ಕಾಲಿಗೆ ಸರಪಳಿ ಹಾಕಿದರೂ ಕೈದಿ ಪರಾರಿ; ತಲೆಮೇಲೆ ಕೈ ಹೊತ್ತು ಕುಳಿತ ಪೊಲೀಸರು

|

Updated on: Nov 05, 2024 | 9:44 PM

ಒಡಿಶಾದಲ್ಲಿ ಕಾಲಿಗೆ ಸರಪಳಿ ಹಾಕಿದ್ದರೂ ದುಷ್ಕರ್ಮಿಯೊಬ್ಬ ಪರಾರಿಯಾಗಿದ್ದಾನೆ. ಇದೀಗ ಪೊಲೀಸರು ಆತನಿಗಾಗಿ ಮೂಲೆ ಮೂಲೆಗಳಲ್ಲಿ ಹುಡುಕಾಟ ನಡೆಸುತ್ತಿದ್ದಾರೆ. ಅಕ್ಟೋಬರ್ 27ರಂದು ರಾತ್ರಿ ಮಹಾರಾಷ್ಟ್ರದ ಅಕೋಲಾ ಪೊಲೀಸರು ಗಾಂಜಾ ಕಳ್ಳಸಾಗಣೆ ಪ್ರಕರಣದಲ್ಲಿ ಆರೋಪಿ ಜುಯಲ್ ಸಾಬರ್‌ನನ್ನು ಬಂಧಿಸಿದ್ದರು. ಪೊಲೀಸರು ಆತನನ್ನು ಗಜಪತಿ ಜಿಲ್ಲೆಯ ಮೋಹನ ಎಂಬಲ್ಲಿಗೆ ವಶಕ್ಕೆ ತೆಗೆದುಕೊಂಡರು.

ಪುರಿ: ಒಡಿಶಾದ ಗಜಪತಿ ಜಿಲ್ಲೆಯಲ್ಲಿ ಪಾತಕಿಯೊಬ್ಬ ಪೊಲೀಸರ ಕಪಿಮುಷ್ಠಿಯಿಂದ ಸುಲಭವಾಗಿ ತಪ್ಪಿಸಿಕೊಂಡಿರುವ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ವಿಶೇಷವೆಂದರೆ ಈ ದರೋಡೆಕೋರನನ್ನು ಪೊಲೀಸರು ಬಂಧಿಸಿದ್ದು, ವೇಗವಾಗಿ ನಡೆದುಕೊಂಡು ಓಡಿಹೋಗದಂತೆ ಕಾಲಿಗೆ ಸರಪಳಿ ಕೂಡ ಕಟ್ಟಿದ್ದರು. ಆದರೆ, ಹೊಟೇಲ್‌ನಲ್ಲಿದ್ದ ಪೊಲೀಸರು ಎಸಿಯಲ್ಲಿ ಕುಳಿತು ಊಟ ಮಾಡುವಾಗ ದರೋಡೆಕೋರ ಕುಪ್ಪಳಿಸುತ್ತಲೇ ಅಲ್ಲಿಂದ ಪರಾರಿಯಾಗಿದ್ದಾನೆ. ಈ ದೃಶ್ಯ ಹೋಟೆಲ್​ನ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಅಕ್ಟೋಬರ್ 27ರಂದು ರಾತ್ರಿ ಮಹಾರಾಷ್ಟ್ರದ ಅಕೋಲಾ ಪೊಲೀಸರು ಗಾಂಜಾ ಕಳ್ಳಸಾಗಣೆ ಪ್ರಕರಣದಲ್ಲಿ ಆರೋಪಿ ಜುಯಲ್ ಸಾಬರ್‌ನನ್ನು ಬಂಧಿಸಿದ್ದರು. ಪೊಲೀಸರು ಆತನನ್ನು ಗಜಪತಿ ಜಿಲ್ಲೆಯ ಮೋಹನ ಎಂಬಲ್ಲಿಗೆ ವಶಕ್ಕೆ ತೆಗೆದುಕೊಂಡರು. ರಾತ್ರಿ 2 ಗಂಟೆಗೆ ಪೊಲೀಸರು ಹೋಟೆಲ್‌ನಲ್ಲಿ ತಂಗಿದ್ದರು. ಬೆಳಗ್ಗೆ 8 ಗಂಟೆ ಸುಮಾರಿಗೆ ಕೈದಿಯ ಜೊತೆ ಪೊಲೀಸರು ಇಲ್ಲದಿದ್ದಾಗ ಬಾಗಿಲು ತೆರೆದು ತೆರಳಿದ್ದರು. ಈ ವೇಳೆ ಆತ ಪರಾರಿಯಾಗಿದ್ದಾನೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ