ಜೈಲಿನ ವಿಐಪಿ ಸೆಲ್ ಅನ್ನೋದಿಲ್ಲ, ರಾಜಕೀಯ ಒತ್ತಡಗಳಿಗೆ ನಾನು ಮಣಿಯಲ್ಲ: ಟಿಪಿ ಶೇಷ, ಡಿಐಜಿ
ದರ್ಶನ್ ಅವರು ತಮ್ಮ ಸೆಲ್ ನಲ್ಲಿ ಟಿವಿಯ ವ್ಯವಸ್ಥೆ ಕೇಳಿದರೆ ತಪ್ಪೇನಿಲ್ಲ, ಕೈದಿಗಳ ಸೆಲ್ ಗಳಿಗೆ ಟಿವಿ ಒದಗಿಸುವ ಅವಕಾಶವಿದೆ ಮತ್ತು ಕೆಲ ಕೈದಿಗಳಿಗೆ ಅದನ್ನು ಒದಗಿಸಲಾಗಿದೆ, ಅದಕ್ಕಾಗಿ ನ್ಯಾಯಾಲಯದ ಅನುಮತಿ ಬೇಕಿಲ್ಲ, ಸದ್ಯಕ್ಕಂತೂ ದರ್ಶನ್ ಟಿವಿ ಬೇಕೆಂದು ಕೇಳಿಲ್ಲ ಎಂದು ಡಿಐಜಿ ಟಿಪಿ ಶೇಷ ಹೇಳಿದರು.
ಬಳ್ಳಾರಿ: ನಟ ದರ್ಶನ್ ರನ್ನು ಇರಿಸಿರುವ ಜೈಲಿನ ವೀಕ್ಷಣೆ ಮಾಡಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಉತ್ತರ ವಲಯದ ಡಿಐಜಿ ಟಿಪಿ ಶೇಷ ಅವರು ಕೇಳಿದ ಪ್ರಶ್ನೆಗಳಿಗೆ ನೇರ ಮತ್ತು ಸ್ಪಷ್ಟ ಉತ್ತರಗಳನ್ನು ನೀಡಿದರು. ಜೈಲಿನಲ್ಲಿ ವಿಐಪಿ ಸೆಲ್ ಅಂತ ಇಲ್ಲವೇ ಇಲ್ಲ, ಹೈ ಸೆಕ್ಯೂರಿಟಿ ಸೆಲ್ ಅಂತ ಕರೆಯಬಹುದು, ದರ್ಶನ್ ಇರುವ ಸೆಲ್ ಗೆ ಗ್ಯಾಜೆಟ್ ಗಳ ಮೂಲಕ ಹೆಚ್ಚಿನ ಭದ್ರತೆ ಒದಗಿಸಲಾಗಿದೆ ಎಂದು ಹೇಳಿದ ಅವರು, ಅಧಿಕಾರಿಗಳ ಮೇಲೆ ಯಾವುದೇ ರೀತಿಯ ಒತ್ತಡವಿಲ್ಲ, ಕಾನೂನು ಎಲ್ಲರಿಗೂ ಒಂದೇ, ರಾಜಕೀಯ ಒತ್ತಡಗಳಿಗೆ ಮಣಿಯುವ ಜಾಯಮಾನ ತನ್ನದಲ್ಲ ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ದರ್ಶನ್ರನ್ನು ಐಸೋಲೇಟ್ ಮಾಡಿ ಪ್ರತ್ಯೇಕ ಸೆಲ್ ನಲ್ಲಿ ಇರಿಸಲಾಗಿದೆ: ಟಿಪಿ ಶೇಷ, ಡಿಐಜಿ