ಒಬ್ಬರು ಉತ್ತರ ಮತ್ತೊಬ್ಬರು ದಕ್ಷಿಣಕ್ಕೆ ಹೊರಡಿ ಅಂತ ಶಿವಕುಮಾರ ಮತ್ತು ಸಿದ್ದರಾಮಯ್ಯಗೆ ಫರ್ಮಾನು ಹೊರಡಿಸಿದ ಹೈಕಮಾಂಡ್!
ಶಿವಕುಮಾರ ಬಣ, ಕೇವಲ ಸಿದ್ದರಾಮಯ್ಯ ನೇತೃತ್ವದಲ್ಲಿ ಮಾತ್ರ ಯಾತ್ರೆ ಮಾಡಿದರೆ ತಪ್ಪು ಸಂದೇಶ ರವಾನೆಯಾಗುತ್ತದೆ ಅಂತ ಹೈಕಮಾಂಡ್ಗೆ ಮನವರಿಕೆ ಮಾಡುವಲ್ಲಿ ಸಫಲವಾಗಿದೆ.
ಬೆಂಗಳೂರು: ಕರ್ನಾಟಕ ಕಾಂಗ್ರೆಸ್ ನ ಅಗ್ರಗಣ್ಯ ನಾಯಕರಲ್ಲಿ ಇಬ್ಬರಾಗಿರುವ ಸಿದ್ದರಾಮಯ್ಯ (Siddaramaiah) ಮತ್ತು ಡಿಕೆ ಶಿವಕುಮಾರ (DK Shivakumar) ನಡುವೆ ಮುಸುಕಿಲ್ಲದ ಜಗಳ ಮುಂದುವರಿದಂತೆ ಕಾಣುತ್ತಿದೆ. ಅವರಿಬ್ಬರ ನಡುವೆ ಬೋನ್ ಆಫ್ ಕಂಟೆನ್ಷನ್ (bone of contention) ಇರೋದು ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಮುಖ್ಯಮಂತ್ರಿಯ ಸ್ಥಾನದ ಬಗ್ಗೆ. ಕರ್ನಾಟಕದಲ್ಲಿ ರಾಹುಲ್ ಗಾಂಧಿ ನಡೆಸಿದ ಭಾರತ್ ಜೋಡೋ ಯಾತ್ರೆ ದೊಡ್ಡಮಟ್ಟಿನ ಯಶ ಕಂಡಿರುವುದರಲ್ಲಿ ಅನುಮಾನವಿಲ್ಲ. ಅದಕ್ಕೆ ಪೂರಕವಾಗಿ ಸಿದ್ದರಾಮಯ್ಯ ಟ್ರ್ಯಾಕ್ಟರ್ ಗಳಲ್ಲಿ ಐಕ್ಯತಾ ಯಾತ್ರೆ ಮಾಡಬೇಕೆಂದುಕೊಂಡಿದ್ದರು. ಆದರೆ ಶಿವಕುಮಾರ ಬಣ, ಕೇವಲ ಸಿದ್ದರಾಮಯ್ಯ ನೇತೃತ್ವದಲ್ಲಿ ಮಾತ್ರ ಯಾತ್ರೆ ಮಾಡಿದರೆ ತಪ್ಪು ಸಂದೇಶ ರವಾನೆಯಾಗುತ್ತದೆ ಅಂತ ಹೈಕಮಾಂಡ್ ಗೆ ಮನವರಿಕೆ ಮಾಡುವಲ್ಲಿ ಸಫಲವಾಗಿದೆ. ಹಾಗಾಗಿ ಐಕ್ಯತಾ ಯಾತ್ರೆಯನ್ನು ರಾಜ್ಯದ ಉತ್ತರಭಾಗದಲ್ಲಿ ಸಿದ್ದರಾಮಯ್ಯ ಮಾಡಿದರೆ ಶಿವಕುಮಾರ ದಕ್ಷಿಣ ಭಾಗದಲ್ಲಿ ಮಾಡಲಿದ್ದಾರೆ.
Latest Videos