ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಇನ್ಮುಂದೆ ರಾಣಿ ಚನ್ನಮ್ಮ ಸಾರಿಗೆ ಸಂಸ್ಥೆ: ಸಿಎಂ ಘೋಷಣೆ
ಕಿತ್ತೂರು ಉತ್ಸವದ ಸಮಾರೋಪ ಸಮಾರಂಭದಲ್ಲಿ ಸಿಎಂ ಡಿಕೆ ಶಿವಕುಮಾರ್ ಹಲವು ಮಹತ್ವದ ಘೋಷಣೆಗಳನ್ನು ಮಾಡಿದರು. ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯನ್ನು ರಾಣಿ ಚನ್ನಮ್ಮ ಸಾರಿಗೆ ಸಂಸ್ಥೆ ಎಂದು ಮರುನಾಮಕರಣ ಮಾಡುವುದಾಗಿ ತಿಳಿಸಿದರು. ಕಿತ್ತೂರು ಕೋಟೆ ಮರುಸೃಷ್ಟಿಗೆ 40 ಕೋಟಿ ರೂ. ಹಾಗೂ ವೃಷಭೇಂದ್ರ ಏತ ನೀರಾವರಿಗೆ 500 ಕೋಟಿ ರೂ. ಮೀಸಲಿಡುವುದಾಗಿ ಸಿಎಂ ಘೋಷಿಸಿದರು.
ಬೆಳಗಾವಿ, ಅಕ್ಟೋಬರ್ 25: ಬೆಳಗಾವಿ ಜಿಲ್ಲೆಯ ಕಿತ್ತೂರು ಪಟ್ಟಣದಲ್ಲಿ ನಡೆದ ಕಿತ್ತೂರು ಉತ್ಸವದ ಸಮಾರೋಪ ಸಮಾರಂಭದಲ್ಲಿ ಸಿಎಂ ಡಿಕೆ ಶಿವಕುಮಾರ್ ಮಹತ್ವದ ಘೋಷಣೆ ಮಾಡಿದ್ದಾರೆ. ‘ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯನ್ನು ಇನ್ನು ಮುಂದೆ ರಾಣಿ ಚನ್ನಮ್ಮ ಸಾರಿಗೆ ಸಂಸ್ಥೆ’ಯನ್ನಾಗಿ ಘೋಷಣೆ ಮಾಡುವುದಾಗಿ ಅವರು ತಿಳಿಸಿದ್ದಾರೆ. ‘ಕಿತ್ತೂರು ರಾಣಿ ಚನ್ನಮ್ಮನ ಕೋಟೆ ಮರುಸೃಷ್ಟಿಗೆ ಶಾಸಕರಿಂದ ಬೇಡಿಕೆ ಇಡಲಾಗಿದೆ. ಮುಂದಿನ ಬಜೆಟ್ನಲ್ಲಿ ಕಿತ್ತೂರು ಕೋಟೆ ಮರುಸೃಷ್ಟಿಗೆ 40 ಕೋಟಿ ರೂ ಸೇರಿಸುವಂತೆ ಈಗಲೇ ಆದೇಶ ಮಾಡುತ್ತೇನೆ. ಈ ಭಾಗದ ವೃಷಭೇಂದ್ರ ಏತನೀರಾವರಿಗೆ 500 ಕೋಟಿ ರೂ. ಮೀಸಲಿಡುತ್ತೇನೆ. ಇತಿಹಾಸ ಉಳಿಸಬೇಕು ಅಂದರೆ ಇಂತಹ ಕಾರ್ಯಕ್ರಮ ರೂಪಿಸಬೇಕು’ ಎಂದು ಹೇಳಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Follow Us

