ಪ್ರಧಾನಿ ನರೇಂದ್ರ ಮೋದಿಯವರು ದೇವೇಗೌಡರನ್ನು ತಂದೆಯಂತೆ ಆದರಿಸುತ್ತಾರೆ: ಕುಮಾರಸ್ವಾಮಿ
ಪ್ರಧಾನಿ ನರೇಂದ್ರ ಮೋದಿಯವರಿಗೆ ದೇವೇಗೌಡರ ಬಗ್ಗೆ ಅಪಾರ ಗೌರವ ಇರುವ ಕಾರಣ ತಾನು ಕೇಂದ್ರದಲ್ಲಿ ಮಂತ್ರಿಯಾಗಿರುವುದಾಗಿ ಹೇಳಿದ ಕುಮಾರಸ್ವಾಮಿ, ಮೋದಿಯವರು ಮಾಜಿ ಪ್ರಧಾನಿಯವರನ್ನು ತಂದೆಯಂತೆ ಗೌರವಿಸುತ್ತಾರೆ, ಖುದ್ದು ಪ್ರಧಾನಿಯವರೇ ಅಷ್ಟೊಂದು ಆದರ ಇಟ್ಟುಕೊಂಡಿರುವ ಕುಟುಂಬ ತಮ್ಮದು ಎಂದರು.
ರಾಮನಗರ: ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಮತ್ತು ಸಂಸದ ಯದುವೀರ್ ಕೃಷ್ಣದತ್ ಒಡೆಯರ್ ಇಂದು ಚನ್ನಪಟ್ಟಣ ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಪರ ಪ್ರಚಾರ ಮಾಡಿದರು. ದೇವರ ಹೊಸಹಳ್ಳಿಯಲ್ಲಿ ಸಭೆಯೊಂದನ್ನು ಉದ್ದೇಶಿಸಿ ಮಾತಾಡಿದ ಕುಮಾರಸ್ವಾಮಿ, ತಾನು ಕ್ಷೇತ್ರದ ಶಾಸಕ ಮತ್ತು ಮುಖ್ಯಮಂತ್ರಿ ಆಗಿದ್ದಾಗ ಕೆರೆಗಳನ್ನು ತುಂಬಿಸುವ ಕೆಲಸ ಮಾಡುವುದರ ಜೊತೆಗೆ ರಾಮನಗರ ಜಿಲ್ಲೆಯ ರೈತರ ಸುಮಾರು 70 ಕೋಟಿ ರೂ ಮೊತ್ತದ ಸಾಲಮನ್ನಾ ಮಾಡಿದ್ದಾಗಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಒಂದೆಡೆ ನಿಖಿಲ್ ಮತ್ತೊಂದೆಡೆ ಕುಮಾರಸ್ವಾಮಿ ಹಾಗೂ ಯದುವೀರ್; ಎನ್ಡಿಎ ಭರ್ಜರಿ ಮತಬೇಟೆ