ಶಿರೂರು ಗುಡ್ಡ ಕುಸಿತ; ಡ್ರೋನ್ ಕೆಮೆರಾ ಮೂಲಕ ತೆರವು ಕಾರ್ಯಾಚರಣೆಯ ವಿಹಂಗಮ ದೃಶ್ಯ
ಉತ್ತರ ಕನ್ನಡ ಜಿಲ್ಲೆಯ ಬೇರೆ ಭಾಗಗಳಲ್ಲೂ ಗುಡ್ಡ ಕುಸಿತದ ಪ್ರಕರಣಗಳು ನಡೆಯುತ್ತಿರುವುದನ್ನು ವರದಿ ಮಾಡಲಾಗಿದೆ. ಗುರುವಾರ ತಾಲೂಕಿನ ಬರ್ಗಿ ಹೆಸರಿನ ಸ್ಥಳದಲ್ಲಿ ಗುಡ್ಡ ಕುಸಿತ ಉಂಟಾಗಿದ್ದು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ. ರಸ್ತೆಯ ಎರಡೂ ಬದಿ ಹಲವಾರು ವಾಹನಗಳು ನಿಶ್ಚಲ ಸ್ಥಿತಿಯಲ್ಲಿ ನಿಂತಿವೆ.
ಉತ್ತರ ಕನ್ನಡ: ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಬಳಿ ಗುಡ್ಡ ಕುಸಿತದ ದುರ್ಘಟನೆ ನಡೆದು 4 ದಿನ ಕಳೆದರೂ ತೆರವು ಕಾರ್ಯಾಚರಣೆ ಇನ್ನೂ ಅರ್ಧದಷ್ಟು ಸಹ ಮುಗಿದಿಲ್ಲ. ಬಿಡದೆ ಸುರಿಯುತ್ತಿರುವ ಮಳೆ ಕೆಲಸಕ್ಕೆ ಅಡ್ಡಿಯನ್ನುಂಟು ಮಾಡುತ್ತಿದೆ. ಗುಡ್ಡ ಕುಸಿದ ಭಾಗ, ರಸ್ತೆಯ ಮೇಲೆ ಕುಪ್ಪೆಯಾಗಿರುವ ಮಣ್ಣು, ಮತ್ತು ಜೆಸಿಬಿ ಹಾಗೂ ಇತರ ವಾಹನಗಳ ಮೂಲಕ ನಡೆಯುತ್ತಿರುವ ಕಾರ್ಯಾಚರಣೆಯನ್ನು ಡ್ರೋನ್ ಕೆಮೆರಾ ಸೆರೆಹಿಡಿದಿದ್ದು ಅದರ ವಿಹಂಗಮ ದೃಶ್ಯವನ್ನು ಇಲ್ಲಿ ನೋಡಬಹುದು. ಯಾವ ಪ್ರಮಾಣದಲ್ಲಿ ಮಣ್ಣು ರಸ್ತೆಯ ಮೇಲೆ ಕುಸಿದು ಬಿದ್ದಿದೆ ಅಂತ ದೃಶ್ಯಗಳಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಮಣ್ಣನ್ನು ಎತ್ತಿ ರಸ್ತೆಯ ಪಕ್ಕದಿಂದ ಹರಿಯುವ ಗಂಗಾವಳಿ ನದಿ ದಡಕ್ಕೆ ಹಾಕಲಾಗುತ್ತಿದೆ. ಕಾರ್ಯಾಚರಣೆಗೆ ಹಲವಾರು ವಾಹನಗಳನ್ನು ಬಳಸಲಾಗುತ್ತಿದೆ. ಮಣ್ಣಿನ ಕೆಳಗೆ ವಾಹನಗಳು ಸಿಲುಕಿವೆ ಅಂತ ಹೇಳಲಾಗುತ್ತಿದೆ. ಈ ಕಾರ್ಯಾಚರಣೆ ಸಂಪೂರ್ಣವಾಗಿ ಮುಗಿದ ನಂತರವೇ ಎಷ್ಟು ಜನ ಪ್ರಾಣ ಕಳೆದುಕೊಂಡಿದ್ದಾರೆ ಅನ್ನೋದನ್ನು ನಿಖರವಾಗಿ ಹೇಳಬಹುದು.
ಮತ್ತಷ್ಟು ವಿಡಿಯೋ ಸುದ್ದಿಗಳಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಶಿರೂರು ಗುಡ್ಡ ಕುಸಿತ: ಮೃತರ ಸಂಖ್ಯೆ 7ಕ್ಕೆ ಏರಿಕೆ, ನದಿಯಲ್ಲಿ ಕೊಚ್ಚಿ ಹೋಗಿದ್ದ ಟ್ಯಾಂಕರ್ನಿಂದ ಗ್ಯಾಸ್ ಹೊರಕ್ಕೆ