Who would be CM? ಸಿದ್ದರಾಮಯ್ಯ ಮತ್ತು ಶಿವಕುಮಾರ್ ನಡುವೆ ಮನಸ್ತಾಪವಿಲ್ಲ, ಸೌಹಾರ್ದಯುತ ಬಾಂಧವ್ಯವಿದೆ: ರಂದೀಪ್ ಸುರ್ಜೆವಾಲಾ
ಎಐಸಿಸಿ ಕಚೇರಿ ಅವರಣದಲ್ಲಿ ಪರಸ್ಪರ ಮುಖಾಮುಖಿಯಾಗಿ ನಿಂತು ತಾವಿಬ್ಬರೂ ಮುಖ್ಯಮಂತ್ರಿ ಹುದ್ದೆಯ ಅಕಾಂಕ್ಷಿಗಳು ಅಂತ ಹೇಳಿದ್ದರು ಅಂತ ಸುರ್ಜೆವಾಲಾ ಹೇಳಿದರು.
ದೆಹಲಿ: ರಾಷ್ಟ್ರದ ರಾಜಧಾನಿಯಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಎಐಸಿಸಿಯ ಕರ್ನಾಟಕ ಉಸ್ತುವಾರಿ ರಂದೀಪ್ ಸಿಂಗ್ ಸುರ್ಜೆವಾಲಾ (Randeep Surjewala), ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar ) ಮತ್ತು ಸಿದ್ದರಾಮಯ್ಯ (Siddaramaiah) ನಡುವೆ ಯಾವುದೇ ತೆರನಾದ ಮನಸ್ತಾಪ ಮತ್ತು ವೈಮನಸ್ಸು ಇಲ್ಲ ಅಂತ ಹೇಳಿ ನಿನ್ನೆ ಬೆಂಗಳೂರಿನ ಖಾಸಗಿ ಹೋಟೆಲೊಂದರಲ್ಲಿ ಬರ್ತ್ ಡೇ ಕೇಕ್ ಮಾಡಿದ ಶಿವಕುಮಾರ್ ಒಂದು ತುಂಡನ್ನು ಸಿದ್ದರಾಮಯ್ಯನವರ ಬಾಯಿಗಿಡುತ್ತಿರುವ ಫೋಟೋಗಳನ್ನು ಪತ್ರಕರ್ತರಿಗೆ ತೋರಿಸಿದರು. ಅವರ ನಡುವೆ ಅತ್ಯುತ್ತಮ ಬಾಂಧವ್ಯ ಮತ್ತು ಸೌಹಾರ್ದತೆ ಇದೆ, ಮನಸ್ತಾಪ ಇದೆ ಅನ್ನೋದು ಮಾಧ್ಯಮಗಳ ಸೃಷ್ಟಿ ಎಂದು ಸುರ್ಜೆವಾಲಾ ಹೇಳಿದರು. ಮುಖ್ಯಮಂತ್ರಿಯಾಗುವ ಆಸೆ ಇಟ್ಟುಕೊಳ್ಳೋದು ತಪ್ಪಲ್ಲ, ಮತ್ತು ಎಐಸಿಸಿ ಕಚೇರಿ ಅವರಣದಲ್ಲಿ ಪರಸ್ಪರ ಮುಖಾಮುಖಿಯಾಗಿ ನಿಂತು ತಾವಿಬ್ಬರೂ ಮುಖ್ಯಮಂತ್ರಿ ಹುದ್ದೆಯ ಅಕಾಂಕ್ಷಿಗಳು ಅಂತ ಹೇಳಿದ್ದರು ಅಂತ ಸುರ್ಜೆವಾಲಾ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ