Loading video

ಮತ್ತೊಂದು ಹನಿಟ್ರ್ಯಾಪ್​​ ಬಯಲಿಗೆ: ರಾಜಣ್ಣಗೆ ಮಾತ್ರವಲ್ಲ ಪುತ್ರನಿಗೂ ಬಲೆಗೆ ಬೀಳಿಸುವ ಸಂಚು!

|

Updated on: Mar 20, 2025 | 5:55 PM

ರಾಜ್ಯ ರಾಜಕೀಯದಲ್ಲಿ ಹನಿಟ್ರ್ಯಾಪ್ ಹಂಗಾಮ ಜೋರಾಗಿದೆ. ವಿಧಾನಸಭೆಯಲ್ಲಿ ಹನಿಟ್ರ್ಯಾಪ್ ಜಾಲದ ಬಗ್ಗೆ ಬಿಸಿ, ಬಿಸಿ ಚರ್ಚೆಯಾಗಿದ್ದು, ಸಚಿವ ಕೆ.ಎನ್‌ ರಾಜಣ್ಣ ಅವರು ನನ್ನ ಮೇಲೆ ಹನಿಟ್ರ್ಯಾಪ್‌ ಪ್ರಯತ್ನ ಆಗಿರೋದು ನಿಜ ಎಂದು ಒಪ್ಪಿಕೊಂಡಿದ್ದಾರೆ. ಕೇವಲ ರಾಜಣ್ಣ ಮಾತ್ರವಲ್ಲ ಅವರ ಪುತ್ರನಿಗೂ ಹನಿಟ್ರ್ಯಾಪ್ ಯತ್ನ ನಡೆದಿದೆ ಎನ್ನುವ ಸ್ಫೋಟ ಅಂಶ ಬೆಳಕಿಗೆ ಬಂದಿದೆ.

ಬೆಂಗಳೂರು, (ಮಾರ್ಚ್​ 20): ರಾಜ್ಯ ರಾಜಕೀಯದಲ್ಲಿ ಹನಿಟ್ರ್ಯಾಪ್ ಹಂಗಾಮ ಜೋರಾಗಿದೆ. ವಿಧಾನಸಭೆಯಲ್ಲಿ ಹನಿಟ್ರ್ಯಾಪ್ ಜಾಲದ ಬಗ್ಗೆ ಬಿಸಿ, ಬಿಸಿ ಚರ್ಚೆಯಾಗಿದ್ದು, ಸಚಿವ ಕೆ.ಎನ್‌ ರಾಜಣ್ಣ ಅವರು ನನ್ನ ಮೇಲೆ ಹನಿಟ್ರ್ಯಾಪ್‌ ಪ್ರಯತ್ನ ಆಗಿರೋದು ನಿಜ ಎಂದು ಒಪ್ಪಿಕೊಂಡಿದ್ದಾರೆ. ಒಬ್ಬರೂ, ಇಬ್ಬರಲ್ಲ 48 ನಾಯಕರ ಹನಿಟ್ರ್ಯಾಪ್ ವಿಡಿಯೋ ಇರೋ ಮಾಹಿತಿ ನನಗಿದೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ. ಕೇವಲ ರಾಜಣ್ಣ ಅವರಿಗೆ ಮಾತ್ರವಲ್ಲ ಅವರ ಪುತ್ರ ವಿಧಾನಪರಿಷತ್ ಸದಸ್ಯ ರಾಜೇಂದ್ರ ಅವರನ್ನ ಸಹ ಈ ಹನಿಟ್ರ್ಯಾಪ್​ ಬಲೆಗೆ ಬೀಳಿಸುವ ಯತ್ನ ನಡೆದಿದೆ. ಈ ಬಗ್ಗೆ ಸ್ವತಃ ರಾಜೇಂದ್ರ ಅವರೇ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ​​​ನನ್ನ ಮೇಲೆ ಹನಿಟ್ರ್ಯಾಪ್ ಯತ್ನ: ಸದನದಲ್ಲೇ ಬಹಿರಂಗಪಡಿಸಿದ ಸಚಿವ ರಾಜಣ್ಣ

ರಾಜಣ್ಣ ಅವರು ಸದನದಲ್ಲಿ ಹನಿಟ್ರ್ಯಾಪ್​ ಪ್ರಸ್ತಾಪಿಸುತ್ತಿದ್ದಂತೆಯೇ ಇತ್ತ ಅವರ ಪುತ್ರ ರಾಜೇಂದ್ರ ಪ್ರತಿಕ್ರಿಯಿಸಿ, ಹನಿಟ್ರ್ಯಾಪ್ ಆಗ್ತಿರುವ ಬಗ್ಗೆ ತಂದೆಯೇ ಒಪ್ಪಿಕೊಂಡಿದ್ದಾರೆ. 2 ತಿಂಗಳಿಂದ ನಮ್ಮ ತಂದೆಗೆ ಹನಿಟ್ರ್ಯಾಪ್ ಮಾಡಲು ಯತ್ನಿಸಿದ್ದಾರೆ. ಅಲ್ಲದೇ 6 ತಿಂಗಳಿನಿಂದ ನನ್ನ ಮೇಲೆ ಹನಿಟ್ರ್ಯಾಪ್ ಪ್ರಯತ್ನ ನಡೆಯುತ್ತಿದೆ. ತನಿಖೆ ಮಾಡುವುದಾಗಿ ಗೃಹ ಸಚಿವರು ಹೇಳಿದ್ದಾರೆ. ರಾಜಕೀಯ ಅಥವಾ ವೈಯಕ್ತಿಕನಾ ಎಂದು ತನಿಖೆ ಆಗಲಿ. ಪೆನ್‌ ಡ್ರೈವ್​, ಸಿಡಿ ಬಗ್ಗೆ ಅನೇಕ ಚರ್ಚೆ ಇದೆ. ಅನೇಕ ರಾಜಕಾರಣಿಗಳು ಪೆನ್​ಡ್ರೈವ್ ಬಗ್ಗೆ ಮಾತನಾಡಿದ್ದಾರೆ. ಇದರ ಹಿಂದೆ ಯಾರೋ ಇದ್ದಾರೆ, ಆದ್ರೆ ಯಾರೆಂದು ಗೊತ್ತಿಲ್ಲ. ದೂರು ಕೊಡುತ್ತೇವೆ, ತನಿಖೆ ಆಗಬೇಕಿದೆ ಎಂದರು.

ಸಚಿವ ಕೆ.ಎನ್​.ರಾಜಣ್ಣ ಬಗ್ಗೆ ಇಡೀ ರಾಜ್ಯಕ್ಕೆ ಗೊತ್ತು. .ರಾಜಣ್ಣ ನೇರ‌ನುಡಿ ಇರುವವರು, ಅವರನ್ನು ಕುಗ್ಗಿಸೋಕೆ ಅಪ್ಪ, ಮಕ್ಕಳಿಗೆ ಕೆಟ್ಟ ಹೆಸರು ತರಬೇಕೆಂದು ಮಾಡಿರಬಹುದು. ಹನಿಟ್ರ್ಯಾಪ್ ಅಂದ್ರೆ ನಮ್ಮ ಜೊತೆಯೇ ಇದ್ದಾರೆ ಅಂತಾ ಅಲ್ಲ. ವಿಡಿಯೋ ಕಾಲ್​ ಮಾಡಿರೋದು ಆಗಿರುತ್ತೆ. ಯಾರೇ ಮಾಡಿರಲಿ ಪಕ್ಷಾತೀತಿವಾಗಿ ತನಿಖೆ ಆಗಬೇಕು. ಹಿಂದೆ ಹಣಕ್ಕಾಗಿ ರಾಜಕಾರಣಿಗಳು, ಉದ್ಯಮಿಗಳ ಮೇಲೆ ಆಗಿದೆ. 48 ಜನರ ಮೇಲೆ ಹನಿಟ್ರ್ಯಾಪ್ ಆಗಿದೆ ಎಂದು ಸಚಿವರು ಹೇಳಿದ್ದಾರೆ. ಯಾರ ಮೇಲೆ ಆದರೂ ತಪ್ಪೇ, ಇದು ಮುಕ್ತಾಯ ಆಗಬೇಕು ಅಷ್ಟೇ ಎಂದು ಆಗ್ರಹಿಸಿದರು.

Published on: Mar 20, 2025 05:49 PM