ಶಾಲಾ ಬಾಲಕಿಯರ ಜತೆ ಅಸಭ್ಯ ವರ್ತನೆ: ಇನ್ನೋವಾ ಕಾರಿನಲ್ಲಿ ಬಂದು ನೀಚ ಕೃತ್ಯ

ಕುಡಿದ ನಶೆಯಲ್ಲಿದ್ದ ಯುವಕರ ಗುಂಪು ಫುಟ್​ಪಾತ್ ಮೇಲೆ ಕಾರು ಹತ್ತಿಸಿದ್ದಲ್ಲದೇ, ಶಾಲಾ ಬಾಲಕಿಯರ ಜೊತೆ ಅಸಭ್ಯ ವರ್ತನೆ ಮಾಡಿರುವಂತಹ ಘಟನೆ ಬೆಂಗಳೂರಿನ ಹೆಚ್ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಪ್ರಶ್ನಿಸಿದ ಸ್ಥಳೀಯರ ಮೇಲೆ ಹಲ್ಲೆಗೆ ಯುವಕು ಮುಂದಾಗಿದ್ದಾರೆ. ಪೊಲೀಸ್​ರು ಬರುವಷ್ಟರಲ್ಲಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ.

ಶಾಲಾ ಬಾಲಕಿಯರ ಜತೆ ಅಸಭ್ಯ ವರ್ತನೆ: ಇನ್ನೋವಾ ಕಾರಿನಲ್ಲಿ ಬಂದು ನೀಚ ಕೃತ್ಯ
ಶಾಲಾ ಬಾಲಕಿಯರ ಜತೆ ಅಸಭ್ಯ ವರ್ತನೆ: ಇನ್ನೋವಾ ಕಾರಿನಲ್ಲಿ ಬಂದು ನೀಚ ಕೃತ್ಯ
Follow us
ರಾಚಪ್ಪಾಜಿ ನಾಯ್ಕ್
| Updated By: ಗಂಗಾಧರ​ ಬ. ಸಾಬೋಜಿ

Updated on: Jul 18, 2024 | 7:30 PM

ಬೆಂಗಳೂರು, ಜುಲೈ 18: ಕುಡಿದ ಅಮಲಿನಲ್ಲಿ ಪುಂಡರ ಗ್ಯಾಂಗ್​ವೊಂದು ಶಾಲಾ ಬಾಲಕಿಯರ (schoolgirls) ಜೊತೆ ಅಸಭ್ಯ ವರ್ತನೆ ಮಾಡಿರುವಂತಹ ಘಟನೆ ನಗರದ ಹೆಚ್​ಎಎಲ್​ (HAL) ಖಾಸಗಿ ಶಾಲೆ ಬಳಿ ನಡೆದಿದೆ ಇನೋವಾ ಕಾರಿನಲ್ಲಿ ಬಂದಿದ್ದ ಯುವಕ ಗ್ಯಾಂಗ್​ನಿಂದ ಶಾಲಾ ಬಾಲಕಿಯರಿಗೆ ಕಿರುಕುಳ ನೀಡಲಾಗಿದೆ. ಫುಟ್​ಪಾತ್ ಮೇಲೆ ಓಡಾಡುತ್ತಿದ್ದ ಮಕ್ಕಳ ಜೊತೆ ಅಸಭ್ಯವಾಗಿ ವರ್ತಿಸುವುದರೊಂದಿಗೆ ಅಶ್ಲೀಲ ಶಬ್ದಗಳಿಂದ ನಿಂದಿಸಿ ವಿಕೃತಿ ಮೆರೆದಿದ್ದಾರೆ. ಇದನ್ನು ಪ್ರಶ್ನಿಸಿದ ಸ್ಥಳೀಯರ ಮೇಲೆ ಮೂವರು ಯುವಕರು ಹಲ್ಲೆಗೆ ಮುಂದಾಗಿದ್ದರು.

ಕುಡಿದ ನಶೆಯಲ್ಲಿದ್ದ ಯುವಕರ ಗುಂಪು ಫುಟ್​ಪಾತ್ ಮೇಲೆ ಇನೋವಾ ಕಾರು ಹತ್ತಿಸಿದ್ದಾರೆ. ನಶೆಯಲ್ಲಿದ್ದ ಓರ್ವ ನಿಲ್ಲಲಾಗದೆ ರಸ್ತೆಗೆ ಬಿದ್ದು ಕಿರುಚಾಡಿದ್ದಾನೆ. ಕುಡುಕರ ವಿಕೃತಿ ಮುಂದುವರಿದಾಗ ಕಂಟ್ರೋಲ್​ ರೂಮ್​ಗೆ ಸ್ಥಳೀಯರಿಂದ ಮಾಹಿತಿ ನೀಡಲಾಗಿದ್ದು, ಪೊಲೀಸ್ ವಾಹನ ಬರುವಷ್ಟರಲ್ಲಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ.

ಇದನ್ನೂ ಓದಿ: ಮನೆಗೆ ನುಗ್ಗಿ‌ ದುಷ್ಕರ್ಮಿಗಳ ಅಟ್ಟಹಾಸ: ಮಹಿಳೆಯೊಂದಿಗೆ ಅಸಭ್ಯ ವರ್ತನೆ, ಕಾಂಗ್ರೆಸ್​ ಸದಸ್ಯನ ಕೈವಾಡ ಆರೋಪ

ಗಾಂಜಾ ನಶೆ, ಕುಡಿದ ಅಮಲಿನಲ್ಲಿ ದೌರ್ಜನ್ಯವೆಸಗಿರುವ ಶಂಕೆ ವ್ಯಕ್ತವಾಗಿದ್ದು, ಹೆಚ್ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಘಟನೆ ಬಗ್ಗೆ ವಿದ್ಯಾರ್ಥಿನಿ ಹೇಳಿದ್ದಿಷ್ಟು 

ಘಟನೆ ಬಗ್ಗೆ ಓರ್ವ ವಿದ್ಯಾರ್ಥಿನಿ ಪ್ರತಿಕ್ರಿಯಿಸಿದ್ದು, ನಾವು ರಸ್ತೆಯಲ್ಲಿ ನಡೆದುಕೊಂಡು ಬರುವಾಗ ಫುಟ್​ಪಾತ್ ಮೇಲೆ ಇನೋವಾ ಕಾರು ಹತ್ತಿಸಿ ಒಬ್ಬ ಯುವಕ ಬಿದ್ದ. ಕೈಯಲ್ಲಿ ಬಾಟಲ್​ ಹಿಡಿದಿದ್ದು ಆ್ಯಸಿಡ್​ ಹಾಕುತ್ತೇನೆ ಎಂದು ಹೆದರಿಸಿದ. ಭಯವಾಗಿ ನಾವು ದೂರು ಹೋದೆವು.

ಇದನ್ನೂ ಓದಿ: ಬೆಂಗಳೂರಲ್ಲಿ ನಮ್ಮ ಮೆಟ್ರೋ ಸಿಬ್ಬಂದಿಯಿಂದಲೇ ಅಸಭ್ಯ ವರ್ತನೆ: ‘ನಾನು ಇಲ್ಲಿ ಸುರಕ್ಷಿತಳಲ್ಲ’ ಎಂದ ಮಹಿಳೆ

ಬಳಿಕ ಅಶ್ಲೀಲ ಶಬ್ದಗಳಿಂದ ನಿಂದಿಸಿದ. ಏನು ಅಂತ ಕೇಳುವುದಕ್ಕೆ ಹೋದಾಗ ನಮ್ಮ ಮೇಲೆ ಕಾರು ಹತ್ತಿಸಲು ಮುಂದಾದರು. ಆಗ ಒಬ್ಬರು ಅಂಕಲ್​ ಬಂದು ಪ್ರಶ್ನಿಸಿದಕ್ಕೆ ಅವರ ಮೇಲೆ ಕೂಡ ಹಲ್ಲೆ ಮಾಡಿದರು ಎಂದು ಹೇಳಿದ್ದಾರೆ.

ನಾಗರಾಜ್​ ಎನ್ನುವವರು ಮಾತನಾಡಿ, ಕೆಲ ಯುವಕರು ಶಾಲಾ ಮಕ್ಕಳಿಗೆ ಅಡ್ಡಹಾಕಿ ತೊಂದರೆ ನೀಡುತ್ತಿದ್ದರು. ಯಾಕೆ ಹೀಗೆ ಮಾಡುತ್ತಿದ್ದೀರಾ ಎಂದಿದ್ದಕ್ಕೆ ನನ್ನ ಮೇಲೆ ಹಲ್ಲೆ ಮಾಡಲು ಬಂದರು. ಬಳಿಕ ಸಾರ್ವಜನಿಕರು ಸೇರುತ್ತಿದ್ದಂತೆ ಕಾರಿನಲ್ಲಿ ಪರಾರಿ ಆಗಿದ್ದಾರೆ. ಮಕ್ಕಳಿಗೆ ಪೊಲೀಸ್​ ಠಾಣೆಗೆ ಹೋಗಿ ದೂರು ನೀಡುವಂತೆ ಹೇಳಿದ್ದೇವೆ ಎಂದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ