Facebook: ಫೇಸ್‌ಬುಕ್‌ನಲ್ಲಿ ಅಟೊಮೆಟಿಕ್ ಆಗಿ ಸೆಂಡ್ ಆಗುತ್ತಿದೆ ಫ್ರೆಂಡ್ ರಿಕ್ವೆಸ್ಟ್: ಬಳಕೆದಾರರಿಂದ ದೂರು
ಫೇಸ್‌ಬುಕ್‌ನಲ್ಲಿ ಒಬ್ಬರ ಪ್ರೊಫೈಲ್ ಅನ್ನು ವೀಕ್ಷಿಸಲು ಅವರ ಖಾತೆಗೆ ತೆರಳಿದ ಸಂದರ್ಭ ಯಾವುದೇ ಸೂಚನೆ ನೀಡದೆ ಫ್ರೆಂಡ್ ರಿಕ್ವೆಸ್ಟ್ ಸೆಂಡ್ ಆಗುತ್ತಿದೆ. ಇದೀಗ ಫೇಸ್ಬುಕ್ನ ಪ್ರೈವಸಿ ವಿಚಾರವಾಗಿ ಅನೇಕರು ಮಾತನಾಡಿಕೊಳ್ಳುತ್ತಿದ್ದಾರೆ.
ಮೆಟಾ (Meta) ಒಡೆತನದ ಪ್ರಸಿದ್ಧ ಸಾಮಾಜಿಕ ಜಾಲತಾಣ ಫೇಸ್ಬುಕ್ ಅನ್ನು ಬಳಸುವವರ ಸಂಖ್ಯೆ ಇಂದು 2.85 ಬಿಲಿಯನ್ ದಾಟಿದೆ. ಭಾರತದಲ್ಲೇ ಸುಮಾರು 314 ಮಿಲಿಯನ್ ಜನರು ಖಾತೆ ಹೊಂದಿದ್ದಾರೆ. ಕೇವಲ ಮೆಸೇಜ್, ಫೋಟೋ, ವಿಡಿಯೋ ಹಂಚಿಕೊಳ್ಳಲು ಮಾತ್ರವಲ್ಲದೆ ಫೇಸ್ಬುಕ್ (Facebook) ಇಂದು ದೊಡ್ಡ ಮಾರ್ಕೆಟೆಂಗ್ ತಾಣವಾಗಿ ಮಾರ್ಪಾಡಾಗಿದೆ. ಹೀಗೆ ಸಾಕಷ್ಟು ಬಳಕೆದಾರರನ್ನು ಹೊಂದಿರುವ ಫೇಸ್‌ಬುಕ್‌ನಲ್ಲಿ ಇದೀಗ ತೊಂದರೆ ಕಾಣಿಸಿಕೊಂಡಿದ್ದು, ಅಟೊಮೆಟಿಕ್ ಆಗಿ ಫ್ರೆಂಡ್ ರಿಕ್ವೆಸ್ಟ್ ಸೆಂಡ್ ಆಗುತ್ತಿದೆಯಂತೆ. ಈ ಬಗ್ಗೆ ಟ್ವಿಟ್ಟರ್ನಲ್ಲಿ (Twitter) ಅನೇಕ ಎಫ್ಬಿ ಬಳಕೆದಾರರು ದೂರುತ್ತಿದ್ದಾರೆ.
ಒಬ್ಬರ ಪ್ರೊಫೈಲ್ ಅನ್ನು ವೀಕ್ಷಿಸಲು ಅವರ ಖಾತೆಗೆ ತೆರಳಿದ ಸಂದರ್ಭ ಯಾವುದೇ ಸೂಚನೆ ನೀಡದೆ ಫ್ರೆಂಡ್ ರಿಕ್ವೆಸ್ಟ್ ಸೆಂಡ್ ಆಗುತ್ತಿದೆ. ಇದೀಗ ಫೇಸ್ಬುಕ್ನ ಪ್ರೈವಸಿ ವಿಚಾರವಾಗಿ ಅನೇಕರು ಮಾತನಾಡಿಕೊಳ್ಳುತ್ತಿದ್ದಾರೆ. ಸದ್ಯಕ್ಕೆ ಈ ಸಮಸ್ಯೆ ಬಾಂಗ್ಲಾದೇಶ, ಪಿಲಿಪೈನ್ಸ್ ಹಾಗೂ ಶ್ರೀಲಂಕಾದಲ್ಲಿ ಕಾಣಿಸಿಕೊಂಡಿದೆ. ಈ ತೊಂದರೆ ತನ್ನ ಗಮನಕ್ಕೆ ಬಂದ ತಕ್ಷಣ ಮೆಟಾ ಬಳಕೆದಾರರಲ್ಲಿ ಕ್ಷಮೆಯಾಚಿಸಿದೆ.
Redmi A2: ಮೇ 19ರ ಒಂದೇ ದಿನ ಎರಡು ಹೊಸ ಫೋನ್ ಬಿಡುಗಡೆ ಮಾಡಲಿದೆ ರೆಡ್ಮಿ
ಈ ಬಗ್ಗೆ ಬರೆದುಕೊಂಡಿರುವ ಮೆಟಾ, ”ಫೇಸ್ಬುಕ್ ಇತ್ತೀಚಿನ ಅಪ್ಡೇಟ್ನಲ್ಲಿ ಕೆಲವು ದೋಷಗಳು ಕಂಡುಬಂದಿದೆ. ಇದರಿಂದ ಅಟೊಮೆಟಿಕ್ ಆಗಿ ಫ್ರೆಂಡ್ ರಿಕ್ವೆಸ್ಟ್ ಸೆಂಡ್ ಆಗುತ್ತಿತ್ತು. ಈ ಸಮಸ್ಯೆ ಈಗ ಬಗೆ ಹರಿದಿದೆ. ಬಳಕೆದಾರರಿಗೆ ಉಂಟಾದ ಅನಾನುಕೂಲತೆಗಾಗಿ ನಾವು ಕ್ಷಮೆಯಾಚಿಸುತ್ತೇವೆ,” ಎಂದು ಮೆಟಾ ಹೇಳಿದೆ.
ಮೆಟಾ ಆದಾಯ ಹೆಚ್ಚಳ:
ಸತತ ಮೂರು ತ್ರೈಮಾಸಿಕ ಅವಧಿಯಲ್ಲಿ ಆದಾಯ ಇಳಿಮುಖ ಕಾಣುತ್ತಾ ನಿರಾಸೆ ಹೊಂದಿದ್ದ ಮೆಟಾ ಪ್ಲಾಟ್ಫಾರ್ಮ್ಸ್ ಸಂಸ್ಥೆ ಈ ಕ್ಯಾಲೆಂಡರ್ ವರ್ಷದ ಮೊದಲ ಕ್ವಾರ್ಟರ್ನಲ್ಲಿ ಅದ್ವಿತೀಯ ಆದಾಯ ಗಳಿಸಿರುವುದು ವರದಿಯಾಗಿದೆ. ವಾಟ್ಸ್ಆ್ಯಪ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ನ ಮಾಲೀಕ ಸಂಸ್ಥೆ ಮೆಟಾ ಪ್ಲಾಟ್ಫಾರ್ಮ್ಸ್ನ ಆದಾಯ 2023 ಜನವರಿಯಿಂದ ಮಾರ್ಚ್ವರೆಗಿನ ಅವಧಿಯಲ್ಲಿ 28.6 ಬಿಲಿಯನ್ ಡಾಲರ್ (ಸುಮಾರು 2.33 ಲಕ್ಷ ಕೋಟಿ ರೂ) ಇದೆ. ಹಿಂದಿನ ವರ್ಷದ ಇದೇ ಅವಧಿಗಿಂತ ಆದಾಯದಲ್ಲಿ ಹೆಚ್ಚಳವಾಗಿರುವುದು ಕೇವಲ ಶೇ. 3 ಮಾತ್ರ. ಆದರೆ, ಇದು ಷೇರುಪೇಟೆ ನುರಿತರು ಅಂದಾಜು ಮಾಡಿದ್ದಕ್ಕಿಂತ ಉತ್ತಮವಾಗಿದೆ.
ಹಣ ಕೊಟ್ಟು ಬ್ಲೂ ಟಿಕ್ ಪಡೆಯುವ ಆಯ್ಕೆ:
ಹಣ ಕೊಟ್ಟು ಬ್ಲೂ ಟಿಕ್ ಪಡೆದುಕೊಳ್ಳಿ ಎಂಬ ನಿಯಮವನ್ನು ಮೆಟಾ ಕಂಪನಿಯೂ ಪ್ರಾರಂಭಿಸಿದೆ. ಟ್ವಿಟರ್ ಅನ್ನೇ ಅನುಸರಿಸಿರುವ ಮೆಟಾ ಈಗ ಹಣ ಪಾವತಿ ಮಾಡಿದರೆ ಬ್ಲೂ ಟಿಕ್ ನೀಡುವ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಮೆಟಾ ಪ್ರಸ್ತುತ ಯುನೈಟೆಡ್ ಸ್ಟೇಟ್ನಲ್ಲಿ ಈ ಸೇವೆಗಳನ್ನು ಹೊರತಂದಿದೆ. ನೀವು ವೆಬ್‌ನಲ್ಲಿ ಸೈನ್ ಅಪ್ ಮಾಡಿದರೆ ತಿಂಗಳಿಗೆ $11.99 (989 ರೂ.) ನಿಗದಿ ಮಾಡಲಾಗಿದೆ. ಅದೇ ಮೊಬೈಲ್ ಆ್ಯಪ್ ಸ್ಟೋರ್ ಮೂಲಕ ಸೈನ್ ಅಪ್ ಮಾಡಿದರೆ $14.99 (1237 ರೂ.) ಇದೆ. ನೀವು ವೆಬ್‌ನಲ್ಲಿ ಸೈನ್ ಅಪ್ ಮಾಡಿದರೆ ಬ್ಲೂ ಟಿಕ್ ಅನ್ನು ಫೇಸ್‌ಬುಕ್‌ನಲ್ಲಿ ಮಾತ್ರ ಸ್ವೀಕರಿಸುತ್ತೀರಿ. ಆ್ಯಪ್ ಸ್ಟೋರ್ ಆಯ್ಕೆಯು ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ಎರಡಕ್ಕೂ ವೆರಿಫೈ ಅನ್ನು ಒಳಗೊಂಡಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ