ಸಂಸದ ಪ್ರಜ್ವಲ್​ ರೇವಣ್ಣನ ಸರ್ಕಾರಿ ನಿವಾಸಕ್ಕೆ ಬೀಗ ಜಡಿದ ಎಸ್​ಐಟಿ

|

Updated on: May 05, 2024 | 9:00 AM

ಲೈಂಗಿಕ ಕಿರುಕುಳ ಆರೋಪ ಹೊತ್ತಿರುವ ಹಾಸನ ಸಂಸದ ಪ್ರಜ್ವಲ್​ ರೇವಣ್ಣ(Prajwal Revanna)  ಅವರ ಸರ್ಕಾರಿ ನಿವಾಸಕ್ಕೆ ಎಸ್​ಐಟಿ ತಂಡ ಬೀಗ ಜಡಿದಿದೆ. ಸಂತ್ರಸ್ತೆಯ ಸಮ್ಮುಖದಲ್ಲಿ ನಿನ್ನೆ ರಾತ್ರಿ ಎಸ್​ಐಟಿ ಸ್ಥಳ ಮಹಜರು ನಡೆಸಿದೆ, ಮಹಜರು ಪ್ರಕ್ರಿಯೆ ಬಳಿಕ ನಿವಾಸದ ಕೀ ವಶಕ್ಕೆ ಪಡೆದಿದೆ. ಸಂಸದರ ನಿವಾಸವನ್ನ ಸಂಪೂರ್ಣವಾಗಿ ಸೀಜ್ ಮಾಡಲಾಗಿದ್ದು, ನಿನ್ನೆ ರಾತ್ರಿ 5 ಗಂಟೆ ಕಾಲ ಮಹಜರು, ಪರಿಶೀಲನೆ ನಡೆಸಲಾಗಿದೆ.

ಸಂಸದರ ನಿವಾಸದ ಮೊದಲ ಮಹಡಿಯ ಕೊಠಡಿಯಲ್ಲಿ ಅತ್ಯಾಚಾರ ಆಗಿದೆ ಎನ್ನುವ ಆರೋಪ ಕೇಳಿಬಂದಿದೆ. ಸಂಸದರ ಸರ್ಕಾರಿ ನಿವಾಸದಲ್ಲೇ ಅಶ್ಲೀಲ ವಿಡಿಯೋ ರೆಕಾರ್ಡ್ ಶಂಕೆ ವ್ಯಕ್ತವಾಗಿದೆ. ಅಶ್ಲೀಲ ವಿಡಿಯೋ ರೆಕಾರ್ಡ್ ಸಂಬಂಧವೂ ಎಸ್​ಐಟಿ ತನಿಖೆ ನಡೆಸಲಿದೆ. ಸಂಸದರ ನಿವಾಸದಿಂದ ಬೆಂಗಳೂರಿಗೆ ಹೋಗಿ ವಿದೇಶಕ್ಕೆ ಪ್ರಜ್ವಲ್ ತೆರಳಿದ್ದಾರೆ ಎನ್ನಲಾಗಿದೆ.

ಹಾಸನ ನಗರದ ಆರ್‌ಸಿ ರಸ್ತೆಯಲ್ಲಿರುವ ಸಂಸದರ ಸರ್ಕಾರಿ ನಿವಾಸವನ್ನು ಮುಚ್ಚಲಾಗಿದೆ. ರೇವಣ್ಣ ಬಂಧನ ಬೆನ್ನಲ್ಲೇ SIT ಮುಂದೆ ಹಾಜರಾಗಲು ಪ್ರಜ್ವಲ್ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ನಾಳೆ ಮಧ್ಯಾಹ್ನದೊಳಗೆ SIT ಮುಂದೆ ಹಾಜರಾಗಲು ಪ್ರಜ್ವಲ್ ಮುಂದಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಇತರೆ ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ