ಬೆಂಗಳೂರು: ಸಚಿವ ಸಂಪುಟ ಸಭೆಗೆ ಮಳೆಯಲ್ಲಿ ಬಂದ ಸಚಿವರಿಗೆ ಅಧಿಕಾರಿಗಳು ಛತ್ರಿ ಹಿಡಿಯಬೇಕಾಯಿತು!

|

Updated on: Aug 19, 2023 | 6:23 PM

ಕೆಲ ಸಚಿವರು ಬೇಗ ಬಂದು ಮೀಟಿಂಗ್ ಹಾಲ್ ಸೇರಿಬಿಟ್ಟಿದ್ದರು ಕೆಲವರು ತಡವಾಗಿ ಬಂದರು. ವಿಡಿಯೋದಲ್ಲಿ ತಡವಾಗಿ ಆಗಮಿಸಿದವರಲ್ಲಿ ಮೊದಲಿಗೆ ವಸತಿ ಖಾತೆ ಸಚಿವ ಬಿ ಜೆಡ್ ಜಮೀರ್ ಅಹ್ಮದ್ ಖಾನ್ ಬರೋದನ್ನು ನೋಡಬಹುದು.

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಇಂದು ವಿಧಾನ ಸೌಧದಲ್ಲಿ ಸಚಿವ ಸಂಪುಟ ಸಭೆಯೊಂದನ್ನು ನಡೆಸಿದರು. ಅವರು ತಮ್ಮ ಸಿಬ್ಬಂದಿಯ ಮೂಲಕ ಎಲ್ಲ ಸಚಿವರಿಗೆ ಮೀಟಿಂಗ್ ಗೆ ಹಾಜರಾಗುವಂತೆ ಸಂದೇಶ ಕಳಿಸುವಾಗ ಪ್ರಾಯಶಃ ಮಳೆ ಇರಲಿಲ್ಲ, ಆದರೆ ಶುರುವಾಗುವ ಹೊತ್ತಿಗೆ ನಗರದಲ್ಲಿ ಜೋರು ಮಳೆ. ಕೆಲ ಸಚಿವರು ಬೇಗ ಬಂದು ಮೀಟಿಂಗ್ ಹಾಲ್ ಸೇರಿಬಿಟ್ಟಿದ್ದರು ಕೆಲವರು ತಡವಾಗಿ ಬಂದರು. ವಿಡಿಯೋದಲ್ಲಿ ತಡವಾಗಿ ಆಗಮಿಸಿದವರಲ್ಲಿ ಮೊದಲಿಗೆ ವಸತಿ ಖಾತೆ ಸಚಿವ ಬಿ ಜೆಡ್ ಜಮೀರ್ ಅಹ್ಮದ್ ಖಾನ್ (BZ Zameer Ahmed Khan) ಬರೋದನ್ನು ನೋಡಬಹುದು. ದ್ವಾರದ ಎಡಭಾಗದಲ್ಲಿ ಕೆಮೆರಾಗಳೊಂದಿಗೆ ನಿಂತಿದ್ದ ಮಾಧ್ಯಮ ಪ್ರತಿನಿಧಿಗಳತ್ತ ಮುಗುಳ್ನಗೆ ಬೀರಿ ಕೈ ಬೀಸುತ್ತಾ ಅವರು ಒಳಗೆ ಹೋಗುತ್ತಾರೆ. ನಂತರ ಆಗಮಿಸಿದ್ದು ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಸಚಿವ ಬಿ ನಾಗೇಂದ್ರ (B Nagendra). ಸಿದ್ದರಾಮಯ್ಯ ಸಂಪುಟದಲ್ಲಿ ಕಿರಿ ವಯಸ್ಸಿನ ಮಂತ್ರಿಯಾಗಿರುವ ನಾಗೇಂದ್ರ ಸುದ್ದಿಗಾರರೊಂದಿಗೆ ಮಾತಾಡುವಷ್ಟು ವ್ಯವಧಾನ ಪ್ರದರ್ಶಿಸಿದರು. ಕೊನೆ ಆಗಮಿಸಿದ್ದು ಹಿರಿಯ ಮತ್ತು ಗಂಭೀರ ಸ್ವಭಾವದ ಗೃಹ ಸಚಿವ ಜಿ ಪರಮೇಶ್ವರ (G Parameshwara). ಅವರಿಗೂ ಪತ್ರಕರ್ತರು ಒಂದು ಪ್ರಶ್ನೆ ಕೇಳಿದಾಗ ಸಚಿವರು ಗೊತ್ತಿಲ್ಲವೆಂಬಂತೆ ಕೈಯಾಡಿಸಿ ಒಳಗೆ ಹೋದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on