IND vs AUS: ನಿತೀಶ್ ರಿವರ್ಸ್ ರ್ಯಾಂಪ್ ಶಾಟ್ ಸಿಕ್ಸರ್​ಗೆ ಬೆಚ್ಚಿದ ಆಸೀಸ್; ವಿಡಿಯೋ ನೋಡಿ

IND vs AUS: ನಿತೀಶ್ ರಿವರ್ಸ್ ರ್ಯಾಂಪ್ ಶಾಟ್ ಸಿಕ್ಸರ್​ಗೆ ಬೆಚ್ಚಿದ ಆಸೀಸ್; ವಿಡಿಯೋ ನೋಡಿ

ಪೃಥ್ವಿಶಂಕರ
|

Updated on:Dec 06, 2024 | 3:45 PM

Nitish Kumar Reddy: 42ನೇ ಓವರ್‌ನ ಎರಡನೇ ಬಾಲ್ ಅನ್ನು ನಿತೀಶ್ ರಿವರ್ಸ್ ರ್ಯಾಂಪ್ ಶಾಟ್ ಆಡಿ ಥರ್ಡ್ ಮ್ಯಾನ್ ಕಡೆಗೆ ಸಿಕ್ಸರ್ ಹೊಡೆದರು. ಸಾಮಾನ್ಯವಾಗಿ ಇಂತಹ ಶಾಟ್ ಟಿ20ಕ್ರಿಕೆಟ್​ನಲ್ಲಿ ಮಾತ್ರ ಕಂಡುಬರುತ್ತದೆ. ಆದರೆ ಟೆಸ್ಟ್​ನಲ್ಲಿ ಈ ಶಾಟ್ ಆಡುವ ಮೂಲಕ ರೆಡ್ಡಿ ತಮ್ಮ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಿದರು. ಬೋಲ್ಯಾಂಡ್ ಅವರ ಓವರ್‌ನಲ್ಲಿ ಅವರು 2 ಸಿಕ್ಸರ್ ಮತ್ತು 1 ಬೌಂಡರಿ ಬಾರಿಸಿದರು.

ಭಾರತ ತಂಡಕ್ಕೆ ನಿತೀಶ್ ಕುಮಾರ್ ರೆಡ್ಡಿ ರೂಪದಲ್ಲಿ ಒಬ್ಬ ಅಧ್ಬುತ ಆಲ್ ರೌಂಡರ್ ಸಿಕ್ಕಿದ್ದಾರೆ ಎಂದು ಹೇಳಬಹುದು. ಅಡಿಲೇಡ್ ಪಿಚ್​ನಲ್ಲಿ ಟೀಂ ಇಂಡಿಯಾದ ಅನುಭವಿ ಬ್ಯಾಟ್ಸ್‌ಮನ್​ಗಳು ರನ್​ಗಳಿಸಲು ಪರದಾಡುತ್ತಿದ್ದರೆ, ನಿತೀಶ್ ಮಾತ್ರ ಬೇರೆಯದ್ದೇ ಪಿಚ್​ನಲ್ಲಿ ಬ್ಯಾಟಿಂಗ್‌ ಮಾಡುತ್ತಿದ್ದಂತೆ ಕಂಡುಬಂದರು. ನಿತೀಶ್ ಇದುವರೆಗೆ ಆಡಿರುವ 2 ಟೆಸ್ಟ್ ಪಂದ್ಯಗಳಲ್ಲಿಯೂ ಇದೇ ರೀತಿಯಾಗಿ ಬ್ಯಾಟ್ ಬೀಸಿದ್ದಾರೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಐದು ಪಂದ್ಯಗಳ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ನಿತೀಶ್ 42 ರನ್‌ಗಳ ಅತ್ಯುತ್ತಮ ಇನ್ನಿಂಗ್ಸ್ ಆಡಿದರು. ನಿತೀಶ್ ತಮ್ಮ ಇನ್ನಿಂಗ್ಸ್‌ನಲ್ಲಿ ಆಸೀಸ್ ತಂಡದ ಮಾರಕ ವೇಗಿಗಳಾದ ಸ್ಟಾರ್ಕ್ ಮತ್ತು ಬೋಲ್ಯಾಂಡ್ ಅವರ ಎಸೆತಗಳಲ್ಲಿ ರೋಮಾಂಚನಕಾರಿ ಸಿಕ್ಸರ್‌ಗಳನ್ನು ಬಾರಿಸಿದ್ದು ಎಲ್ಲರನ್ನು ಅಚ್ಚರಿಗೊಳಿಸಿತು.

ನಿತೀಶ್ ರಿವರ್ಸ್ ರ್ಯಾಂಪ್ ಶಾಟ್ ಸಿಕ್ಸರ್

ನಿತೀಶ್ ರೆಡ್ಡಿ ಅವರು ತಮ್ಮ ಇನ್ನಿಂಗ್ಸ್‌ನಲ್ಲಿ 3 ಸಿಕ್ಸರ್‌ಗಳನ್ನು ಹೊಡೆದರು ಆದರೆ ಅವರು ಸ್ಟಾರ್ಕ್ ಮತ್ತು ಬೋಲ್ಯಾಂಡ್ ಅವರ ಎಸೆತಗಳಲ್ಲಿ ಹೊಡೆದ ಸಿಕ್ಸರ್‌ಗಳು ನಿಜವಾಗಿಯೂ ಅದ್ಭುತವಾಗಿದ್ದವು. ಟೀಂ ಇಂಡಿಯಾದ ಸತತ ವಿಕೆಟ್ ಪತನದಿಂದಾಗಿ ನಿತೀಶ್ ತಮ್ಮ ಬ್ಯಾಟಿಂಗ್ ಗೇರ್ ಬದಲಾಯಿಸಬೇಕಾಯಿತು. ಹೀಗಾಗಿ 42ನೇ ಓವರ್ ಬೌಲ್ ಮಾಡಲು ಬಂದ ಸ್ಕಾಟ್ ಬೋಲ್ಯಾಂಡ್ ಅವರನ್ನು ಗುರಿಯಾಗಿಸಿಕೊಂಡ ನಿತೀಶ್ ಒಂದು ಓವರ್‌ನಲ್ಲಿ 21 ರನ್ ಕಲೆಹಾಕಿದರು.

ಈ ಓವರ್‌ನ ಎರಡನೇ ಬಾಲ್ ಅನ್ನು ನಿತೀಶ್ ರಿವರ್ಸ್ ರ್ಯಾಂಪ್ ಶಾಟ್ ಆಡಿ ಥರ್ಡ್ ಮ್ಯಾನ್ ಕಡೆಗೆ ಸಿಕ್ಸರ್ ಹೊಡೆದರು. ಸಾಮಾನ್ಯವಾಗಿ ಇಂತಹ ಶಾಟ್ ಟಿ20ಕ್ರಿಕೆಟ್​ನಲ್ಲಿ ಮಾತ್ರ ಕಂಡುಬರುತ್ತದೆ. ಆದರೆ ಟೆಸ್ಟ್​ನಲ್ಲಿ ಈ ಶಾಟ್ ಆಡುವ ಮೂಲಕ ರೆಡ್ಡಿ ತಮ್ಮ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಿದರು. ಬೋಲ್ಯಾಂಡ್ ಅವರ ಓವರ್‌ನಲ್ಲಿ ಅವರು 2 ಸಿಕ್ಸರ್ ಮತ್ತು 1 ಬೌಂಡರಿ ಬಾರಿಸಿದರು.

54 ಎಸೆತಗಳಲ್ಲಿ 42 ರನ್

ಈ ಪಂದ್ಯದಲ್ಲಿ ನಿತೀಶ್ ಕುಮಾರ್ ರೆಡ್ಡಿ 54 ಎಸೆತಗಳಲ್ಲಿ 42 ರನ್ ಗಳಿಸಿ ಅದ್ಭುತ ಇನ್ನಿಂಗ್ಸ್ ಆಡಿದರು. ಈ ಇನ್ನಿಂಗ್ಸ್‌ನಲ್ಲಿ ಅವರು 3 ಬೌಂಡರಿ ಮತ್ತು 3 ಸಿಕ್ಸರ್‌ಗಳನ್ನು ಬಾರಿಸಿದರು. ಅಷ್ಟೇ ಅಲ್ಲ ಭಾರತ ಪರ ಅತಿ ಹೆಚ್ಚು ರನ್ ಗಳಿಸಿದ ನಿತೀಶ್ ಸಂಕಷ್ಟದ ಸಂದರ್ಭಗಳಲ್ಲಿ ಕೊನೆಯವರೆಗೂ ತಂಡಕ್ಕೆ ಆಸರೆಯಾದರು. ಆದರೆ, ದೊಡ್ಡ ಶಾಟ್‌ ಬಾರಿಸುವ ಯತ್ನದಲ್ಲಿ ಔಟಾದರು.

ನಿತೀಶ್ ರೆಡ್ಡಿ ಇಲ್ಲಿಯವರೆಗೆ ಮೂರು ಟೆಸ್ಟ್ ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ ಮತ್ತು ಮೂರು ಬಾರಿ ಟೀಮ್ ಇಂಡಿಯಾಕ್ಕೆ ತಮ್ಮ ಬ್ಯಾಟಿಂಗ್ ಮೂಲಕ ನೆರವಾಗಿದ್ದಾರೆ. ನಿತೀಶ್ ರೆಡ್ಡಿ ಪರ್ತ್​ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ 41 ಮತ್ತು 38 ರನ್‌ಗಳ ಇನಿಂಗ್ಸ್‌ಗಳನ್ನು ಆಡಿದ್ದರು. ಈಗ ಅವರು 42 ರನ್ ಗಳಿಸಿದ್ದಾರೆ, ಇದು ಅವರ ಟೆಸ್ಟ್ ವೃತ್ತಿಜೀವನದ ಅತ್ಯುತ್ತಮ ಸ್ಕೋರ್ ಆಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Dec 06, 2024 03:45 PM