ಹಾಗೂ ನಿಧಿ ಸುಬ್ಬಯ್ಯ ಬರೋಬ್ಬರಿ 12 ವರ್ಷಗಳ ಬಳಿಕ ಒಟ್ಟಿಗೆ ಒಂದೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಬಗ್ಗೆ ನಿಧಿ ಹೇಳಿದ್ದು ಹೀಗೆ...
ದಿಗಂತ್ (Diganth) ಹಾಗೂ ನಿಧಿ ಸುಬ್ಬಯ್ಯ (Nidhi Subbaiah) 12 ವರ್ಷಗಳ ಹಿಂದೆ ‘ಪಂಚರಂಗಿ’ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಆಗ ಇವರದ್ದು ಬಹಳ ಕ್ಯೂಟ್ ಜೋಡಿ. ಆ ಸಿನಿಮಾ ಸಹ ಕೆಲವರಿಗೆ ವಿಪರೀತ ಇಷ್ಟವಾಗಿದ್ದರೆ ಕೆಲವರಿಗೆ ಇದೇನಿದು ಹೀಗಿದೆ ಎನಿಸಿತ್ತು, ಏನಾದರಾಗಲಿ ನಿಧಿ-ದಿಗಂತ್ ಜೋಡಿಯಂತೂ ಕ್ಯೂಟ್ ಆಗಿತ್ತು. ಈಗ 12 ವರ್ಷಗಳ ಬಳಿಕ ನಿಧಿ ಹಾಗೂ ದಿಗಂತ್ ಒಟ್ಟಿಗೆ ನಟಿಸಿದ್ದಾರೆ ‘ಎಡಗೈ ಅಪಘಾತಕ್ಕೆ ಕಾರಣ’ ಸಿನಿಮಾದಲ್ಲಿ. ಮತ್ತೆ ದಿಗಂತ್ ಜೊತೆ ನಟಿಸಿರುವ ಬಗ್ಗೆ ನಟಿ ನಿಧಿ ಸುಬ್ಬಯ್ಯ ಮಾತನಾಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos