ಅಧಿಕಾರಿಗಳನ್ನು ಬಲಿಪಶು ಮಾಡಿ ತಮ್ಮವರನ್ನು ರಕ್ಷಿಸುವ ಪ್ರಯತ್ನ ಸಿದ್ದರಾಮಯ್ಯ ಮಾಡುತ್ತಿದ್ದಾರೆ: ವಿಜಯೇಂದ್ರ
ವಾಲ್ಮೀಕಿ ನಿಗಮ ಹಗರಣದ ತನಿಖೆಯನ್ನು ಜಾರಿ ನಿರ್ದೇಶನಾಲಯ ಕೈಗೆತ್ತಿಕೊಂಡಿರುವುದು ಮುಖ್ಯಮಂತ್ರಿ ಮತ್ತು ಡಿಕೆ ಶಿವಕುಮಾರ್ ಅವರಲ್ಲಿ ಆತಂಕ ಮತ್ತು ಗಾಬರಿ ಮೂಡಿಸಿದೆ ಎಂದು ಹೇಳಿದ ವಿಜಯೇಂದ್ರ ಸದ್ಯಕ್ಕೆ ಕೇವಲ ನಾಗೇಂದ್ರ ಮಾತ್ರ ಅರೆಸ್ಟ್ ಆಗಿದ್ದಾರೆ, ಬಸನಗೌಡ ದದ್ದಲ್ ಯಾವುದೇ ಸಮಯದಲ್ಲಿ ಅರೆಸ್ಟ್ ಆಗಬಹುದು, ಮುಂದಿನ ದಿನಗಳಲ್ಲಿ ಯಾರ್ಯಾರ ಸರದಿ ಕಾದಿದೆಯೋ? ಎಂದರು.
ಬೆಂಗಳೂರು: ವಿಧಾನಮಂಡಲ ಜಂಟಿ ಅಧಿವೇಶನದ ಇಂದಿನ ಕಾರ್ಯಕಲಾಪಗಳು ಮುಗಿದ ನಂತರ ಬಿವೈ ವಿಜಯೇಂದ್ರ ಮತ್ತು ಅರ್ ಅಶೋಕ ಪತ್ರಿಕಾ ಗೋಷ್ಟಿ ನಡೆಸಿ ಸರ್ಕಾರ ಮತ್ತು ಸಿಎಂ ಸಿದ್ದರಾಮಯ್ಯರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ವಾಲ್ಮೀಕಿ ನಿಗಮ ಹಗರಣಕ್ಕೆ ಸಂಬಂಧಿಸಿದಂತೆ ಸದನದಲ್ಲಿ ಭಾಷಣ ಮಾಡಿದ ಮುಖ್ಯಮಂತ್ರಿಯವರು, ಪಿ ಚಂದ್ರಶೇಖರನ್ ಅವರ ಡೆತ್ ನೋಟ್ ನಲ್ಲಿದ್ದ ಹೆಸರುಗಳ ಪೈಕಿ ಕೇವಲ ಅಧಿಕಾರಿಗಳ ಹೆಸರು ಮಾತ್ರ ಓದಿದರು. ಮಂತ್ರಿ ಮತ್ತು ಶಾಸಕಮ ಹೆಸರನ್ನು ತಮ್ಮ ಅನುಕೂಲಕ್ಕಾಗಿ ಮರೆಮಾಚಿದರು, ಅಸಲಿಗೆ ಅವರು ಡೆತ್ ನೋಟ್ ಸದನಲ್ಲಿ ಓದಿದ್ದೇ ಅಕ್ಷಮ್ಯ ಅಪರಾಧ ಎಂದು ಹೇಳಿದ ವಿಜಯೇಂದ್ರ, ಅಧಿಕಾರಿಗಳನ್ನು ಬಲಿಪಶು ಮಾಡುವ ಪ್ರಯತ್ನ ಮುಖ್ಯಮಂತ್ರಿ ನಡೆಸಿರುವುದು ಸ್ಪಷ್ಟವಾಗಿ ಗೊತ್ತಾಗುತ್ತಿದೆ ಎಂದರು. ನಿಗಮದಿಂದ ಲೂಟಿ ಮಾಡಿದ ಹಣವನ್ನು ತೆಲಂಗಾಣ ವಿಧಾನಸಭಾ ಚುನಾವಣೆ ಮತ್ತು ಲೋಕಸಭಾ ಚುನಾವಣೆಗೆ ಬಳ್ಳಾರಿ ಕ್ಷೇತ್ರದಲ್ಲಿ ಹೆಂಡ ಕೊಂಡು ಹಂಚಲು ಬಳಕೆಯಾಗಿದ್ದು ಬೆಳಕಿಗೆ ಬಂದಿದೆ ಎಂದು ವಿಜಯೇಂದ್ರ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಸಿದ್ದರಾಮಯ್ಯ ನಾಯಕತ್ವದಲ್ಲಿ ಬಳಲುತ್ತಿದೆ ಕರ್ನಾಟಕ: ಬಿವೈ ವಿಜಯೇಂದ್ರ ವಾಗ್ದಾಳಿ