ಚಿತ್ರದುರ್ಗದಲ್ಲಿ ವಿದ್ಯಾರ್ಥಿನಿಯರಿಗಿಲ್ಲ ಸುರಕ್ಷತೆ? ಯುವಕನ ಪುಂಡಾಟ, ವಿಡಿಯೋ ವೈರಲ್
ಯುವಕನ ಪುಂಡಾಟ ಕಂಡು ವಿದ್ಯಾರ್ಥಿನಿಯರು ಹೆದರಿ ಓಡಿಹೋಗಿರುವಂತಹ ಘಟನೆ ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರಿನಲ್ಲಿ ನಡೆದಿದೆ. ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿನಿಯರ ಬೆನ್ನುಬಿದ್ದು ಯುವಕನೋರ್ವ ಕಾಟ ನೀಡುತ್ತಿರುವಂತಹ ವಿಡಿಯೋ ವೈರಲ್ ಆಗಿದೆ. ಪುಂಡು ಪೋಕರಿಗಳ ಹಾವಳಿ ನಿಯಂತ್ರಿಸುವಂತೆ ಜಿಲ್ಲಾಡಳಿತ, ಪೊಲೀಸ್ ಇಲಾಖೆಗೆ ಮಹಿಳಾಪರ ಹೋರಾಟಗಾರರು ಆಗ್ರಹಿಸಿದ್ದಾರೆ.
ಚಿತ್ರದುರ್ಗ, ಜೂನ್ 29: ಜಿಲ್ಲೆಯ ಮೊಳಕಾಲ್ಮೂರಿನಲ್ಲಿ (Molakalmuru) ಪುಂಡು ಪೋಕರಿಗಳ ಹಾವಳಿ ಹೆಚ್ಚಾಗಿದ್ದು, ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿನಿಯರ (girl students) ಬೆನ್ನುಬಿದ್ದು ಕಿರುಕುಳ ನೀಡುತ್ತಿರುವಂತಹ ಘಟನೆ ಮೊಳಕಾಲ್ಮೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೊಳಕಾಲ್ಮೂರು ಹೊರವಲಯದಲ್ಲಿ ಹಾಸ್ಟೆಲ್ಗಳಿವೆ. ಹಾಸ್ಟೆಲ್ನಿಂದ ಶಾಲಾ ಕಾಲೇಜಿಗೆ ವಿದ್ಯಾರ್ಥಿನಿಯರಿಗೆ ನಿರಂತರ ಕಾಟಕೊಡಲಾಗುತ್ತಿದೆ. ಬೈಕ್ನಲ್ಲಿ ವಿದ್ಯಾರ್ಥಿನಿಯರ ಬೆನ್ನುಬಿದ್ದ ಪುಂಡನ ವಿಡಿಯೋ ಇದೀಗ ವೈರಲ್ ಆಗಿದೆ. ಯುವಕನ ಪುಂಡಾಟ ಕಂಡು ವಿದ್ಯಾರ್ಥಿನಿಯರು ಹೆದರಿ ಓಡಿಹೋಗಿದ್ದಾರೆ. ಪುಂಡು ಪೋಕರಿಗಳ ಹಾವಳಿ ನಿಯಂತ್ರಿಸುವಂತೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗೆ ಸ್ಥಳೀಯರು, ಮಹಿಳಾಪರ ಹೋರಾಟಗಾರರ ಆಗ್ರಹಿಸಿದ್ದಾರೆ. ವಿಡಿಯೋ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
ಒಂದೇ ತಿಂಗಳಲ್ಲಿ ಮಾದಪ್ಪನ ಹುಂಡಿಯಲ್ಲಿ ಜಮೆಯಾಯ್ತು 2 ಕೋಟಿ ರೂ. ಕಾಣಿಕೆ!
ನೀರಿನಲ್ಲಿ ಕೊಚ್ಚಿಹೋಗುತ್ತಿದ್ದ ಕಾರು: 4 ಮಂದಿ ಯುವಕರ ಸಾಹಸಮಯ ರಕ್ಷಣೆ
ನೀವಿರುವಲ್ಲೇ ಇ ಖಾತಾ ಪಡೆಯಲು ಏನು ಮಾಡಬೇಕು? ಇಲ್ಲಿದೆ ಮಾಹಿತಿ
ದೇವರಿಗೆ ಹಾಡು ಹಾಡಿ ಪ್ರಾರ್ಥಿಸಿದ ಕಿರಣ್ ಶಾಸ್ತ್ರಿ; ಬೀಳಲಿಲ್ಲ ಹೂವು

