ನೆಲಮಂಗಲದ ಬಿಐಇಸಿಯಲ್ಲಿ ಪ್ರವಾಸ್ 4.0 ಕಾರ್ಯಕ್ರಮ, ಮೈಲಿಗಟ್ಟಲೆ ಟ್ರಾಫಿಕ್ ಜಾಮ್
ಬೆಂಗಳೂರಿನ ಎಂಟನೇ ಮೈಲಿಯಿಂದ ನೆಲಮಂಗಲದವರೆಗೆ ಟ್ರಾಫಿಕ್ ಜಾಮ್ ಆಗಿದೆ. ರಸ್ತೆಯಲ್ಲಿ ಮೈಲುಗಟ್ಟಲೆ ಕಾರು, ಲಾರಿ, ದ್ವಿಚಕ್ರವಾಹನಗಳನ್ನು ನಿಶ್ಚಲ ಸ್ಥಿತಿಯಲ್ಲಿ ಇಲ್ಲವೇ ಆಮೆಗತಿಯಲ್ಲಿ ಸಾಗುತ್ತಿರುವುದನ್ನು ನೋಡಬಹುದು. ನೆಲಮಂಗಲದ ಡಿವೈಎಸ್ಪಿ ಜಗದೀಶ್ ಹೆದ್ದಾರಿಯಲ್ಲಿನ ಬ್ಯಾರಿಕೇಡ್ ಗಳನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟ ಬಳಿಕ ದಟ್ಟಣೆ ಕಡಿಮೆಯಾಯಿತು
ಬೆಂಗಳೂರು: ನೆಲಮಂಗಲದ ಬಳಿ ಮಾದವಾರದಲ್ಲಿರುವ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಭರತ್ ಬಸ್ ಮತ್ತು ಕಾರು ಉತ್ಪಾದಕರ ಒಕ್ಕೂಟದಿಂದ ಪ್ರವಾಸ್ 4.0 ಕಾರ್ಯಕ್ರಮ ಆಯೋಜಿಲಾಗಿದ್ದು ಇವತ್ತು ಕಾರ್ಯಕ್ರಮದ ಮೂರನೇ ದಿನವಾಗಿದೆ. ವಿಕೆಂಡ್ ನಿಮಿತ್ತ ಕೇಂದ್ರಕ್ಕೆ ಜನ ತಂಡೋಪತಡವಾಗಿಅಗಮಿಸುತ್ತಿರುವುದರಿಂದ ಕಿಲೋಮೀಟರ್ ಗಟ್ಟಲೆ ಟ್ರಾಫಿಲ್ ಜಾಮ್ ಅಗಿದ್ದು ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಟ್ರಾಫಿಕ್ ಪೊಲೀಸರ ದಾಹ ನೀಗಿಸಿ ಭಗೀರಥನಾದ 60ರ ವ್ಯಕ್ತಿ, ಇದು ನಿಸ್ವಾರ್ಥ ಸೇವೆ ಎಂದ ಪೊಲೀಸ್ ಇಲಾಖೆ
Latest Videos