Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿದ್ದರಾಮಯ್ಯ ಮಾತು ಕೇಳಿಸಿಕೊಂಡ ಬಳಿಕ ಬಿಜೆಪಿ ಶಾಸಕರು ಸದನದ ಬಾವಿಗಿಳಿದು ಪ್ರತಿಭಟಿಸಿದರು!

ಸಿದ್ದರಾಮಯ್ಯ ಮಾತು ಕೇಳಿಸಿಕೊಂಡ ಬಳಿಕ ಬಿಜೆಪಿ ಶಾಸಕರು ಸದನದ ಬಾವಿಗಿಳಿದು ಪ್ರತಿಭಟಿಸಿದರು!

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 18, 2024 | 7:06 PM

ವಿರೋಧಪಕ್ಷಗಳ ಸದಸ್ಯರು ಸದನದ ಬಾವಿಯ ಕಡೆ ಬರುವಾಗಲೇ ಸಭಾಧ್ಯಕ್ಷ ಯುಟಿ ಖಾದರ್ ಅವರನ್ನು ತಡೆಯುವ ಪ್ರಯತ್ನ ಮಾಡಿದರು. ಆದರೆ ಸದಸ್ಯರು ಕೇಳಲಿಲ್ಲ. ಸದನದಲ್ಲಿ ಪೋಸ್ಟರ್ ಗಳನ್ನು ಪ್ರದರ್ಶಿಸಬಾರದೆಂದು ಹೇಳಿದರೂ ಅವರು ಅವುಗಳನ್ನು ಎತ್ತಿ ತೋರಿಸಿದರು.

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಸದನದಲ್ಲಿ ಸಂತನ ಹಾಗೆ ಮಾತಾಡಿದ್ದು ಹೊಳೆಯಲ್ಲಿ ಹುಣಸೆಹಣ್ಣು ತೊಳೆಯುವುದು ಅಂತಾರಲ್ಲ? ಹಾಗಾಯ್ತು ಮಾರಾಯ್ರೇ! ಅವರ ಮಾತು ಮುಗಿಯುತ್ತಿದ್ದಂತೆ ಬಿಜೆಪಿ ಮತ್ತು ಜೆಡಿಎಸ್ ಶಾಸಕರು ಸದನದಲ್ಲೇ ಪ್ರತಿಭಟನೆ ಶುರುಮಾಡಿದರು. ಕೈಯಲ್ಲಿ ಪೋಸ್ಟರ್ ಗಳನ್ನು ಹಿಡಿದ ಶಾಸಕರು ಸದನದ ಬಾವಿ ಪ್ರವೇಶಿಸಿ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧ ಘೋಷಣೆಗಳನ್ನು ಕೂಗಿದರು. ಪೋಸ್ಟರ್ ಗಳ ಮೇಲೆ ಪರಮ ಭ್ರಷ್ಟ ಸರ್ಕಾರಕ್ಕೆ ಧಿಕ್ಕಾರ, ಸಿದ್ದರಾಮಯ್ಯ ಮತ್ತು ಶಿವಕುಮಾರ್ ಫೋಟೋಗಳ ಮೇಲೆ ಲೂಟಿ ಗ್ಯಾರಂಟಿಯ ಜೋಡೆತ್ತುಗಳು ಎಂದು ಬರೆಯಲಾಗಿತ್ತು. ಹಾಗೆಯೇ ಹಣದ ಥೈಲಿ ಹಿಡಿದು ಓಡುತ್ತಿರುವ ಮಾಜಿ ಸಚಿವ ಬಿ ನಾಗೇಂದ್ರ ಮತ್ತು ಬಸನಗೌಡ ದದ್ದಲ್ ಅವರ ಫೋಟೋಗಳೂ ಇದ್ದವು. ಅವರೆಲ್ಲ ಒಕ್ಕೊರಲಿನಿಂದ ಧಿಕ್ಕಾರ ಧಿಕ್ಕಾರ ಅಂತ ಕೂಗುತ್ತಿದ್ದರೆ ಸಿದ್ದರಾಮಯ್ಯ ಅಸಹಾಯಕಾರಂತೆ ಅವರೆಡೆ ನೋಡುತ್ತಿದ್ದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ತುರ್ತು ಪರಿಸ್ಥಿತಿಯನ್ನು ಕರಾಳ ಅವಧಿ ಎಂದ ಸ್ಪೀಕರ್ ಓಂ ಬಿರ್ಲಾ; ಸದನದಲ್ಲಿ 2 ನಿಮಿಷ ಮೌನಾಚರಣೆ