ತುಮಕೂರು ಜಿಲ್ಲೆಯ ಯಾವುದೇ ತಾಲೂಕಿನ ಬಗ್ಗೆ ತಾರತಮ್ಯವಿಲ್ಲ, ಎಲ್ಲ ಭಾಗಗಳಿಗೂ ನೀರು ಕೊಡುತ್ತೇವೆ: ಶಿವಕುಮಾರ್

ಅರುಣ್​ ಕುಮಾರ್​ ಬೆಳ್ಳಿ

Updated on: Jul 05, 2025 | 3:09 PM

ಡಿಕೆ ಶಿವಕುಮಾರ್ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿಯವರನ್ನು ಕುರಿತಂತೆ ಪ್ರಶ್ನೆ ಕೇಳಿದಾಗ ಅದನ್ನು ಅವಾಯ್ಡ್ ಮಾಡುವ ಪ್ರಯತ್ನ ಮಾಡುತ್ತಾರೆ. ಕುಮಾರಸ್ವಾಮಿ ನಿನ್ನೆ ಮಂಡ್ಯದಲ್ಲಿ ನಡೆಸಿದ ದಿಶಾ ಮೀಟಿಂಗ್​ನಲ್ಲಿ ಕಾಂಗ್ರೆಸ್ ಶಾಸಕರು ಭಾಗಿಯಾಗಿಲ್ಲ ಅಂತ ಹೇಳಿದ್ದಾರೆ ಅಂದಾಗ ಶಿವಕುಮಾರ್, ಒಂದೆರಡು ಕ್ಷಣ ಯೋಚಿಸಿ ಆಮೇಲೆ ಮಾತಾಡೋಣ ಅಂತ ಅಲ್ಲಿಂದ ಹೊರಡುತ್ತಾರೆ.

ಬೆಂಗಳೂರು, ಜುಲೈ 5: ಶುಕ್ರವಾರ ನಡೆದ ಸಭೆಯಲ್ಲಿ ಕೇಂದ್ರ ಸಚಿವ ವಿ ಸೋಮಣ್ಣ (V Somanna) ಅವರು ಇಂಡಿಯನ್ ಇನ್​ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ವಿಜ್ಞಾನಿಗಳ ಜೊತೆ ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿ ನಡೆಯುತ್ತಿರುವ ಸ್ಥಳ ಭೇಟಿ ನೀಡುವಂತೆ ಹೇಳಿದ್ದಾರೆ, ಆ ಕೆಲಸ ಮಾಡೋದಾಗಿ ನೀರಾವರಿ ಸಚಿವ ಡಿಕೆ ಶಿವಕುಮಾರ್ ಹೇಳಿದರು. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಲಿಂಕ್ ಕೆನಾಲ್ ಯೋಜನೆಯನ್ನು ತಾನೇ ಶುರುಮಾಡಿದ್ದು, ಆದರೆ ನಂತರ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಯೋಜನೆಯನ್ನು ನಿಲ್ಲಿಸಿತ್ತು, ಈಗ ಕಾಮಗಾರಿಯನ್ನು ಪುನರಾರಂಭಿಸಿದ್ದೇವೆ ಎಂದು ಹೇಳಿದ ಶಿವಕುಮಾರ್, ತುಮಕೂರು ಜಿಲ್ಲೆಯ ಯಾವುದೇ ತಾಲೂಕಿನ ಬಗ್ಗೆ ತನಗೆ ತಾರತಮ್ಯವಿಲ್ಲ, ಎಲ್ಲ ಭಾಗಗಳಿಗೂ ಸಾಧ್ಯವಿರುವಷ್ಟು ನೀರನ್ನು ಕೊಡುತ್ತೇವೆ ಎಂದರು.

ಇದನ್ನೂ ಓದಿ:   ಸಂಬಂಧದಲ್ಲಿ ಶಿವಕುಮಾರ್ ಷಡ್ಡಕರಾಗಿರುವ ರಂಗನಾಥ್​ಗೆ ನೀರು ಪಡೆಯಲು ಕಷ್ಟವಾಗಬಾರದು: ಸುರೇಶ್ ಗೌಡ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.