ಕಲ್ಲಂಗಡಿ ಹಣ್ಣುಗಳಲ್ಲಿ ವಿಷಕಾರಕ ಕೆಮಿಕಲ್ ಪತ್ತೆಗೆ ಮುಂದಾದ ಆಹಾರ ಇಲಾಖೆಯ ಅಧಿಕಾರಿಗಳು
ಅಧಿಕಾರಿಯು ಕಲ್ಲಂಗಡಿ ಹಣ್ಣನ್ನು ಟೆಸ್ಟ್ ಗಾಗಿ ತೆಗೆದುಕೊಂಡು ಹೋಗುವ ಸಂಗತಿಯನ್ನು ಅಂಗಡಿಯವನಿಗೆ ಹೇಳುತ್ತಾರೆ. ಅದರೆ ಆ ನಿರ್ದಿಷ್ಟ ಹಣ್ಣಿಗೆ ಅವರು ಹಣ ನೀಡಿದರೋ ಇಲ್ಲವೋ ಅನ್ನೋದು ಗೊತ್ತಾಗಲಿಲ್ಲ. ಅಂಗಡಿಯವನು ಬಡಪಾಯಿ, ಅವನಂತೂ ಖಂಡಿತ ಕೆಮಿಕಲ್ ಬೆರೆಸಿಲಾರ. ದಿನವಿಡೀ ಬಿಸಿಲಲ್ಲಿ ನಿಂತು ಹಣ್ಣು ಮಾರುವ ಅವನಿಂದ ಒಂದು ಹಣ್ಣನ್ನು ಪುಕ್ಕಟೆಯಾಗಿ ತೆಗೆದುಕೊಂಡರೆ ಒಂದು ದಿನದ ಲಾಭ ನೆಲಸಮಗೊಳ್ಳುತ್ತದೆ.
ಕೋಲಾರ, ಮಾರ್ಚ್1: ಕಲ್ಲಂಗಡಿ ಹಣ್ಣುಗಳಲ್ಲಿ ವಿಷಕಾರಕ ಕೆಮಿಕಲ್ (toxic chemical) ಇರಬಹುದಾದ ಅಂಶದ ಮೇಲೆ ಟಿವಿ9 ನಿನ್ನೆ ವರದಿ ಮಾಡುವುದರ ಜೊತೆಗೆ ರಿಯಾಲಿಟಿ ಚೆಕ್ ನಡೆಸಿದ ಬಳಿಕ ಎಚ್ಚೆತ್ತುಕೊಂಡಿರುವ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಅಧಿಕಾರಿಗಳು ಹಣ್ಣಿನ ಮಾರಾಟ ಅಂಗಡಿಗಳಿಗೆ ಹೋಗಿ ರಾಸಾಯನಿಕಯುಕ್ತ ಕಲ್ಲಂಗಡಿ ಹಣ್ಣುಗಳ ಪತ್ತೆಯಲ್ಲಿ ತೊಡಗಿದರು. ಇಲ್ಲೊಂದು ಅಂಗಡಿಯಿಂದ ಅಧಿಕಾರಿಯೊಬ್ಬರು ಕಲ್ಲಂಗಡಿ ಹಣ್ಣನ್ನು ತೆಗೆಸಿ, ಕೊಯ್ಯಿಸಿ ಅದರಲ್ಲಿ ರಾಸಾಯನಿಕದ ಅಂಶ ಇದೆಯೇ ಅನ್ನೋದನ್ನು ಚೆಕ್ ಮಾಡಿದ ಬಳಿಕ ಹೆಚ್ಚಿನ ಪರೀಕ್ಷಣೆಗಾಗಿ ಹಣ್ಣೊಂದನ್ನು ಪ್ಯಾಕ್ ಮಾಡಿಸಿ ತೆಗೆದುಕೊಂಡು ಹೋದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಕಲ್ಲಂಗಡಿ ವರ್ಸಸ್ ಕರ್ಬೂಜ; ಬೇಸಿಗೆಯಲ್ಲಿ ಯಾವುದು ಉತ್ತಮ?