ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟೋರಿಯಸ್ ಕ್ರಿಮಿನಲ್ ಉಮೇಶ್ ರೆಡ್ಡಿ ಬಿಂದಾಸ್ ಲೈಫ್: ಸುಪ್ರೀಂ ಆದೇಶಕ್ಕೇ ಇಲ್ಲ ಕಿಮ್ಮತ್ತು
ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೆಲವು ಕೈದಿಗಳಿಗೆ ವಿಐಪಿ ಸೌಲಭ್ಯಗಳು ದೊರೆಯುತ್ತಿವೆ. ರೇಪಿಸ್ಟ್ ಉಮೇಶ್ ರೆಡ್ಡಿ ಮತ್ತು ರನ್ಯಾ ರಾವ್ ಚಿನ್ನ ಕಳ್ಳಸಾಗಣೆ ಪ್ರಕರಣದ ಆರೋಪಿ ಮೊಬೈಲ್ ಬಳಸುತ್ತಿರುವ ದೃಶ್ಯಾವಳಿಗಳು ಲಭ್ಯವಾಗಿವೆ. ನಟ ದರ್ಶನ್ ಹಾಸಿಗೆ-ದಿಂಬಿಗಾಗಿ ಗೋಗರೆಯುತ್ತಿರುವಾಗ, ಇವರಿಗೆ ರಾಜಾತಿಥ್ಯ ಸಿಗುತ್ತಿರುವುದು ಸುಪ್ರೀಂ ಕೋರ್ಟ್ ಆದೇಶದ ಸ್ಪಷ್ಟ ಉಲ್ಲಂಘನೆಯಾಗಿದೆ.
ಬೆಂಗಳೂರು, ನವೆಂಬರ್ 8: ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೆಲವು ಕೈದಿಗಳಿಗೆ ವಿಶೇಷ ಸೌಲಭ್ಯಗಳು ಲಭ್ಯವಾಗುತ್ತಿವೆ ಎಂಬ ಆರೋಪಗಳು ಇದೀಗ ಮತ್ತೆ ತೀವ್ರ ಚರ್ಚೆಗೆ ಗ್ರಾಸವಾಗಿವೆ. ನಟ ದರ್ಶನ್ ಅವರಿಗೆ ಕನಿಷ್ಠ ಹಾಸಿಗೆ ಮತ್ತು ದಿಂಬು ಪಡೆಯಲು ಕಷ್ಟವಾಗುತ್ತಿರುವ ಸಂದರ್ಭದಲ್ಲಿ, ಇತರ ಕೈದಿಗಳಾದ ಉಮೇಶ್ ರೆಡ್ಡಿ ಮತ್ತು ರನ್ಯಾ ರಾವ್ ಚಿನ್ನ ಕಳ್ಳಸಾಗಣೆ ಪ್ರಕರಣದ ಆರೋಪಿ ಮೊಬೈಲ್ ಫೋನ್‌ಗಳನ್ನು ಆರಾಮವಾಗಿ ಬಳಸುತ್ತಿರುವುದು ಕಂಡುಬಂದಿದೆ. ‘ಟಿವಿ9’ಗೆ ಲಭ್ಯವಾದ ದೃಶ್ಯಾವಳಿಗಳ ಪ್ರಕಾರ, ಕುಖ್ಯಾತ ರೇಪಿಸ್ಟ್ ಉಮೇಶ್ ರೆಡ್ಡಿ ಜೈಲಿನೊಳಗೆ ಮೊಬೈಲ್ ಫೋನ್ ಬಳಸಿಕೊಂಡು ಮಾತನಾಡುತ್ತಿದ್ದು, ಟಿವಿ ವೀಕ್ಷಿಸುತ್ತಿರುವುದು ಕಂಡುಬಂದಿದೆ. ಜೈಲುಗಳಲ್ಲಿ ವಿಶೇಷ ಸೌಲಭ್ಯಗಳನ್ನು ನೀಡದಂತೆ ಸುಪ್ರೀಂ ಕೋರ್ಟ್ ಎಲ್ಲಾ ಜೈಲುಗಳಿಗೆ ಸ್ಪಷ್ಟ ಸೂಚನೆ ನೀಡಿದ್ದರೂ, ಪರಪ್ಪನ ಅಗ್ರಹಾರ ಜೈಲಿನಲ್ಲಿ ಈ ಆದೇಶವನ್ನು ಉಲ್ಲಂಘಿಸಲಾಗುತ್ತಿದೆ. ಜೈಲು ಅಧಿಕಾರಿಗಳ ಧೋರಣೆ ಮತ್ತು ವ್ಯವಸ್ಥೆಯ ಕುರಿತು ತೀವ್ರ ಅಸಮಾಧಾನ ವ್ಯಕ್ತವಾಗಿದೆ.
