ಸೊಂಟದ ನೋವು ಕಡಿಮೆಯಾದರೆ ನಿಖಿಲ್ ಕುಮಾರಸ್ವಾಮಿ ಪರ ಪ್ರಚಾರಕ್ಕೆ ಹೋಗುವೆ: ಹೆಚ್ ಡಿ ರೇವಣ್ಣ
ವಕೀಲ ಡಿ ದೇವರಾಜೇಗೌಡ ಹೆಸರು ಪ್ರಸ್ತಾಪವಾದಾಗ ಹೆಚ್ ಡಿ ರೇವಣ್ಣ ಪಲಾಯನವಾದಕ್ಕೆ ಶರಣಾದರು. ಅವರು ದೊಡ್ಡ ಮನುಷ್ಯ, ಅವರ ಬಗ್ಗೆ ಮಾತಾಡುವಷ್ಟು ಶಕ್ತಿ ತನಗಿಲ್ಲ, ತಾನೊಬ್ಬ ಬಡರೈತನ ಮಗ, ದೇವರ ಮತ್ತು ಜನರ ಆಶೀರ್ವಾದದಿಂದ ಬದುಕಿಕೊಂಡು ಜೀವನ ನಡೆಸುತ್ತಿದ್ದೇವೆ ಎಂದು ರೇವಣ್ಣ ಹೇಳಿದರು.
ಬೆಂಗಳೂರು: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಜೆಡಿಎಸ್ ಶಾಸಕ ಹೆಚ್ ಡಿ ರೇವಣ್ಣ, ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷದವರು ಷಡ್ಯಂತ್ರ ನಡೆಸುವ ಪ್ರಯತ್ನ ಮಾಡಿದರೆ ಅದು ನಡೆಯಲ್ಲ ಎಂದು ಹೇಳಿದರು. ಕಳೆದ ಶುಕ್ರವಾರ ಕೆಳಗೆ ಬಿದ್ದು ಸೊಂಟದಲ್ಲಿ ನೋವಿರುವ ಕಾರಣ ಚನ್ನಪಟ್ಟಣದಲ್ಲಿ ನಿಖಿಲ್ ಕುಮಾರಸ್ವಾಮಿ ಪರ ಪ್ರಚಾರಕ್ಕಾಗಿ ಹೋಗುವುದು ಸಾಧ್ಯವಾಗಲ್ಲ, ನೋವು ತಹಬದಿಗೆ ಬಂದರೆ ಹೋಗೋದಾಗಿ ರೇವಣ್ಣ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಚನ್ನಪಟ್ಟಣ ಉಪಚುನಾವಣೆ: ಎನ್ಡಿಎ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ನಾಮಪತ್ರ
Latest Videos

ಮಠದಲ್ಲಿ ಸಿದ್ಧಲಿಂಗ ಸ್ವಾಮೀಜಿಯವರ ಪಾದಕ್ಕೆ ನಮಸ್ಕರಿಸಿದ ರಾಜನಾಥ್ ಸಿಂಗ್

ಒರಿಜಿನಲ್ ರಂಗಾಯಣ ರಘುವಿಗೆ ಡುಪ್ಲಿಕೇಟ್ ರಂಗಾಯಣ ರಘು ಸಿಕ್ಕಾಗ

ಕಣ್ಮನ ಸೆಳೆಯುತ್ತಿದೆ ಶಿವಕುಮಾರ ಶ್ರೀಗಳ 125 ಅಡಿ ಉದ್ದದ ರಂಗೋಲಿ ಚಿತ್ರ

ದೇವರಿಗೆ ತಪ್ಪು ಕಾಣಿಕೆ ಕಟ್ಟುವುದು ಹೇಗೆ? ಮುಡಿಪು ಇಡುವುದರ ಮಹತ್ವ ಇಲ್ಲಿದೆ
