ಭಕ್ತರ ಒತ್ತಾಯಕ್ಕೆ ಉಯ್ಯಾಲೆಯಲ್ಲಿ ಕೂತು ಸಂತಸಪಟ್ಟ ಪೇಜಾವರ ಶ್ರೀಗಳು
ಪೇಜಾವರ ಶ್ರೀಗಳು ಕೋಲಾರಕ್ಕೆ ಭೇಟಿ ನೀಡಿ, ಭಕ್ತರೊಬ್ಬರ ಮನೆಯಲ್ಲಿ ಉಯ್ಯಾಲೆಯಲ್ಲಿ ಕೂತು ಸಂತೋಷಪಟ್ಟರು. ಭಕ್ತರ ಒತ್ತಾಯದ ಮೇರೆಗೆ ಉಯ್ಯಾಲೆಯಲ್ಲಿ ಕುಳಿತು ಸಂತಸಪಟ್ಟ ಶ್ರೀಗಳು ನಂತರ ಕೋಲಾರದ ರಾಘವೇಂದ್ರ ಸ್ವಾಮಿಗಳ ದೇವಾಲಯಕ್ಕೆ ಭೇಟಿ ನೀಡಿದರು. ಈ ಘಟನೆಯು ಸ್ಥಳೀಯರಲ್ಲಿ ಸಂತೋಷವನ್ನುಂಟುಮಾಡಿತು. ಶ್ರೀಗಳ ಈ ಅಪರೂಪದ ಭೇಟಿ ಅನೇಕರಿಗೆ ಸ್ಮರಣೀಯವಾಯಿತು.
ಕೋಲಾರ, ಮಾರ್ಚ್ 01: ಇಂದು ಕೋಲಾರದ ರಾಘವೇಂದ್ರ ಸ್ವಾಮಿಗಳ ದೇವಾಲಯಕ್ಕೆ ವಿಶ್ವಪ್ರಸನ್ನ ತೀರ್ಥರು (vishwaprasanna swamiji) ಭೇಟಿ ನೀಡಿದ್ದರು. ಈ ವೇಳೆ ಹೊರವಲಯದ ಮೂರಂಡಹಳ್ಳಿ ಬಳಿ ಭಕ್ತರೊಬ್ಬರ ಮನೆಗೆ ಪೇಜಾವರ ಶ್ರೀಗಳು ಭೇಟಿ ನೀಡಿದ್ದಾರೆ. ಇನ್ನು ಇದೇ ವೇಳೆ ಭಕ್ತರ ಒತ್ತಾಯಕ್ಕೆ ಮಣಿದು ಉಯ್ಯಾಲೆಯಲ್ಲಿ ಕೂತು ಸಂತಸ ಪಟ್ಟಿದ್ದಾರೆ. ಶ್ರೀಗಳನ್ನು ಉಯ್ಯಾಲೆಯಲ್ಲಿ ಕೂರಿಸಿ ತೂಗಿ ಮನೆಯ ಮಾಲಿಕ ಪ್ರೇಮ್ ಕುಮಾರ್ ಎಂಬುವವರು ಸಂತಸ ಪಟ್ಟರು. ವಿಡಿಯೋ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Latest Videos