ಟೀಚರ್ ಹೊಡೆದ ನಂತರ ನಿಶ್ಚಿತಾ ಕುಸಿದುಬಿದ್ದಳು ಅಂತ ಅವಳ ಸಹಪಾಠಿಗಳು ಹೇಳಿದರು: ನಿಶ್ಚಿತಾ ಅಜ್ಜಿ
ಅರ್ಧಗಂಟೆ ಮೊದಲು ಶಾಲೆಗೆ ಹೋಗಿದ್ದಾಗ ನಿಶ್ಚಿತಾ ಚೆನ್ನಾಗಿದ್ದಳೆಂದು ನರಸಮ್ಮ ಹೇಳುತ್ತಾರೆ. ಗಂಗಮ್ಮಗುಡಿ ಪೊಲೀಸ್ ಠಾಣೆಯಲ್ಲಿ ಆರ್ ಡಿ ಇಂಟರ್ ನ್ಯಾಷನಲ್ ಶಾಲೆ ವಿರುದ್ಧ ದೂರು ದಾಖಲಿಸಲಾಗಿದೆ.
ಬೆಂಗಳೂರು: ಟಿವಿ9 ಕನ್ನಡ ವಾಹಿನಿಯ ಬೆಂಗಳೂರು ವರದಿಗಾರನೊಂದಿಗೆ ತಮ್ಮ ದುಃಖ ಹೇಳಿಕೊಳ್ಳುತ್ತಿರುವ ಈ ಮಹಿಳೆ ಶುಕ್ರವಾರ ನಗರದ ಆರ್ ಡಿ ಇಂಟರ್ ನ್ಯಾಷನಲ್ ಶಾಲೆಯಲ್ಲಿ (RD International School) ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟ 11-ವರ್ಷ ವಯಸ್ಸಿನ ನಿಶ್ಚಿತಾಳ (Nishchita) ಅಜ್ಜಿ ನರಸಮ್ಮ. 4-5 ದಿನಗಳ ಹಿಂದೆ ಶಿಕ್ಷಕರೊಬ್ಬರು ಡಸ್ಟರ್ ನಿಂದ ಮಗುವಿಗೆ ಹೊಡೆದಿದ್ದರು ಮತ್ತು ನಿನ್ನೆ ಕೂಡ ನಿಶ್ಚಿತಾಳ ಸಹಪಾಠಿಗಳು ಟೀಚರ್ ಅವಳಿಗೆ ಹೊಡೆದರು ಅಂತ ಹೇಳಿದರು ಎನ್ನುತ್ತಿದ್ದಾರೆ ನರಸಮ್ಮ. ಅರ್ಧಗಂಟೆ ಮೊದಲು ಶಾಲೆಗೆ ಹೋಗಿದ್ದಾಗ ನಿಶ್ಚಿತಾ ಚೆನ್ನಾಗಿದ್ದಳೆಂದು ನರಸಮ್ಮ ಹೇಳುತ್ತಾರೆ. ಗಂಗಮ್ಮಗುಡಿ (Gangamma Gudi ) ಪೊಲೀಸ್ ಠಾಣೆಯಲ್ಲಿ ಆರ್ ಡಿ ಇಂಟರ್ ನ್ಯಾಷನಲ್ ಶಾಲೆ ವಿರುದ್ಧ ದೂರು ದಾಖಲಿಸಲಾಗಿದೆ.