ವರ್ಷದ ಹಿಂದೆಯೇ ನಡೆದಿತ್ತು ನಿವೇದಿತಾ-ಚಂದನ್ ವಿಚ್ಛೇದನದ ಚರ್ಚೆ; ಹಿರಿಯವರು ಮಾತನಾಡಿದರೂ ಆಗಿಲ್ಲ ಪ್ರಯೋಜನ
ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಅವರು ಏಕಾಏಕಿ ವಿಚ್ಛೇದನ ಪಡೆದಿದ್ದು ಏಕೆ ಎನ್ನುವ ಪ್ರಶ್ನೆ ಅನೇಕರಲ್ಲಿ ಮೂಡಿತ್ತು. ಆದರೆ, ಇವರು ವಿಚ್ಛೇದನ ಪಡೆದಿದ್ದು ಏಕಾಏಕಿ ಅಲ್ಲವೇ ಅಲ್ಲ. ಇವರು ಬೇರೆ ಆಗುವ ಬಗ್ಗೆ ಒಂದು ವರ್ಷದ ಹಿಂದೆಯೇ ಚರ್ಚೆ ನಡೆದಿತ್ತು.
ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ (Chandan Shetty) ಅವರು ಏಕಾಏಕಿ ವಿಚ್ಛೇದನ ಪಡೆದಿದ್ದು ಏಕೆ ಎನ್ನುವ ಪ್ರಶ್ನೆ ಅನೇಕರಲ್ಲಿ ಮೂಡಿತ್ತು. ಆದರೆ, ಇವರು ವಿಚ್ಛೇದನ ಪಡೆದಿದ್ದು ಏಕಾಏಕಿ ಅಲ್ಲವೇ ಅಲ್ಲ. ಇವರು ಬೇರೆ ಆಗುವ ಬಗ್ಗೆ ಒಂದು ವರ್ಷದ ಹಿಂದೆಯೇ ಚರ್ಚೆ ನಡೆದಿತ್ತು. ಈ ಬಗ್ಗೆ ನಿವೇದಿತಾ ಹಾಗೂ ಚಂದನ್ ಅವರ ವಕೀಲೆ ಅನಿತಾ ಮಾತನಾಡಿದ್ದಾರೆ. ‘ಇದು ಏಕಾಏಕಿ ತೆಗೆದುಕೊಂಡ ನಿರ್ಧಾರ ಅಲ್ಲ. ವರ್ಷದ ಹಿಂದೆಯೇ ಈ ಬಗ್ಗೆ ಚರ್ಚೆ ನಡೆದಿತ್ತು. ಹಿರಿಯವರು ಮಾತನಾಡಿದರು. ಆದರೂ ಪ್ರಯೋಜನ ಆಗಿಲ್ಲ’ ಎಂದಿದ್ದಾರೆ ಅನಿತಾ. ಯಾವ ಕಾರಣಕ್ಕೆ ಇವರು ವಿಚ್ಛೇದನ ಪಡೆದರು ಎನ್ನುವ ಚರ್ಚೆ ಇದೆ. ಇದಕ್ಕೂ ಅವರು ಮಾತನಾಡಿದ್ದಾರೆ. ‘ಕನಸುಗಳನ್ನು ಬೆನ್ನತ್ತಲು ಕೆಲವು ತ್ಯಾಗ ಮಾಡಲೇಬೇಕು’ ಎಂದಿದ್ದಾರೆ ಅವರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.