ಮೂಗು ಹೇಳುತ್ತೆ ನಿಮ್ಮ ವ್ಯಕ್ತಿತ್ವ! ಮೂಗಿನ ಆಕಾರ ಮತ್ತು ವ್ಯಕ್ತಿತ್ವದ ಬಗ್ಗೆ ಸಾಮುದ್ರಿಕ ಶಾಸ್ತ್ರ ಹೇಳೋದೇನು ನೋಡಿ

Updated on: Jun 19, 2026 | 6:32 AM

ಪ್ರಾಚೀನ ಸಾಮುದ್ರಿಕ ಶಾಸ್ತ್ರದ ಪ್ರಕಾರ, ಮನುಷ್ಯನ ಮೂಗಿನ ಆಕಾರವು ಅವರ ಸ್ವಭಾವ, ಗುಣಗಳು ಮತ್ತು ಭವಿಷ್ಯದ ಬಗ್ಗೆ ಮಹತ್ವದ ಮಾಹಿತಿ ನೀಡುತ್ತದೆ. ನೇರ, ಬಾಗಿದ, ಅಗಲವಾದ ಅಥವಾ ಚಿಕ್ಕ ಮೂಗು ಹೊಂದಿರುವವರು ವಿಭಿನ್ನ ವ್ಯಕ್ತಿತ್ವ ಲಕ್ಷಣಗಳನ್ನು ಪ್ರದರ್ಶಿಸುತ್ತಾರೆ. ಈ ಅಂಗದ ವಿನ್ಯಾಸವು ಒಬ್ಬರ ಬದುಕು ಮತ್ತು ಅದೃಷ್ಟದ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂಬುದನ್ನು ಜ್ಯೋತಿಷ್ಯ ಶಾಸ್ತ್ರವು ವಿವರಿಸುತ್ತದೆ.

ಮುಖವು ಮನಸ್ಸಿನ ಕನ್ನಡಿ ಎಂಬಂತೆ, ಮುಖದ ಪ್ರತಿಯೊಂದು ಅಂಗವೂ ವ್ಯಕ್ತಿಯ ಸ್ವಭಾವ, ಗುಣ ಮತ್ತು ಭವಿಷ್ಯದ ಬಗ್ಗೆ ಅಮೂಲ್ಯ ಮಾಹಿತಿಯನ್ನು ನೀಡುತ್ತದೆ. ಅದರಲ್ಲೂ ವಿಶೇಷವಾಗಿ ಮೂಗು, ಮುಖದ ಕೇಂದ್ರಬಿಂದುವಾಗಿ ನಮ್ಮ ವ್ಯಕ್ತಿತ್ವವನ್ನು ಎತ್ತಿ ತೋರಿಸುವ ಪ್ರಮುಖ ಅಂಗವಾಗಿದೆ. ಪ್ರಾಚೀನ ವೈದಿಕ ಜ್ಯೋತಿಷ್ಯ ಮತ್ತು ಸಾಮುದ್ರಿಕ ಶಾಸ್ತ್ರದ ಪ್ರಕಾರ, ಮೂಗಿನ ಆಕಾರವನ್ನು ಗಮನಿಸಿ ವ್ಯಕ್ತಿಯ ಗುಣಲಕ್ಷಣಗಳನ್ನು ವಿಶ್ಲೇಷಿಸಬಹುದು ಎಂಬುದನ್ನು ಖ್ಯಾತ ಜ್ಯೋತಿಷಿ ಹಾಗೂ ವಾಸ್ತು ತಜ್ಞ ಡಾ. ಬಸವರಾಜ ಗುರೂಜಿ ಇಲ್ಲಿ, ಅಂದರೆ, ‘ಟಿವಿ9’ನ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ವಿವರಿಸಿದ್ದಾರೆ.

ವಿವಿಧ ಆಕಾರಗಳ ಮೂಗು ವಿಭಿನ್ನ ಅರ್ಥಗಳನ್ನು ಹೊಂದಿದೆ. ಉದಾಹರಣೆಗೆ, ನೇರ ಮತ್ತು ಚೂಪಾದ ಮೂಗು ಹೊಂದಿರುವವರು ತೀಕ್ಷ್ಣ ಬುದ್ಧಿವಂತರು, ಶಿಸ್ತುಬದ್ಧರು ಹಾಗೂ ಕಠಿಣ ಪರಿಶ್ರಮಿಗಳಾಗಿರುತ್ತಾರೆ. ಗಿಳಿಯ ಮೂಗಿನಂತೆ ಬಾಗಿದ ಮೂಗು ಇರುವವರು ಪ್ರಾಮಾಣಿಕರು, ನಿಷ್ಠಾವಂತರು ಮತ್ತು ಸ್ವಪ್ರಯತ್ನದಿಂದ ಯಶಸ್ಸು ಸಾಧಿಸುವವರು. ಅಗಲವಾದ ಮೂಗು ಹೊಂದಿರುವವರು ನಾಯಕತ್ವ ಗುಣ, ಸಾಮಾಜಿಕ ಕಳಕಳಿ ಹಾಗೂ ಆಡಳಿತಾತ್ಮಕ ಸಾಮರ್ಥ್ಯ ಹೊಂದಿರುತ್ತಾರೆ. ಚಿಕ್ಕ ಅಥವಾ ಚಪ್ಪಟೆಯಾದ ಮೂಗು ಇರುವವರು ಭಾವಜೀವಿಗಳು, ಬಾಂಧವ್ಯಗಳಿಗೆ ಹೆಚ್ಚು ಪ್ರಾಶಸ್ತ್ಯ ನೀಡುವವರು ಹಾಗೂ ಕೌಶಲ್ಯವಂತರಾಗಿರುತ್ತಾರೆ ಎಂದು ಅವರು ವಿವರಿಸಿದ್ದಾರೆ. ಕೈರೇಖೆಗಳಂತೆ ಮೂಗಿನ ಆಕಾರವೂ ನಮ್ಮ ಅದೃಷ್ಟ ಮತ್ತು ಭವಿಷ್ಯದ ರಹಸ್ಯಗಳನ್ನು ಒಳಗೊಂಡಿರುತ್ತದೆ. ಇದು ಕೇವಲ ದೈಹಿಕ ಲಕ್ಷಣವಾಗಿರದೆ, ವ್ಯಕ್ತಿಯ ಅಸಲಿ ಸ್ವಭಾವ ಮತ್ತು ಜೀವನದ ಹಾದಿಯ ಮೇಲೆ ಪ್ರಭಾವ ಬೀರುವ ಒಂದು ಪ್ರಮುಖ ಜ್ಯೋತಿಷ್ಯ ಸೂಚಕವಾಗಿದೆ ಎಂದು ಅವರು ಹೇಳಿದ್ದಾರೆ.

Loading...
Unable to load recommendations.
Follow Us
ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More