Who would be CM? ಶಾಸಕಾಂಗ ಸಭೆಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ನಿರ್ದಿಷ್ಟವಾಗಿ ಯಾವುದೇ ಸಮುದಾಯದಿಂದ ಕೂಗು ಕೇಳಿ ಬರಲಿಲ್ಲ: ಪ್ರಿಯಾಂಕ್ ಖರ್ಗೆ

|

Updated on: May 15, 2023 | 12:30 PM

ಒಳ್ಳೆಯ ನಾಯಕತ್ವ ಮತ್ತು ಆಡಳಿತ ನೀಡಬೇಕೆನ್ನುವುದು ಮಾತ್ರ ಕಾಂಗ್ರೆಸ್ ಪಕ್ಷದ ಗುರಿಯಾಗಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ಬೆಂಗಳೂರು: ನಿನ್ನೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಏನೆಲ್ಲ ನಡೆಯಿತು ಅಂತ ಚುನಾವನೆಯಲ್ಲಿ ಗೆದ್ದ ಯಾವುದೇ ಅಭ್ಯರ್ಥಿ ಬಾಯಿ ಬಿಡುತ್ತಿಲ್ಲ. ಚಿತಾಪೂರ (Chitapur) ಕ್ಷೇತ್ರದಿಂದ ಆಯ್ಕೆಯಾಗಿರುವ ಪ್ರಿಯಾಂಕ್ ಖರ್ಗೆ (Priyank Kharge) ಸಹ ಗುಟ್ಟು ಬಿಟ್ಟುಕೊಡಲಿಲ್ಲ. ನಿನ್ನೆ ಕೇವಲ ಅಭಿಪ್ರಾಯ ಸಂಗ್ರಹಣೆ ಮಾತ್ರ ನಡೆದಿದೆ, ವೀಕ್ಷಕರು (observers) ದೆಹಲಿಗೆ ವಾಪಸ್ಸು ಹೋಗಿ ಹೈಕಮಾಂಡ್ ಗೆ ಅಭಿಪ್ರಾಯಗಳನ್ನು ನೀಡುತ್ತಾರೆ, ಅಂತಿಮ ನಿರ್ಣಯ ಹೈಕಮಾಂಡ್ ತೆಗೆದುಕೊಳ್ಳುತ್ತದೆ ಮತ್ತು ಎಲ್ಲರೂ ಆದಕ್ಕೆ ಬದ್ಧರಾಗಿರುತ್ತಾರೆ ಎಂದು ಖರ್ಗೆ ಹೇಳಿದರು. ಯಾವುದೇ ನಿರ್ದಿಷ್ಟ ಸಮುದಾಯದಿಂದ ಸಭೆಯಲ್ಲಿ ಕೂಗು ಕೇಳಿಬರಲಿಲ್ಲ, ಒಳ್ಳೆಯ ನಾಯಕತ್ವ ಮತ್ತು ಆಡಳಿತ ನೀಡಬೇಕೆನ್ನುವುದು ಮಾತ್ರ ಕಾಂಗ್ರೆಸ್ ಪಕ್ಷದ ಗುರಿಯಾಗಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ