Tecno Camon 20 5G: ಬಜೆಟ್ ದರದ ಫೋನ್ ಪ್ರಿಯರಿಗೆ ನೆಚ್ಚಿನ ಆಯ್ಕೆ ಟೆಕ್ನೋ ಫೋನ್
ಇತ್ತೀಚಿನ ದಿನಗಳಲ್ಲಿ ಕ್ಯಾಮೆರಾ ಮತ್ತು ಅಧಿಕ ಬ್ಯಾಟರಿ ಬಾಳಿಕೆಗೆ ಜನರು ಹೆಚ್ಚಿನ ಒತ್ತು ನೀಡುತ್ತಾರೆ. ಚೀನಾ ಮೂಲದ ಟೆಕ್ನೋ ಕಂಪನಿ, ಭಾರತ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಬಜೆಟ್ ದರಕ್ಕೆ ವಿವಿಧ ಫೋನ್ಗಳನ್ನು ಬಿಡುಗಡೆ ಮಾಡುತ್ತಿದೆ.
ಗ್ಯಾಜೆಟ್ ಮಾರುಕಟ್ಟೆಯಲ್ಲಿ ಹೊಸ ಫೋನ್ಗಳಿಗೆ ಬರವಿಲ್ಲ. ಅದರಲ್ಲೂ, ವಿವಿಧ ಬ್ರ್ಯಾಂಡ್ಗಳ ಹತ್ತು ಹಲವು ಮಾದರಿಗಳು ಮಾರುಕಟ್ಟೆ ಪ್ರವೇಶಿಸುವಾಗ ಜನರ ಬೇಡಿಕೆ ಮತ್ತು ಅಗತ್ಯಕ್ಕೆ ತಕ್ಕಂತೆ, ಆಕರ್ಷಕ ಆವೃತ್ತಿಗಳು ರೂಪುತಾಳುತ್ತವೆ. ಇತ್ತೀಚಿನ ದಿನಗಳಲ್ಲಿ ಕ್ಯಾಮೆರಾ ಮತ್ತು ಅಧಿಕ ಬ್ಯಾಟರಿ ಬಾಳಿಕೆಗೆ ಜನರು ಹೆಚ್ಚಿನ ಒತ್ತು ನೀಡುತ್ತಾರೆ. ಚೀನಾ ಮೂಲದ ಟೆಕ್ನೋ ಕಂಪನಿ, ಭಾರತ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಬಜೆಟ್ ದರಕ್ಕೆ ವಿವಿಧ ಫೋನ್ಗಳನ್ನು ಬಿಡುಗಡೆ ಮಾಡುತ್ತಿದೆ. ಕಡಿಮೆ ದರಕ್ಕೆ ಉತ್ತಮ ಫೀಚರ್ ನೀಡುವುದರಿಂದ ಮಾರುಕಟ್ಟೆಯಲ್ಲೂ ಟೆಕ್ನೋ ಅಧಿಕ ಬೇಡಿಕೆ ಉಳಿಸಿಕೊಂಡಿದೆ. ಟೆಕ್ನೋ ನೂತನ ಸರಣಿಯಲ್ಲಿ ಹೊಸ ಕ್ಯಾಮನ್ 20 5G ಫೋನ್ ಬಿಡುಗಡೆಯಾಗಿದೆ. ನೂತನ ಫೋನ್ ವೈಶಿಷ್ಟ್ಯಗಳ ವಿವರ ಇಲ್ಲಿದೆ. 8GB RAM + 512 GB ಸ್ಟೋರೇಜ್ ಆವೃತ್ತಿಯಲ್ಲಿ ಟೆಕ್ನೋ ಫೋನ್ ಲಭ್ಯವಾಗಲಿದೆ. ಹಿಂಭಾಗದಲ್ಲಿ 108 ಮೆಗಾಪಿಕ್ಸೆಲ್ ಕ್ಯಾಮೆರಾ ಜತೆಗೆ 50 MP+ 2 MP ಕ್ಯಾಮೆರಾ ಇದ್ದು, 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ. ಟೆಕ್ನೋ ಕ್ಯಾಮನ್ 20 5G
5,000mAh ಬ್ಯಾಟರಿ ಮತ್ತು 44W ಫಾಸ್ಟ್ ಚಾರ್ಜಿಂಗ್ ಬೆಂಬಲವಿದೆ. ಜತೆಗೆ ಆಕರ್ಷಕ ವಿನ್ಯಾಸದ ಮೂಲಕ ಟೆಕ್ನೋ ಪೋನ್ ಜನರ ಗಮನ ಸೆಳೆಯುತ್ತಿದೆ.