ಬಿಜೆಪಿಗೆ ವಲಸೆ ಬಂದ ಯಾವುದೇ ಶಾಸಕ, ಸಚಿವ ಕಾಂಗ್ರೆಸ್ ಸೇರುವುದಿಲ್ಲ: ಡಾ ಕೆ ಸುಧಾಕರ್
ನಿರ್ದಿಷ್ಟವಾಗಿ ಹೆಚ್ ವಿಶ್ವನಾಥ ಅವರ ಬಗ್ಗೆ ಕೇಳಿದಾಗ, ಅವರು ಸೋತರೂ ಎಮ್ ಎಲ್ ಸಿ ಮಾಡಲಾಗಿದೆ, ಹಾಗಾಗಿ ಅವರು ಕೂಡ ಕಾಂಗ್ರೆಸ್ ಸೇರುವ ಯೋಚನೆ ಮಾಡಲಾರರು ಸಚಿವರು ಹೇಳಿದರು.
ಮೈಸೂರು: ಕಾಂಗ್ರೆಸ್ ಮತ್ತು ಜೆಡಿ(ಎಸ್) ಪಕ್ಷಗಳಿಂದ ಬಿಜೆಪಿಗೆ ಬಂದ ಯಾರೊಬ್ಬರೂ ಕಾಂಗ್ರೆಸ್ ಪಕ್ಷ ಸೇರುವುದಿಲ್ಲ ಎಂಬ ವಿಶ್ವಾಸ ತನಗಿದೆ ಎಂದು ಆರೋಗ್ಯ ಸಚಿವ ಡಾ ಕೆ ಸುಧಾಕರ್ ಮೈಸೂರಲ್ಲಿ ಇಂದು ಹೇಳಿದರು. ಸುದ್ದಿಗಾರರೊಂದಿಗೆ ಮಾತಾಡಿದ ಅವರನ್ನು ನಿರ್ದಿಷ್ಟವಾಗಿ ಹೆಚ್ ವಿಶ್ವನಾಥ ಅವರ ಬಗ್ಗೆ ಕೇಳಿದಾಗ, ಅವರು ಸೋತರೂ ಎಮ್ ಎಲ್ ಸಿ ಮಾಡಲಾಗಿದೆ, ಹಾಗಾಗಿ ಅವರು ಕೂಡ ಕಾಂಗ್ರೆಸ್ ಸೇರುವ ಯೋಚನೆ ಮಾಡಲಾರರು ಎಂದು ಹೇಳಿದರು.
Latest Videos