ಒಂದೆಡೆ ನಿಖಿಲ್ ಮತ್ತೊಂದೆಡೆ ಕುಮಾರಸ್ವಾಮಿ ಹಾಗೂ ಯದುವೀರ್; ಎನ್​ಡಿಎ ಭರ್ಜರಿ ಮತಬೇಟೆ

ಒಂದೆಡೆ ನಿಖಿಲ್ ಮತ್ತೊಂದೆಡೆ ಕುಮಾರಸ್ವಾಮಿ ಹಾಗೂ ಯದುವೀರ್; ಎನ್​ಡಿಎ ಭರ್ಜರಿ ಮತಬೇಟೆ

ಅರುಣ್​ ಕುಮಾರ್​ ಬೆಳ್ಳಿ
|

Updated on: Oct 28, 2024 | 1:19 PM

ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಮತಯಾಚೆನೆಗಿಳಿದ ನಿಖಿಲ್ ಕುಮಾರಸ್ವಾಮಿ, ಗ್ರಾಮದ ಮಹಿಳೆಯರೊಂದಿಗೆ ಮಾತಾಡಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ತಂದೆಗೆ ವೋಟು ನೀಡಿ ಗೆಲ್ಲಿಸಿದ ಹಾಗೆ ತನ್ನನ್ನು ಸಹ ಗೆಲ್ಲಿಸುವಂತೆ ಕೋರಿದರು.

ರಾಮನಗರ: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯನ್ನು ದೇವೇಗೌಡರ ಕುಟುಂಬ ಗಂಭೀರವಾಗಿ ಪರಿಗಣಿಸಿರುವ ಬಗ್ಗೆ ಎರಡು ಮಾತಿಲ್ಲ. ಇಂದು ಬೆಳಗ್ಗೆಯೇ ಕೋಡಂಬಳ್ಳಿಯ ಗ್ರಾಮದಿಂದ ಪ್ರಚಾರ ಆರಂಭಿಸಿದ ನಿಖಿಲ್ ಕುಮಾರಸ್ವಾಮಿ, ಹುಣಸನಹಳ್ಳಿಯ ಶ್ರೀ ಬಿಸಿಲಮ್ಮ ಕರಗದ ಮನೆ ದೇವಿಗೆ ಪೂಜೆ ಸಲ್ಲಿಸಿದರು. ಅವರನ್ನು ನೋಡಲು ಗ್ರಾಮದ ಜನರು ನೆರೆದಿರುವುದನ್ನು ದೃಶ್ಯಗಳಲ್ಲಿ ನೋಡಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಸೊಂಟದ ನೋವು ಕಡಿಮೆಯಾದರೆ ನಿಖಿಲ್ ಕುಮಾರಸ್ವಾಮಿ ಪರ ಪ್ರಚಾರಕ್ಕೆ ಹೋಗುವೆ: ಹೆಚ್ ಡಿ ರೇವಣ್ಣ