ಚಾಯ್ ಪೇ ಚರ್ಚಾದ ಹಾಗೆ ಕಾಫೀ ಹೀರುತ್ತಾ ನಾವು ಚರ್ಚಿಸಿದರೆ ತಪ್ಪೇನು? ಜಿ ಪರಮೇಶ್ವರ್

|

Updated on: Oct 08, 2024 | 12:49 PM

ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ರಾಜೀನಾಮೆ ಸಲ್ಲಿಸುವ ಅವಶ್ಯಕತೆಯಿಲ್ಲವೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ, ಹೈಕಮಾಂಡ್ ಸಿಎಂ ಮಾತನ್ನು ಅಂಗೀಕರಿಸಿದೆ ಮತ್ತು ರಾಜ್ಯ ಸಚಿವ ಸಂಪುಟ ಸಹ ಅವರ ಮಾತನ್ನು ಅನುಮೋದಿಸಿದೆ ಎಂದು ಪರಮೇಶ್ವರ್ ಹೇಳಿದರು.

ಬೆಂಗಳೂರು: ಬಿಜೆಪಿಯವರು ಚಾಯ್ ಪೇ ಚರ್ಚಾ ಮಾಡಿದ ಹಾಗೆ ಕಾಂಗ್ರೆಸ್ ನಾಯಕರು ಕಾಫಿ ಹೀರುತ್ತಾ ಮುಖ್ಯಮಂತ್ರಿಯ ಬಗ್ಗೆ ಚರ್ಚೆ ಮಾಡಿದರೆ ಅದರಲ್ಲಿ ತಪ್ಪೇನು ಬಂತು ಎಂದು ಗೃಹಸಚಿವ ಜಿ ಪರಮೇಶ್ವರ್ ಹೇಳಿದರು. ನಗರದಲ್ಲಿ ಅವರು ಮಾಧ್ಯಮ ಪ್ರತಿನಿಧಿಗಳು ರಾಜ್ಯ ಕಾಂಗ್ರೆಸ್ ದಲಿತ ನಾಯಕರು ಪದೇಪದೆ ಪಕ್ಷದ ವರಿಷ್ಠರನ್ನು ಭೇಟಿಯಾಗುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಸಚಿವರು ಹಾಗೆ ಉತ್ತರಿಸಿದರು. ಮುಖ್ಯಮಂತ್ರಿ ಬದಲಾವಣೆ ಮಾತನ್ನು ಅವರು ತಳ್ಳಿ ಹಾಕಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಬೆಂಗಳೂರಿನಲ್ಲಿ ಪಾಕಿಸ್ತಾನ ಪ್ರಜೆ ಪತ್ತೆ: ಕೇಂದ್ರ ಗುಪ್ತಚರ ಇಲಾಖೆ ವಿಫಲವಾಗಿದೆ ಎಂದ ಪರಮೇಶ್ವರ್

Follow us on