ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಸೋಲಿಸುವುದು ನನ್ನ ಗುರಿ ಮತ್ತು ಉದ್ದೇಶ: ಅಜ್ಜಂಪೀರ್ ಖಾದ್ರಿ
ತನ್ನ ಮನವೊಲಿಕೆಗೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾರೂ ಪ್ರಯತ್ನಿಸಿಲ್ಲ ಎಂದು ಹೇಳಿದ ಖಾದ್ರಿ, ತಮ್ಮ ದರ್ಗಾಗೆ ಜಮೀರ್ ಅಹ್ಮದ್ ಸಾಬ್ ಬಂದಿದ್ದು ಸತ್ಯ, ಆದರೆ ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಲು ಯಾರು ಬೇಕಾದರೂ ಬರಬಹುದು ಎಂದು ಅವರು ಹೇಳಿದರು.
ಹಾವೇರಿ: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಶಿಗ್ಗಾವಿಯ ಕಾರ್ಯಕರ್ತರಲ್ಲಿ ಅಸಮಾಧಾನ ಇಲ್ಲವೆನ್ನುತ್ತಾರೆ, ಆದರೆ ಟಿಕೆಟ್ ಸಿಗದ ಕಾರಣ ಬಂಡಾಯವೆದ್ದು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಕಾಂಗ್ರೆಸ್ ಮುಖಂಡ ಅಜ್ಜಂಪೀರ್ ಖಾದ್ರಿ, ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಯನ್ನು ಸೋಲಿಸುವುದೇ ತನ್ನ ಗುರಿ ಎಂದು ಎರಡೂ ಕೈಗಳನ್ನೆತ್ತಿ ಶಪಥ ಮಾಡುವ ಶೈಲಿಯಲ್ಲಿ ಘೋಷಣೆ ಮಾಡುತ್ತಾರೆ. ಯಾಸಿರ್ ಪಠಾಣ್ ಬೇರೆ ತಾಲ್ಲೂಕಿನವನು, ತಾನಾದರೋ ಇದೇ ತಾಲ್ಲೂಕಿನವನಾಗಿದ್ದು ಹಗಲು/ರಾತ್ರಿ ಬಡವರ ಸೇವೆ ಮಾಡುತ್ತಿದ್ದೇನೆ ಎಂದು ಖಾದ್ರಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಶಿಗ್ಗಾವಿ ಕಾರ್ಯಕರ್ತರಲ್ಲಿ ಭಿನ್ನಮತವಿಲ್ಲ, ಖಾದ್ರಿ ಖುದ್ದು ನನ್ನೊಂದಿಗೆ ಮಾತಾಡಿದ್ದಾರೆ: ಶಿವಕುಮಾರ್
Latest Videos