Nokia 3210: ಲೇಟೆಸ್ಟ್ ಫೀಚರ್ಸ್​ ಜತೆಗೆ ಮಾರುಕಟ್ಟೆಗೆ ಬಂತು ನೋಕಿಯಾ ಮೊಬೈಲ್

Nokia 3210: ಲೇಟೆಸ್ಟ್ ಫೀಚರ್ಸ್​ ಜತೆಗೆ ಮಾರುಕಟ್ಟೆಗೆ ಬಂತು ನೋಕಿಯಾ ಮೊಬೈಲ್

ಕಿರಣ್​ ಐಜಿ
|

Updated on: Jun 30, 2024 | 7:31 AM

ಹೊಸ ನೋಕಿಯಾ 3210 ನೂತನ ವಿನ್ಯಾಸದಲ್ಲಿ ಮಾರುಕಟ್ಟೆಗೆ ಲಗ್ಗೆ ಇರಿಸಿದೆ. ಯೂಟ್ಯೂಬ್, ಯುಪಿಐ ಆ್ಯಪ್​ಗಳನ್ನು ಈ ಫೋನ್​ಗಳಲ್ಲಿ ಅಳವಡಿಸಲಾಗಿದೆ. 1,450mAh ಬ್ಯಾಟರಿ ಮತ್ತು Unisoc T107 ಪ್ರೊಸೆಸರ್ ಹೊಂದಿದೆ. ನೂತನ ನೋಕಿಯಾ ಮೊಬೈಲ್ ₹3,999 ದರಕ್ಕೆ ಲಭ್ಯವಾಗುತ್ತಿದೆ.

ನೋಕಿಯಾ ಕಂಪನಿ ಎಚ್​ಎಂಡಿ ತೆಕ್ಕೆಗೆ ಜಾರಿದ ಬಳಿಕ ಹೊಸ ಮಾದರಿಯ ಫೋನ್​ಗಳನ್ನು ಎಚ್​ಎಂಡಿ ಬ್ರ್ಯಾಂಡ್​ನಲ್ಲಿಯೇ ಪರಿಚಯಿಸುತ್ತಿದೆ. ಆದರೆ ಕೆಲವು ಮಾದರಿಗಳನ್ನು ಇನ್ನು ಕೂಡ ನೋಕಿಯಾ ಹೆಸರಿನಲ್ಲಿಯೇ ಬಿಡುಗಡೆ ಮಾಡುತ್ತಿದೆ. ಅದೇ ಸರಣಿಯಲ್ಲಿ ಹೊಸ ನೋಕಿಯಾ 3210 ನೂತನ ವಿನ್ಯಾಸದಲ್ಲಿ ಮಾರುಕಟ್ಟೆಗೆ ಲಗ್ಗೆ ಇರಿಸಿದೆ. ಯೂಟ್ಯೂಬ್, ಯುಪಿಐ ಆ್ಯಪ್​ಗಳನ್ನು ಈ ಫೋನ್​ಗಳಲ್ಲಿ ಅಳವಡಿಸಲಾಗಿದೆ. 1,450mAh ಬ್ಯಾಟರಿ ಮತ್ತು Unisoc T107 ಪ್ರೊಸೆಸರ್ ಹೊಂದಿದೆ. ನೂತನ ನೋಕಿಯಾ ಮೊಬೈಲ್ ₹3,999 ದರಕ್ಕೆ ಲಭ್ಯವಾಗುತ್ತಿದೆ.