ದಾಖಲಾತಿ ಪಡೆಯುವಾಗ ಹಿಜಾಬ್ ಬಗ್ಗೆ ಇಲ್ಲದ ನಿರ್ಬಂಧ ಈಗ್ಯಾಕೆ ಅನ್ನುತ್ತಾರೆ ಬೆಳಗಾವಿ ಮುಸ್ಲಿಂ ವಿದ್ಯಾರ್ಥಿನಿಯರು

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Feb 07, 2022 | 9:20 PM

ಪರೀಕ್ಷೆಗಳು ಕೇವಲ ಎರಡು ತಿಂಗಳು ದೂರದಲ್ಲಿರುವುದರಿಂದ ತಮಗೆ ಓದಿನ ಮೇಲೆ ಗಮನ ಕೇಂದ್ರೀಕರಿಸಲು ಸಾಧ್ಯವಾಗುತ್ತಿಲ್ಲ. ತಾವು ಕಾಲೇಜುಗಳಲ್ಲಿ ದಾಖಲಾತಿ ಪಡೆಯುವಾಗ ಹಿಜಾಬ್ ಧರಿಸುವ ಬಗ್ಗೆ ಏನನ್ನೂ ಹೇಳಿರಲಿಲ್ಲ. ಈಗ್ಯಾಕೆ ಅದನ್ನು ನಿಷೇಧಿಸಲಾಗುತ್ತಿದೆ. ತಾವು ಯಾವ ಕಾರಣಕ್ಕೂ ಹಿಜಾಬ್ ಧರಿಸುವದನ್ನು ಬಿಡುವುದಿಲ್ಲ ಎಂದು ವಿದ್ಯಾರ್ಥಿನಿಯರು ಹೇಳಿದರು.

ಮಂಗಳವಾರ ಹಿಜಾಬ್ (Hijab) ವಿವಾದದ ಬಗ್ಗೆ ಹೈಕೋರ್ಟ್ (High Court) ತೀರ್ಪು ನೀಡಲಿದೆ. ಆದರೆ ರಾಜಕೀಯ ಪಕ್ಷಗಳಿಗೆ ಮತ್ತು ಸರ್ಕಾರಕ್ಕೆ ಕಾಯುವ ವ್ಯವಧಾನವಿಲ್ಲ. ಸರ್ಕಾರ ರಾಜ್ಯದ ಎಲ್ಲ ಸರ್ಕಾರೀ ಶಾಲಾ ಕಾಲೇಜುಗಳಲ್ಲಿ ಸಮವಸ್ತ್ರ (uniform) ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ. ಸರ್ಕಾರದ ಆದೇಶ ಗೊಂದಲ ಮೂಡಿಸುವಂತಿದೆ. ಯಾಕೆಂದರೆ ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರು ಸಮವಸ್ತ್ರ ಧರಿಸುವುದಿಲ್ಲ ಅಂತ ಹೇಳಿಲ್ಲ. ಅವರು ಸಮವಸ್ತ್ರದ ಜೊತೆಗೆ ಹಿಜಾಬ್ ಧರಿಸಿ ಶಾಲೆಗಳಿಗೆ ಹೋಗುವ ಅನುಮತಿ ನೀಡಬೇಕೆಂದು ಕೋರುತ್ತಿದ್ದಾರೆ. ಕೋರ್ಟ್ ಏನಾದರೂ ಹಿಜಾಬ್ ಧರಿಸಲು ಅನುಮತಿ ನೀಡಿದರೆ ಮುಖವುಳಿಸಿಕೊಳ್ಳಲು ಸರ್ಕಾರ ಈ ಆದೇಶ ಹೊರಡಿಸಿದೆಯೇ ಎಂಬ ಗುಮಾನಿ ಮೂಡುತ್ತದೆ. ಸಮವಸ್ತ್ರ ಕಡ್ಡಾಯ ಅಂತ ಮಾತ್ರ ಆದೇಶದಲ್ಲಿ ಹೇಳಲಾಗಿತ್ತು, ಅಂತ ಸರ್ಕಾರ ನ್ಯಾಯಾಲಯಕ್ಕೆ ಹೇಳಬಹುದು.

ಅತ್ತ ಬೆಳಗಾವಿಯಲ್ಲಿ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಕಾರ್ಯಕರ್ತರುಮ ವಿದ್ಯಾರ್ಥಿ ಮತ್ತು ಪೋಷಕರೊಂದಿಗೆ ಹಿಜಾಬ್ ಪರ ಪ್ರತಿಭಟನೆ ನಡೆಸಿ ಬೆಳಗಾವಿ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿಯೊಂದನ್ನು ಸಲ್ಲಿಸಿದರು. ಪ್ರತಿಭಟನೆಕಾರರೊಂದಿಗೆ ಟಿವಿ9 ಬೆಳಗಾವಿ ವರದಿಗಾರ ಮಾತಾಡಿದರು.

ವಿದ್ಯಾರ್ಥಿನಿಯರು, ತಮ್ಮ ಹಿರಿಯರೆಲ್ಲ ಹಿಜಾಬ್ ಧರಿಸಿಯೇ ತಮ್ಮ ಶಿಕ್ಷಣವನ್ನು ಪೂರೈಸಿದ್ದಾರೆ, ಅವರಿಗಿಲ್ಲದ ನಿಷೇಧ, ನಮಗ್ಯಾಕೆ? ಎಂದು ಕೇಳಿದರು. ಇದನ್ನು ಉದ್ದೇಶಪೂರ್ವಕವಾಗಿ ಮಾಡಲಾಗುತ್ತಿದೆ, ಪರೀಕ್ಷೆಗಳು ಕೇವಲ ಎರಡು ತಿಂಗಳು ದೂರದಲ್ಲಿರುವುದರಿಂದ ತಮಗೆ ಓದಿನ ಮೇಲೆ ಗಮನ ಕೇಂದ್ರೀಕರಿಸಲು ಸಾಧ್ಯವಾಗುತ್ತಿಲ್ಲ. ತಾವು ಕಾಲೇಜುಗಳಲ್ಲಿ ದಾಖಲಾತಿ ಪಡೆಯುವಾಗ ಹಿಜಾಬ್ ಧರಿಸುವ ಬಗ್ಗೆ ಏನನ್ನೂ ಹೇಳಿರಲಿಲ್ಲ. ಈಗ್ಯಾಕೆ ಅದನ್ನು ನಿಷೇಧಿಸಲಾಗುತ್ತಿದೆ. ತಾವು ಯಾವ ಕಾರಣಕ್ಕೂ ಹಿಜಾಬ್ ಧರಿಸುವದನ್ನು ಬಿಡುವುದಿಲ್ಲ ಎಂದು ವಿದ್ಯಾರ್ಥಿನಿಯರು ಹೇಳಿದರು.

ಸ್ಕರ್ಟ್ ಅಥವಾ ಬೇರೆ ಫ್ಯಾಶನೇಬಲ್ ಉಡುಗೆಗಳನ್ನು ಧರಿಸಲು ನಮ್ಮ ಧರ್ಮ ಅನುಮತಿ ನೀಡುವುದಿಲ್ಲ, ಓದು ಕಲಿಯುವ ಏಕಮಾತ್ರ ಉದ್ದೇಶದಿಂದ ತಾವು ಶಾಲೆಗಳಿಗೆ ಹೋಗೋದು ಅಂತ ವಿದ್ಯಾರ್ಥಿನಿಯರು ಹೇಳಿದರು.

ಇದನ್ನೂ ಓದಿ:  ಹಿಜಾಬ್ ವಿವಾದ: ಸಮವಸ್ತ್ರ ಕುರಿತು ಸರ್ಕಾರದ ಆದೇಶ ಹಿನ್ನಲೆ; ಮೈಸೂರಿನಲ್ಲಿ ಬಿ.ಸಿ ನಾಗೇಶ್‌ಗೆ ಘೆರಾವ್

Published on: Feb 07, 2022 09:20 PM