Daily Devotional: ಕಾಗೆ ತಲೆಗೆ ಕುಕ್ಕಿದರೆ ಏನು ಅರ್ಥ? ಈ ವಿಡಿಯೋ ನೋಡಿ
ಕೆಲವೊಮ್ಮೆ ನಾವು ರಸ್ತೆಯಲ್ಲಿ ಹೋಗುವಾಗ ಅಥವಾ ಮನೆಯಲ್ಲಿ ಹೊರಗೆ ನಿಂತಾಗ ಕಾಗೆಗಳು ಹತ್ತಿರಕ್ಕೆ ಬಂದು ಹೋಗುತ್ತವೆ. ಕೆಲವೊಮ್ಮೆ ಅವುಗಳು ನಮ್ಮ ತಲೆಗೆ ಬಂದು ಕುಕ್ಕಿ ಹೋಗುತ್ತವೆ. ಜ್ಯೋತಿಷ್ಯದ ಪ್ರಕಾರ ಇದಕ್ಕೆ ಅನೇಕ ಅರ್ಥಗಳಿದೆ. ಹಾಗಾದ್ರೆ ಕಾಗೆ ಬಂದು ತಲೆಗೆ ಕುಕ್ಕಿದರೆ ಅಥವಾ ತಾಗಿಸಿದರೆ ಅದರ ಅರ್ಥವೇನು ಎಂಬುವುದನ್ನು ಬಸವರಾಜ ಗುರೂಜಿ ತಿಳಿಸಿದ್ದಾರೆ.
ಹಿಂದೂ ಧರ್ಮದಲ್ಲಿ, ಕಾಗೆಯನ್ನು ಅದರ ಧ್ವನಿಯಿಂದಾಗಿ ಅಶುಭ ಪಕ್ಷಿ ಎಂದು ಪರಿಗಣಿಸಲಾಗುತ್ತದೆ. ಇಷ್ಟೇ ಅಲ್ಲ, ಶಾಸ್ತ್ರಗಳಲ್ಲಿ ಕಾಗೆಯನ್ನು ಯಮನ ದೂತ ಎಂದೂ ಕರೆಯುತ್ತಾರೆ. ಕಾಗೆಯು ಯಮನ ಬಳಿಗೆ ಹೋಗಿ ಯಮರಾಜನಿಗೆ ಭೂಮಿಯ ನಿವಾಸಿಗಳ ಬಗ್ಗೆ ತಿಳಿಸುತ್ತದೆ ಎಂದು ಹೇಳಲಾಗುತ್ತದೆ, ಆದರೆ ಧರ್ಮಗ್ರಂಥಗಳ ಪ್ರಕಾರ ಕಾಗೆಯನ್ನು ಮಾನವರ ಸಂದೇಶವಾಹಕ ಎಂದು ಹೇಳಲಾಗುತ್ತದೆ. ಕಾಗೆ ಸಾಮಾನ್ಯವಾಗಿ ಎಲ್ಲರಿಗೂ ಕಾಣಿಸುವ ಪಕ್ಷಿಯಾಗಿದೆ. ಈ ಕಾಗೆ ನಮ್ಮ ಜೀವನದ ಒಂದು ಅಂಗವಾಗಿದೆ. ಈ ಕಾಗೆ ನಮ್ಮ ಪೂರ್ವಜರ ಸಂಕೇತ ಎನ್ನಲಾಗುತ್ತದೆ. ಹಾಗಾಗಿ ಕಾಗೆಯ ಮನೆ ಹತ್ತಿರ ಬಂದು ಕೂರುವುದಕ್ಕೂ ಹಾಗೂ ತಲೆಗೆ ಬಂದು ಕುಕ್ಕಿದರೂ ಅದಕ್ಕೂ ನೂರಾರು ಅರ್ಥಗಳಿದೆ. ಹಾಗಾದ್ರೆ ಈ ಕಾಗೆ ನಿಮ್ಮ ತಲೆಗೆ ಬಂದು ಹೊಡೆದರೆ ಅಥವಾ ಕುಕ್ಕಿದರೆ ಅದರ ಅರ್ಥವೇನು ಹಾಗೂ ಅದರಿಂದ ಏನಾಗುತ್ತದೆ ಎಂಬುದನ್ನು ಬಸವರಾಜ ಗುರೂಜಿ ತಿಳಿಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Video: ವಿದ್ಯುತ್ ಶಾಕ್ ತಗುಲಿ ಬಿದ್ದ ಮರಿಯನ್ನು ರಕ್ಷಿಸಿದ ಕಾಡಾನೆ ಹಿಂಡು

ಮನೆಯಲ್ಲಿ ಅಡುಗೆ ಕೋಣೆ ಯಾವ ದಿಕ್ಕಿನಲ್ಲಿರಬೇಕು? ವಾಸ್ತು ವಿವರಣೆ ಇಲ್ಲಿದೆ

ಸುಬ್ರಹ್ಮಣ್ಯನ ಲಹರಿಗಳಿರುವ ಈ ದಿನದ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ

ಗಂಡನ ಗೆಳೆಯನೊಂದಿಗೆ ಪ್ರೇಮ ಸಲ್ಲಾಪ: ಮದ್ವೆ ಆಸೆ ತೋರಿಸಿ ಕೈಕೊಟ್ಟ ಪ್ರಿಯಕರ!
