ನಿಖಿಲ್ ಕುಮಾರಸ್ವಾಮಿ ಮನೆ ಶೋಧ ನಡೆಸಿದ ಅಧಿಕಾರಿಗಳು ಹೇಳಿದ್ದೇನು?
Nikhil Kumaraswamy: ನಿಖಿಲ್ ಕುಮಾರಸ್ವಾಮಿ ಸಹ ತಮ್ಮ ಮದುವೆ ಕಾರ್ಯಕ್ರಮದಲ್ಲಿ ಹುಲಿ ಉಗುರು ಧರಿಸಿದ್ದ ಚಿತ್ರಗಳು ವೈರಲ್ ಆಗಿದ್ದವು. ಹಾಗಾಗಿ ಅವರ ಜೆಪಿ ನಗರದ ನಿವಾಸಕ್ಕೆ ಭೇಟಿ ನೀಡಿದ್ದ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ನೊಟೀಸ್ ನೀಡಿ ಶೋಧ ಮಾಡಿದರು. ಬಳಿಕ ಮಾಧ್ಯಮಗಳ ಬಳಿ ಶೋಧ ಕಾರ್ಯದ ಬಗ್ಗೆ ಮಾಹಿತಿ ಹಂಚಿಕೊಂಡರು.
ಬಿಗ್ಬಾಸ್ (Bigg Boss) ಸ್ಪರ್ಧಿ ವರ್ತೂರು ಸಂತೋಶ್ ಹುಲಿ ಉಗುರು ಧರಿಸಿದ್ದಾರೆ ಎಂದು ಅವರನ್ನು ರಾತ್ರೋರಾತ್ರಿ ಬಂಧಿಸಿದ ಬಳಿಕ ಹಲವು ಸೆಲೆಬ್ರಿಟಿಗಳು ಸಹ ಹುಲಿ ಉಗುರು ಧರಿಸಿದ್ದು ಅವರ ವಿರುದ್ಧವೂ ಕ್ರಮ ಜರುಗಿಸುವಂತೆ ಸಂಘಟನೆಗಳು ದೂರು ನೀಡಿದ್ದವು. ಅದರಂತೆ ಅರಣ್ಯ ಇಲಾಖೆ ಅಧಿಕಾರಿಗಳು ನಿಖಿಲ್ ಕುಮಾರಸ್ವಾಮಿ, ಜಗ್ಗೇಶ್, ದರ್ಶನ್ ಇನ್ನಿತರರ ಮನೆಗಳಿಗೆ ನೊಟೀಸ್ ನೀಡಿ ಶೋಧ ಮಾಡಿದ್ದಾರೆ. ನಿಖಿಲ್ ಕುಮಾರಸ್ವಾಮಿ ಸಹ ತಮ್ಮ ಮದುವೆ ಕಾರ್ಯಕ್ರಮದಲ್ಲಿ ಹುಲಿ ಉಗುರು ಧರಿಸಿದ್ದ ಚಿತ್ರಗಳು ವೈರಲ್ ಆಗಿದ್ದವು. ಹಾಗಾಗಿ ಅವರ ಜೆಪಿ ನಗರದ ನಿವಾಸಕ್ಕೆ ಭೇಟಿ ನೀಡಿದ್ದ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ನೊಟೀಸ್ ನೀಡಿ ಶೋಧ ಮಾಡಿದರು. ಬಳಿಕ ಮಾಧ್ಯಮಗಳ ಬಳಿ ಶೋಧ ಕಾರ್ಯದ ಬಗ್ಗೆ ಮಾಹಿತಿ ಹಂಚಿಕೊಂಡರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Oct 25, 2023 10:07 PM