ಬೆಂಗಳೂರಲ್ಲಿ ನಮ್ಮ ಮೆಟ್ರೋ ಸಿಬ್ಬಂದಿಯಿಂದಲೇ ಅಸಭ್ಯ ವರ್ತನೆ: ‘ನಾನು ಇಲ್ಲಿ ಸುರಕ್ಷಿತಳಲ್ಲ’ ಎಂದ ಮಹಿಳೆ
ಮಹಿಳೆ ಮುಂದೆ ತನ್ನ ಖಾಸಗಿ ಅಂಗ ಸ್ಪರ್ಶಿಸಿಕೊಂಡು ನಮ್ಮ ಮೆಟ್ರೋ ಸಿಬ್ಬಂದಿಯಿಂದಲೇ ಅಸಭ್ಯ ವರ್ತನೆ ತೋರಿರುವಂತಹ ಘಟನೆ ನಗರದ ಜಾಲಹಳ್ಳಿ ಮೆಟ್ರೋ ಪ್ಲ್ಯಾಟ್ಫಾರ್ಮ್ನಲ್ಲಿ ನಡೆದಿದೆ. ಈ ಕುರಿತಾಗಿ ಮೆಟ್ರೋ ಮೇಲಧಿಕಾರಿಗಳಿಗೆ ಮಹಿಳೆಯೊಬ್ಬರು ದೂರು ನೀಡಿದ್ದು, ‘ನಾನು ಸುರಕ್ಷಿತಳಲ್ಲ ಎಂದು ಭಾಸವಾಗುತ್ತಿದೆ’ ಎಂದಿದ್ದಾರೆ. ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಬೆಂಗಳೂರು, ಮಾರ್ಚ್ 20: ಮಹಿಳೆ ಮುಂದೆ ತನ್ನ ಖಾಸಗಿ ಅಂಗ ಸ್ಪರ್ಶಿಸಿಕೊಂಡು ನಮ್ಮ ಮೆಟ್ರೋ (Namma Metro) ಸಿಬ್ಬಂದಿಯಿಂದಲೇ ಅಸಭ್ಯ ವರ್ತನೆ ತೋರಿರುವಂತಹ ಘಟನೆ ನಗರದ ಜಾಲಹಳ್ಳಿ ಮೆಟ್ರೋ ಪ್ಲ್ಯಾಟ್ಫಾರ್ಮ್ನಲ್ಲಿ ನಡೆದಿದೆ. ಈ ಕುರಿತಾಗಿ ಮೆಟ್ರೋ ಮೇಲಧಿಕಾರಿಗಳಿಗೆ ಮಹಿಳೆಯೊಬ್ಬರು ದೂರು ನೀಡಿದ್ದಾರೆ. ಆದರೆ ಮೆಟ್ರೋ ಅಧಿಕಾರಿಗಳಿಗೆ ದೂರು ನೀಡಿದರೂ ಕ್ರಮ ಕೈಗೊಳ್ಳದ ಹಿನ್ನೆಲೆ ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿ ಜಾಲಹಳ್ಳಿ ಮೆಟ್ರೋ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ.
ಮಹಿಳೆ ದೂರಿನಲ್ಲೇನಿದೆ?
ಮೆಟ್ರೋ ಸಿಬ್ಬಂದಿ ಓರ್ವ ಪ್ಲಾಟ್‌ಫಾರಂನ ಎದುರು ಭಾಗದಲ್ಲಿ ತನ್ನ ಖಾಸಗಿ ಅಂಗವನ್ನು ಸ್ಪರ್ಶಿಸಿಕೊಂಡು ದುರ್ವರ್ತನೆ ತೋರಿದ್ದಾನೆ. ಕೆಲವು ಸನ್ನೆಗಳನ್ನು ಮಾಡುತ್ತ ನಿರಂತರವಾಗಿ ನನ್ನನ್ನು ದಿಟ್ಟಿಸಿ ನೋಡುತ್ತಿರುವಂತಹ ಅನುಭವ ನನಗೆ ಇಂದು ಮಧ್ಯಾಹ್ನ 2:30 ರ ಸುಮಾರಿಗೆ ಉಂಟಾಗಿದೆ. ಹಗಲು ಹೊತ್ತಿನಲ್ಲಿಯೇ ಇಂತಹ ಘಟನೆ ತುಂಬಾ ಕೆಟ್ಟದಾಗಿತ್ತು.
ಇದನ್ನೂ ಓದಿ: ಮೆಟ್ರೋ ಅಧಿಕಾರಿಯಿಂದ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ಆರೋಪ; FIR ದಾಖಲು
ನಾನು ಆತನನ್ನು ಪ್ರಶ್ನೆ ಮಾಡಿದೆ. ಆದರೆ ಆತ ಕೆಲವು ಸನ್ನೆಗಳನ್ನು ಮಾಡುವ ಮೂಲಕ ನನ್ನನ್ನು ದಿಟ್ಟಿಸಿ ನೋಡುತ್ತಲೇ ಇದ್ದ. ಹಾಗಾಗಿ ನಾನು ವಿಡಿಯೋ ಮಾಡಲು ಆರಂಭಿಸಿದ ಬಳಿಕ ಅವನು ಅಲ್ಲಿಂದ ಹೊರಟು ಹೋದ ಎಂದು ಮಹಿಳೆ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ಘಟನೆಯ ವಿಡಿಯೋದೊಂದಿಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮೇಲ್ ಮಾಡಿರುವ ಮಹಿಳೆ ‘ನಾನು ಇಲ್ಲಿ ಸುರಕ್ಷಿತಳಲ್ಲ ಎಂಬಂತೆ ಭಾಸವಾಗುತ್ತಿದೆ’ ಎಂದಿದ್ದಾರೆ. ಸಿಬ್ಬಂದಿ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಮೆಟ್ರೋ ಅಧಿಕಾರಿಯಿಂದ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ
ರಾಜಾಜಿನಗರ ಮತ್ತು ಯಶವಂತಪುರ ಮೆಟ್ರೋ ಸ್ಟೇಷನ್ನಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡಿತ್ತಿರುವ ಮಹಿಳೆಯರಿಬ್ಬರಿಗೆ ಮೆಟ್ರೋ ನಿಲ್ದಾಣದ ಸಹಾಯಕ ವಿಭಾಗಾಧಿಕಾರಿ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೂಡ ಇತ್ತೀಚೆಗೆ ಕೇಳಿಬಂದಿತ್ತು.
ಇದನ್ನೂ ಓದಿ: ನಮ್ಮ ಮೆಟ್ರೋದಲ್ಲಿ ಮತ್ತೊಂದು ಲೈಂಗಿಕ ಕಿರುಕುಳ ಪ್ರಕರಣ; ಯುವತಿಯ ಖಾಸಗಿ ಅಂಗ ಸ್ಪರ್ಶಿಸಿ ದುರ್ವರ್ತನೆ
ಸ್ಯಾಂಡಲ್‌ವುಡ್ ಸೋಪ್ ಫ್ಯಾಕ್ಟರಿ ಮೆಟ್ರೋ ನಿಲ್ದಾಣದ ಸಹಾಯಕ ವಿಭಾಗಾಧಿಕಾರಿಯಾಗಿರೋ ಗಜೇಂದ್ರ ಪಿ, ಲೈಂಗಿಕ ಕಿರುಕುಳ ನೀಡಿದ್ದಾನಂತೆ. ಮೈ ಕೈ ಮುಟ್ಟಿ, ಅಶ್ಲೀಲವಾಗಿ ಬೈದಿರುವ ಬಗ್ಗೆ ಬಿಎಂಆರ್ಸಿಎಲ್ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ರೂ ಪ್ರಯೋಜನವಾಗಿರಲಿಲ್ಲ. ಹೀಗಾಗಿ ಕರ್ನಾಟಕ ರಾಜ್ಯಕಾರ್ಮಿಕ ಪರಿಷತ್ ಸಂಘಟನೆಯ ಸಹಕಾರದೊಂದಿಗೆ ಸುಬ್ರಮ್ಮಣ್ಯ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಎಫ್ಐಆರ್ ಕೂಡ ದಾಖಲಾಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:32 am, Wed, 20 March 24