ತುಮಕೂರು: ಇಲ್ಲೂ ಒಂದು ಅವೈಜ್ಞಾನಿಕ ಅಂಡರ್ ಪಾಸ್, ಖಾಸಗಿ ಬಸ್ ನೀರಲ್ಲಿ ಸಿಲುಕಿ ಪ್ರಯಾಣಿಕರ ಪರದಾಟ!

ತುಮಕೂರು: ಇಲ್ಲೂ ಒಂದು ಅವೈಜ್ಞಾನಿಕ ಅಂಡರ್ ಪಾಸ್, ಖಾಸಗಿ ಬಸ್ ನೀರಲ್ಲಿ ಸಿಲುಕಿ ಪ್ರಯಾಣಿಕರ ಪರದಾಟ!

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 19, 2023 | 8:18 PM

ಇತ್ತೀಚಿಗೆ ಅವೈಜ್ಞಾನಿಕ ಅಂಡರ್ ಪಾಸ್ ಗಳಲ್ಲಿ ಬಸ್, ಟ್ರಕ್ ಮತ್ತು ಇತರ ವಾಹನಗಳು ಸಿಲುಕಿಕೊಳ್ಳೋದು, ಅನಾಹುತಗಳು ಸಂಭವಿಸೋದು ಸಾಮಾನ್ಯವಾಗಿ ಬಿಟ್ಟಿದೆ. ಇಂಥ ಅವೈಜ್ಞಾನಿಕ ಅಂಡರ್ ಪಾಸ್ ಗಳಿಗೆ ಕೂಡಲೇ ಕಾಯಕಲ್ಪ ಕಲ್ಪಿಸುವ ವ್ಯವಸ್ಥೆ ಮಾಡಬೇಕು.

ತುಮಕೂರು: ನಮ್ಮ ಭಾಗದ ಇಂಜಿನಿಯರ್ ಗಳಿಗೆ (engineers) ಸಮರ್ಪಕವಾಗಿ ಅಂಡರ್ ಪಾಸ್ (underpass) ವಿನ್ಯಾಸಗೊಳಿಸುವುದು ಗೊತ್ತಿಲ್ಲವೇ ಅಥವಾ ಗುತ್ತಿಗೆದಾರರ ಮಸಲತ್ತಿನಿಂದ ಇಂಥ ಸನ್ನಿವೇಶಗಳು ಸೃಷ್ಟಿಯಾಗುತ್ತವೆಯೇ? ಇತ್ತೀಚಿಗೆ ಅವೈಜ್ಞಾನಿಕ (unscientific) ಅಂಡರ್ ಪಾಸ್ ಗಳಲ್ಲಿ ಬಸ್, ಟ್ರಕ್ ಮತ್ತು ಇತರ ವಾಹನಗಳು ಸಿಲುಕಿಕೊಳ್ಳೋದು, ಅನಾಹುತಗಳು ಸಂಭವಿಸೋದು ಸಾಮಾನ್ಯವಾಗಿ ಬಿಟ್ಟಿದೆ. ತುಮಕೂರು ನಗರಕ್ಕೆ ಹತ್ತಿರದ ಅಂತರಸನಹಳ್ಳಿಯ ಜಲಾವೃತಗೊಂಡಿರುವ ಅಂಡರ್ ಪಾಸ್ ನಲ್ಲಿ ಖಾಸಗಿ ಬಸ್ಸೊಂದು ಸಿಲುಕಿ ಅದರೊಳಗಿದ್ದ ಪ್ರಯಾಣಿಕರು ಪರದಾಡುವಂಥ ಸ್ಥಿತಿ ಉಂಟಾಗಿದೆ. ಜನ ಎರಡೂ ಕಡೆ ನಿಂತು ನೋಡುತ್ತಿದ್ದಾರೆ. ಪಾಪ, ಅವರಾದರೂ ಏನು ಮಾಡಿಯಾರು? ಸಂಬಂಧಪಟ್ಟ ಇಲಾಖೆ, ಸ್ಥಳೀಯ ಆಡಳಿತ ಮತ್ತು ಜನ ಪ್ರತಿನಿಧಿಗಳು ಇಂಥ ಅವೈಜ್ಞಾನಿಕ ಅಂಡರ್ ಪಾಸ್ ಗಳಿಗೆ ಕೂಡಲೇ ಕಾಯಕಲ್ಪ ಕಲ್ಪಿಸುವ ವ್ಯವಸ್ಥೆ ಮಾಡಬೇಕು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ