ಕೇಂದ್ರದ ಮಂತ್ರಿಯೊಬ್ಬರನ್ನು ಮನಬಂದಂತೆ ಹೀಯಾಳಿಸಿರುವ ಅಧಿಕಾರಿಯ ವಿರುದ್ಧ ಕ್ರಮ ಯಾಕಿಲ್ಲ? ಪ್ರಲ್ಹಾದ್ ಜೋಶಿ

|

Updated on: Nov 05, 2024 | 2:26 PM

ದ್ವಿತೀಯ ದರ್ಜೆ ಗುಮಾಸ್ತರೊಬ್ಬರು ಸಾವಿಗೆ ಶರಣಾಗುವ ಮುನ್ನ ಬರೆದಿಟ್ಟಿರುವ ಡೆತ್​ನೋಟ್​ನಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಆಪ್ತನ ಹೆಸರು ಉಲ್ಲೇಖಿಸಿರುವುದಕ್ಕೆ ಪ್ರತಿಕ್ರಿಯಿಸಿದ ಜೋಶಿ, ಇದಕ್ಕೆಲ್ಲ ಗ್ಯಾರಂಟಿಗಳು ಕಾರಣ, ಅಭಿವೃದ್ಧಿ ಕಾರ್ಯಗಳಿಗೆ ಬಿಡುಗಡೆಯಾಗುತ್ತಿದ್ದ ದುಡ್ಡಲ್ಲಿ ಕಮೀಶನ್ ಪಡೆಯುತ್ತಿದ್ದ ಶಾಸಕರು ಮತ್ತು ಮಂತ್ರಿಗಳು ಈಗ ವರ್ಗಾವಣೆಯನ್ನು ಧಂದೆ ಮಾಡಿಕೊಂಡಿದ್ದಾರೆ ಎಂದರು.

ದೆಹಲಿ: ತಮ್ಮ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ದಾಖಲಾಗಿರುವ ಎಫ್ಐಆರ್ ಗೆ ಪ್ರತಿಕ್ರಿಯೆ ನೀಡುತ್ತಾ, ಸಿದ್ದರಾಮಯ್ಯ ಸರ್ಕಾರ ಅಧಿಕಾರಿಗಳ ಮೂಲಕ ವಿರೋಧ ಪಕ್ಷದ ನಾಯಕರನ್ನು ಬೆದರಿಸುವ ಕೆಲಸ ಮಾಡುತ್ತಿದೆ, ಆ ಅಧಿಕಾರಿ ಭಾರತದ ಸರ್ಕಾರದ ಮಂತ್ರಿಯೊಬ್ಬರ ವಿರುದ್ಧ ಅವಹೇಳನಕಾರಿಯಾಗಿ ಮಾತಾಡಿದ್ದಾನೆ, ರಾಜ್ಯ ಸರ್ಕಾರ ಯಾಕೆ ಅವರ ವಿರುದ್ಧ ಕ್ರಮ ತೆಗೆದುಕೊಂಡಿಲ್ಲ ಎಂದು ಪ್ರಶ್ನಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಸಚಿವ ಜಮೀರ್ ಅಹ್ಮದ್ ಹೇಳಿದಂತೆ ಕುಣಿಯುತ್ತಿದ್ದಾರೆಂದು ಅಧಿಕಾರಿಗಳನ್ನು ಎಚ್ಚರಿಸಿದ ಪ್ರಲ್ಹಾದ್ ಜೋಶಿ