ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆಗೆ ಮುಂದಾದ ಸರ್ಕಾರ: ಮಾಹಿತಿ ನೀಡಲು ಜು 31 ಕೊನೆ ದಿನ

2024-25ನೇ ಸಾಲಿನಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮುಖ್ಯವಾಹಿನಿಗೆ ತರಲು ಮೊಬೈಲ್ ಆ್ಯಪ್​​ ಮೂಲಕ ಮನೆ-ಮನೆ ಸಮೀಕ್ಷೆಯನ್ನು ನಡೆಸಲು ಕರ್ನಾಟಕ ಪಂಚಾಯತ್ ರಾಜ್ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಆಯುಕ್ತರಿಂದ ಸುತ್ತೋಲೆ ಹೊರಡಿಸಲಾಗಿದೆ. ಜುಲೈ 31ರೊಳಗೆ ಸಮೀಕ್ಷೆ ನಡೆಸಿ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.

ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆಗೆ ಮುಂದಾದ ಸರ್ಕಾರ: ಮಾಹಿತಿ ನೀಡಲು ಜು 31 ಕೊನೆ ದಿನ
ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆಗೆ ಮುಂದಾದ ಸರ್ಕಾರ: ಮಾಹಿತಿ ನೀಡಲು ಜು 31 ಕೊನೆ ದಿನ
Follow us
Vinay Kashappanavar
| Updated By: ಗಂಗಾಧರ​ ಬ. ಸಾಬೋಜಿ

Updated on: Jul 18, 2024 | 6:50 PM

ಬೆಂಗಳೂರು, ಜುಲೈ 18: 6 ರಿಂದ 14 ವರ್ಷದ ಮಕ್ಕಳು 8 ವರ್ಷದ ಶಿಕ್ಷಣ (education) ಪಡೆಯುವುದು ಕಡ್ಡಾಯ. ಹೀಗಾಗಿ ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆಗೆ (survey) ಪಂಚಾಯತ್ ರಾಜ್ ಆಯುಕ್ತಾಲಯ ಇಲಾಖೆ ಮುಂದಾಗಿದೆ. ಈ ಬಗ್ಗೆ ಕರ್ನಾಟಕ ಪಂಚಾಯತ್ ರಾಜ್ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆಯುಕ್ತರಿಂದ ಸುತ್ತೋಲೆ ಹೊರಡಿಸಲಾಗಿದೆ.

2024-25 ನೇ ಸಾಲಿನಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳ ಮನೆ ಮನೆಗೆ ಭೇಟಿ ನೀಡಿ ಮೊಬೈಲ್​ ಮೂಲಕ ಸಮೀಕ್ಷೆ ಮಾಡಲಾಗುತ್ತಿದೆ. ಆ ಮೂಲಕ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮುಖ್ಯವಾಹಿನಿಗೆ ತರಲು ಯೋಜನೆ ರೂಪಿಸಲಾಗಿದೆ.

ಇದನ್ನೂ ಓದಿ: ಅಂಗನವಾಡಿ ಶಾಲೆಗಳಲ್ಲಿಯೇ ಎಲ್‌ಕೆಜಿ, ಯುಕೆಜಿ: ಸಮವಸ್ತ್ರ- ಪುಸ್ತಕ, ಬ್ಯಾಗ್ ವಿತರಣೆ: ಗೊಂದಲಕ್ಕೆ ತೆರೆ ಎಳೆದ ಸಿಎಂ

ಗ್ರಾಮ ಪಂಚಾಯತ್​ಗಳು ಮನೆ ಮನೆ ಸಮೀಕ್ಷೆ ನಡೆಸಬೇಕು. ಈ ಸಮೀಕ್ಷೆಗೆ ಸ್ವಸಾಹಯ ಸಂಘ ಹಾಗೂ ಮಹಿಳಾ ಸಂಘಗಳನ್ನ ಬಳಕೆ ಮಾಡಿಕೊಳ್ಳಬೇಕು. ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪ್ರತಿ 300 ಮನೆಗೆ ಎಸ್​ಎಸ್​ಎಲ್​ಸಿ ವಿದ್ಯಾರ್ಹತೆ ಹೊಂದಿರುವ ಮತ್ತು ಸ್ಮಾರ್ಟ್ ಫೋನ್​ ಹೊಂದಿರುವ ಮಹಿಳೆಯರನ್ನ ಬಳಕೆ ಮಾಡಬಹುದಾಗಿದ್ದು, ಜುಲೈ 31ರೊಳಗೆ ಸಮೀಕ್ಷೆ ನಡೆಸಿ ಮಾಹಿತಿ ನೀಡುವಂತೆ ಸೂಚನೆ ನೀಡಲಾಗಿದೆ.

ಮನೆ ಮನೆ ಸಮೀಕ್ಷಾ ಕಾರ್ಯದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಜಿಲ್ಲಾ ಪಂಚಾಯತ್ ಇವರ ನೇತೃತ್ವದಲ್ಲಿ ಸಭೆಗಳನ್ನು ಆಯೋಜಿಸಿ, ಸಮೀಕ್ಷೆಯ ಪ್ರಗತಿಯನ್ನು ಪರಿಶೀಲಿಸಬೇಕು. ಸಮೀಕ್ಷೆ ಸಮಯದಲ್ಲಿ ಜಿಲ್ಲಾ ಯೋಜನಾ ಉಪಸಮನ್ವಯಾಧಿಕಾರಿಗಳು, ಶಿಕ್ಷಣಾಧಿಕಾರಿಗಳು, ಸಹಾಯಕ ಯೋಜನಾ ಸಮನ್ವಯಾಧಿಕಾರಿಗಳು, ಡಯಟ್‌ನ ಹಿರಿಯ ಉಪನ್ಯಾಸಕರು,  ಉಪನ್ಯಾಸಕರು, ಬಿಆರ್​ ಸಿಸಿ, ವಿಷಯ ಪರಿವೀಕ್ಷಕರು, ಬಿಆರ್​ಪಿ, ಇಸಿಓಸಿಆರ್​ಪಿಗಳು ಮೇಲ್ವಿಚಾರಣೆ ನಡೆಸಿ, ಯಾವುದೇ ಮಗು ಮನೆ ಮನೆ ಸಮೀಕ್ಷೆಯಿಂದ ಹೊರಗುಳಿದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಮತ್ತು ಮನೆ-ಮನೆ ಸಮೀಕ್ಷೆ ನಡೆಯುವಾಗ ಗ್ರಾಮ ಪಂಚಾಯತಿಯ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಅಗತ್ಯ ಸಹಕಾರ ನೀಡಲು ತಿಳಿಸಲಾಗಿದೆ.

ಇದನ್ನೂ ಓದಿ: ರಾಜ್ಯಾದ್ಯಂತ ಎಲ್ಲಾ ಶಾಲೆಗಳಲ್ಲಿ ಹುಟ್ಟುಹಬ್ಬ ಆಚರಣೆ ನಿಷೇಧ: ಸರ್ಕಾರ ಆದೇಶ

ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಗಣತಿದಾರರಿಗೆ ಗ್ರಾಮ ಪಂಚಾಯತಿಯಲ್ಲಿ ತರಬೇತಿ ನೀಡಬೇಕು. ಸದರಿ ತರಬೇತಿಯಲ್ಲಿ ಸ್ಥಳೀಯ ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಸಮೂಹ ಸಂಪನ್ಮೂಲ ವ್ಯಕ್ತಿ (Cluster Resource Person-CRP) ಗಳನ್ನು ತೊಡಗಿಸಿಕೊಳ್ಳುವಂತೆ ಸೂಚಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಹಿಮಾಲಯದಲ್ಲಿ ಸಿಕ್ಕಿ ಬಿದ್ದ ಕಂದು ಕರಡಿಯನ್ನು ರಕ್ಷಿಸಿದ ಭಾರತೀಯ ಸೈನಿಕರು
ಹಿಮಾಲಯದಲ್ಲಿ ಸಿಕ್ಕಿ ಬಿದ್ದ ಕಂದು ಕರಡಿಯನ್ನು ರಕ್ಷಿಸಿದ ಭಾರತೀಯ ಸೈನಿಕರು
ಮಾತಿಗೆ ಅಡ್ಡಿಪಡಿಸುತ್ತಿದ್ದ ರಾಯರೆಡ್ಡಿಯವರಿಗೆ ಸುಮ್ಮನಿರಲು ಹೇಳಿದ ಯತ್ನಾಳ್
ಮಾತಿಗೆ ಅಡ್ಡಿಪಡಿಸುತ್ತಿದ್ದ ರಾಯರೆಡ್ಡಿಯವರಿಗೆ ಸುಮ್ಮನಿರಲು ಹೇಳಿದ ಯತ್ನಾಳ್
ಗೋಡೆ ಬಳಿ ಹೋಗಿ ಅಳುತ್ತಿರುವ ಹನುಮಂತ; ಬಿಗ್ ಬಾಸ್​ ಮನೆಯಲ್ಲಿ ಏನಾಯ್ತು?
ಗೋಡೆ ಬಳಿ ಹೋಗಿ ಅಳುತ್ತಿರುವ ಹನುಮಂತ; ಬಿಗ್ ಬಾಸ್​ ಮನೆಯಲ್ಲಿ ಏನಾಯ್ತು?
ಮಂತ್ರಿಗಳಿಗೆ ಪ್ರಶ್ನೆ ಕೇಳಿದರೆ ಕಾಂಗ್ರೆಸ್ ಶಾಸಕರು ನಿಲ್ಲೋದ್ಯಾಕೆ? ಯತ್ನಾ
ಮಂತ್ರಿಗಳಿಗೆ ಪ್ರಶ್ನೆ ಕೇಳಿದರೆ ಕಾಂಗ್ರೆಸ್ ಶಾಸಕರು ನಿಲ್ಲೋದ್ಯಾಕೆ? ಯತ್ನಾ
ವಿರೋಧಫಕ್ಷದವರು ಸಭಾತ್ಯಾಗ ಮಾಡೋದು ವಾಡಿಕೆ, ಆದರೆ ಇಲ್ಲಿ ಸಿಎಂ!
ವಿರೋಧಫಕ್ಷದವರು ಸಭಾತ್ಯಾಗ ಮಾಡೋದು ವಾಡಿಕೆ, ಆದರೆ ಇಲ್ಲಿ ಸಿಎಂ!
ಎಲ್ಲರ ಆಟಕ್ಕೆ ಅಡ್ಡಗಾಲು ಹಾಕಿದ ಮಂಜು, ಗೌತಮಿ ಫುಲ್ ಗರಂ
ಎಲ್ಲರ ಆಟಕ್ಕೆ ಅಡ್ಡಗಾಲು ಹಾಕಿದ ಮಂಜು, ಗೌತಮಿ ಫುಲ್ ಗರಂ
ಸಿಎಂ ಕರೆದಿರುವ ವಿಷಯ ಹೇಳಿದಾಗ ಸಿಸಿ ಪಾಟೀಲ್ ಕುಂಟುನೆಪ ಹೇಳಿದರು: ಸಚಿವೆ
ಸಿಎಂ ಕರೆದಿರುವ ವಿಷಯ ಹೇಳಿದಾಗ ಸಿಸಿ ಪಾಟೀಲ್ ಕುಂಟುನೆಪ ಹೇಳಿದರು: ಸಚಿವೆ
ಸ್ವಾಮೀಜಿ ಬಿಜೆಪಿಯವರಾ ಅಂತ ಕೇಳುತ್ತಿರೋದು ಹಾಸ್ಯಾಸ್ಪದ: ಅಶೋಕ
ಸ್ವಾಮೀಜಿ ಬಿಜೆಪಿಯವರಾ ಅಂತ ಕೇಳುತ್ತಿರೋದು ಹಾಸ್ಯಾಸ್ಪದ: ಅಶೋಕ
ಸಾಕಿದ ಮಾವುತ ಬಿಟ್ಟು ಹೊರಟಾಗ ಓಡೋಡಿ ಹೋಗಿ ಎಳೆದು ತಂದ ಆನೆ ಮರಿ
ಸಾಕಿದ ಮಾವುತ ಬಿಟ್ಟು ಹೊರಟಾಗ ಓಡೋಡಿ ಹೋಗಿ ಎಳೆದು ತಂದ ಆನೆ ಮರಿ
ಕೃಷ್ಣ ಅವರ ಅಂತ್ಯಕ್ರಿಯೆ ಸರ್ಕಾರ ನಡೆಸಿಕೊಟ್ಟ ರೀತಿ ಅಭಿನಂದನೀಯ: ವಿಶ್ವನಾಥ್
ಕೃಷ್ಣ ಅವರ ಅಂತ್ಯಕ್ರಿಯೆ ಸರ್ಕಾರ ನಡೆಸಿಕೊಟ್ಟ ರೀತಿ ಅಭಿನಂದನೀಯ: ವಿಶ್ವನಾಥ್