ಧಮ್​​ ಇದ್ರೆ ಚುನಾವಣೆಗೆ ನಿಲ್ಲಲು ಹೇಳಿ: ಚೇತನ್​​ಗೆ ನಿಖಿಲ್ ಕುಮಾರಸ್ವಾಮಿ​​ ಓಪನ್​​ ಚಾಲೆಂಜ್​

Edited By:

Updated on: Apr 28, 2026 | 2:19 PM

ಮೈಸೂರಿನಲ್ಲಿ ಯುವ ಜೆಡಿಎಸ್ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನಟ ಚೇತನ್ ಅಹಿಂಸ ವಿರುದ್ಧ ಕಿಡಿಕಾರಿದ್ದಾರೆ. ಡಾ. ರಾಜ್‌ಕುಮಾರ್ ಬಗ್ಗೆ ಮಾತನಾಡಿದ್ದ ಚೇತನ್​​ರನ್ನು ಈ ಹಿಂದೆ ನಿಖಿಲ್​​ ಟೀಕಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಚೇತನ್​ ನಿಖಿಲ್​​ ಮತ್ತು ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಬಗ್ಗೆ ಮಾತನಾಡಿದ್ದರು. ಈ ಬಗ್ಗೆ ಮಾಧ್ಯಮಗಳು ನಿಖಿಲ್​​ ಅವರನ್ನು ಪ್ರಶ್ನಿಸಿದ್ದು, ಧಮ್ ಇದ್ದರೆ ಬಂದು ಚುನಾವಣೆಗೆ ನಿಲ್ಲಲು ಹೇಳಿ ಎಂದು ಯುವ ಜೆಡಿಎಸ್ ಅಧ್ಯಕ್ಷ ಸವಾಲು ಹಾಕಿದ್ದಾರೆ.

ಮೈಸೂರು, ಏಪ್ರಿಲ್​​ 28: ತಮ್ಮ ಬಗ್ಗೆ ಮಾತನಾಡಿದ್ದ ನಟ ಚೇತನ್​​ ಅಹಿಂಸ ಬಗ್ಗೆ ಯುವ ಜೆಡಿಎಸ್ ರಾಜ್ಯಾಧ್ಯಕ್ಷ ನಿಖಿಲ್​​ ಕುಮಾರಸ್ವಾಮಿ ಕಿಡಿ ಕಾರಿದ್ದಾರೆ. ಧಮ್​​ ಇದ್ದರೆ ಬಂದು ಅವರಿಗೆ ಚುನಾವಣೆಗೆ ನಿಲ್ಲಲು ಹೇಳಿ. ಅವರಂತೆ ಮನೆಯಲ್ಲಿ ಕುಳಿತು ಟ್ವಿಟ್ಟರ್​​ನಲ್ಲಿ ನಾನೂ ಸಾವಿರ ಬರೆಯುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವರನಟ ಡಾ. ರಾಜ್​​ಕುಮಾರ್​​ ಅವರ ಬಗ್ಗೆ ಚೇತನ್​​ ಮಾತನಾಡಿದ್ದನ್ನು ನಿಖಿಲ್​​ ಇತ್ತೀಚೆಗೆ ಖಂಡಿಸಿದ್ದರು. ಅಣ್ಣಾವ್ರ ಹೆಸರು ಹೇಳಲು, ಅವರ ಬಗ್ಗೆ ಮಾತನಾಡಲು ನಟ ಚೇತನ್ ಅವರಿಗೆ ಯೋಗ್ಯತೆ ಇಲ್ಲ. ಅವರೊಬ್ಬ ಪ್ರಚಾರಪ್ರಿಯ ಎಂದು ದೂರಿದ್ದರು. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ್ದ ಚೇತನ್ ಅಹಿಂಸ, ನಿಖಿಲ್ ಕುಮಾರಸ್ವಾಮಿ ಮತ್ತು ಕೇಂದ್ರ ಸಚಿವ ಹೆಚ್​​ಡಿ ಕುಮಾರಸ್ವಾಮಿ ಅವರನ್ನು ಟೀಕೆ ಮಾಡಿದ್ದರು.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Follow Us
Ram

ರಾಮ್ ಮೈಸೂರು ಪತ್ರಕರ್ತನಾಗಿ 20 ವರ್ಷದ ಅನುಭವ. ಕಳೆದ 14 ವರ್ಷಗಳಿಂದ ಟಿವಿ9 ಕನ್ನಡದ ಮೈಸೂರು ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ನಿರ್ವಹಣೆ. ರಾಜ್ಯದ ವಿಧಾನಸಭಾ ಲೋಕಸಭಾ ಚುನಾವಣೆಯ ವಿಶೇಷ ವರದಿ ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳ ಉಪಚುನಾವಣಾ ವರದಿ, ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದ ಚುನಾವಣಾ ವರದಿ ಸೇರಿದಂತೆ ಹಲವು ಚುನಾವಣೆಯ ವರದಿಯ ಅನುಭವ. ಮುಂಬೈ ಮಹಾಮಳೆಯ ಕವರೇಜ್, ಕೊಡಗು ಜಿಲ್ಲೆಯ ಗುಡ್ಡ ಕುಸಿತ, ಸೇರಿದಂತೆ ಹಲವು ಸ್ಟಿಂಗ್ ಕಾರ್ಯಾಚರಣೆ, ಸಾಮಾಜಿಕ‌ ಸಮಸ್ಯೆ ಹಾಗೂ ಮಾನವೀಯ ಕಳಕಳಿಯುಳ್ಳ ವರದಿ ಮಾಡಿದ ಅನುಭವ.

Read More