ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಲು ಕಾಲ ಕೂಡಿಬರಬೇಕು, ಅವರು ಸಿಎಂ ಆಗುವಾಸೆ ನಂಗಿದೆ: ಡಿಕೆ ಸುರೇಶ್
ಬದುಕಲ್ಲಾಗಲಿ, ವೃತ್ತಿ ಅಥವಾ ರಾಜಕಾರಣದಲ್ಲಾಗಳೀ ನಂಬಿಕೆ ಬಹಳ ಮುಖ್ಯ, ನಂಬಿಕೆ ಇಲ್ಲದೆ ಬದುಕಿಲ್ಲ, ಪರಸ್ಪರ ನಂಬಿಕೆಯ ಮೇಲೆ ಜೀವನ ನಡೆಯುತ್ತದೆ, ಪ್ರಪಂಚದ ಎಲ್ಲ ಜೀವಿಗಳು ನಂಬಿಕೆಯ ಮೇಲೆ ಜೀವನ ನಡೆಸುತ್ತವೆ, ಅದಿಲ್ಲವೆಂದ ಮೇಲೆ ಬದುಕೇ ಇಲ್ಲ, ನಂಬಿಕೆಯ ಆಧಾರದ ಮೇಲೆ ಶಿವಕುಮಾರ್ ರಾಜಕೀಯ ಬದುಕು ನಡೆಸುತ್ತಿರೋದು, ನಂಬಿಕೆಯಿಲ್ಲದೆ ರಾಜಕಾರಣ ಮಾಡಲಾಗದು ಎಂದು ಸುರೇಶ್ ಹೇಳಿದರು.
ಬೆಂಗಳೂರು, ಮಾರ್ಚ್ 1: ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತಾಡಿದ ಮಾಜಿ ಸಂಸದ ಡಿಕೆ ಸುರೇಶ್ ಮುಂದೊಂದು ದಿನ ಡಿಕೆ ಶಿವಕುಮಾರ್ ರಾಜ್ಯದ ಮುಖ್ಯಮಂತ್ರಿ ಅಗೇ ಆಗುತ್ತಾರೆ, ಯಾವಾಗ ಆಗುತ್ತಾರೆ ಅಂತ ತನಗಂತೂ ಗೊತ್ತಿಲ್ಲ, ತಾನು ಭವಿಷ್ಯವಾಣಿ ನುಡಿಯುವವನಲ್ಲ, ತನಗದು ಬರೋದಿಲ್ಲ ಎಂದು ಹೇಳಿದರು. ಸದ್ಯಕ್ಕಂತೂ ಮುಖ್ಯಮಂತ್ರಿ ಸ್ಥಾನದಲ್ಲಿ ಸಿದ್ದರಾಮಯ್ಯ (Siddaramaiah) ಇದ್ದಾರೆ, ಶಿವಕುಮಾರ್ ಪಕ್ಷವನ್ನು ನಂಬಿದ್ದಾರೆ, ಒಬ್ಬ ಸಹೋದರನ್ನನಾಗಿ ತನಗೂ ಶಿವಕುಮಾರ್ ಮುಖ್ಯಮಂತ್ರಿಯಾಗಬೇಕೆಂಬ ಮನಸ್ಸಿದೆ, ಅವರು ಪಕ್ಷವನ್ನು ನಂಬಿದ್ದಾರೆ, ಎಲ್ಲಾದಕ್ಕೂ ಕಾಲ ಕೂಡಿ ಬರಬೇಕು ಎಂದು ಸುರೇಶ್ ಹೇಳಿದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ನಾನ್ಯಾಕೆ ಬೇರೆ ಧರ್ಮಕ್ಕೆ ಹೋಗಲಿ, ನನಗೆ ಮಾನವ ಧರ್ಮದ ಮೇಲೆ ಅಚಲ ನಂಬಿಕೆ: ಡಿಕೆ ಶಿವಕುಮಾರ್