ನಾರ್ತ್ ಇಂಡಿಯಾ ಮಂದಿ ಧ್ರುವ ಸರ್ಜಾಗೆ ಇಟ್ಟ ಹೊಸ ಹೆಸರೇನು?

| Updated By: ರಾಜೇಶ್ ದುಗ್ಗುಮನೆ

Updated on: Jul 19, 2024 | 10:24 AM

ಪ್ಯಾನ್ ಇಂಡಿಯಾ ಮಟ್ಟದಲ್ಲಿ ‘ಮಾರ್ಟಿನ್’ ಚಿತ್ರ ಬಿಡುಗಡೆ ಆಗುತ್ತಿದೆ. ಈ ಚಿತ್ರದಲ್ಲಿ ಭರ್ಜರಿ ಆ್ಯಕ್ಷನ್ ಇರಲಿದೆ. ಈ ಬಗ್ಗೆ ನಿರ್ಮಾಪಕ ಉದಯ್ ಮೆಹ್ತಾ ಮಾತನಾಡಿದ್ದಾರೆ. ಧ್ರುವ ಸರ್ಜಾ ಅವರಿಗೆ ನಾರ್ತ್​ ಇಂಡಿಯಾ ಮಂದಿ ಇಟ್ಟ ಹೆಸರ ಬಗ್ಗೆಯೂ ವಿವರಿಸಿದ್ದಾರೆ.

ಧ್ರುವ ಸರ್ಜಾ ನಟನೆಯ ಸಿನಿಮಾಗಳು ಇಷ್ಟು ದಿನ ಕನ್ನಡದಲ್ಲಿ ಮಾತ್ರ ರಿಲೀಸ್ ಆಗಿದ್ದವು. ಈಗ ಅವರ ನಟನೆಯ ‘ಮಾರ್ಟಿನ್’ ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗುತ್ತಿದೆ. ಈ ಚಿತ್ರದಲ್ಲಿ ಭರ್ಜರಿ ಆ್ಯಕ್ಷನ್ ಇರಲಿದೆ. ಈ ಬಗ್ಗೆ ನಿರ್ಮಾಪಕ ಉದಯ್ ಮೆಹ್ತಾ ಮಾತನಾಡಿದ್ದಾರೆ. ಧ್ರುವ ಸರ್ಜಾ ಅವರಿಗೆ ನಾರ್ತ್​ ಇಂಡಿಯಾ ಮಂದಿ ಇಟ್ಟ ನಿಕ್ ನೇಮ್ ಬಗ್ಗೆಯೂ ವಿವರಿಸಿದ್ದಾರೆ. ‘ನಾರ್ತ್​ ಇಂಡಿಯಾದಲ್ಲಿ ಧ್ರುವ ಸರ್ಜಾಗೆ ಇಂಡಿಯನ್ ಹಲ್ಕ್ ಎಂದು ಕರೆಯುತ್ತಿದ್ದಾರೆ. ಅವರನ್ನು ಬಿಟ್ಟು ಯಾರಿಗೂ ಆತರ ಬಾಡಿ ಇಲ್ಲ ಎಂಬುದು ಇದರ ಅರ್ಥ. ಸಿನಿಮಾದಲ್ಲಿ ಧ್ರುವ ಸರ್ಜಾಗೆ ವಿಶೇಷ ಶೇಡ್​ಗಳಿವೆ. ಅವರಿಗೆ ಒಟ್ಟೂ ಮೂರು ಶೇಡ್​ಗಳು ಬರುತ್ತವೆ. ಬೇರೆ ರೀತಿಯ ಪರ್ಫಾರ್ಮೆನ್ಸ್ ಕೇಳುತ್ತದೆ. ಅದನ್ನು ಉತ್ತಮವಾಗಿ ಧ್ರುವ ನಿಭಾಯಿಸಿದ್ದಾರೆ. ಕ್ಲೈ ಮ್ಯಾಕ್ಸ್​ನಲ್ಲಿ ಬರೋ ಆ್ಯಕ್ಷನ್ ದೃಶ್ಯನ 45 ದಿನ ಶೂಟ್ ಮಾಡಿದ್ದೇವೆ. ಇದರ ಜೊತೆ ಟಾಕಿ ಶೂಟ್ ಸೇರಿದರೆ 54 ದಿನ ಆಗುತ್ತದೆ’ ಎಂದಿದ್ದಾರೆ ಉದಯ್ ಮೆಹ್ತಾ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.