ರಾಹುಲ್ ಗಾಂಧಿ ಯಾರೆಂದು ಸದ್ಗುರು ಹೇಳುತ್ತಾರೆ, ಅವರ ಕಾರ್ಯಕ್ರಮದಲ್ಲಿ ಭಾಗಿಯಾಗುವುದು ಎಷ್ಟು ಸರಿ? ರಾಜಣ್ಣ
ಸಹಕಾರ ಸಚಿವ ರಾಜಣ್ಣರನ್ನು ಮೊನ್ನೆಯಷ್ಟೇ ಹೈಕಮಾಂಡ್ ದೆಹಲಿಗೆ ಕರೆಸಿ ಪಕ್ಷ, ಕೆಪಿಸಿಸಿ ಮತ್ತು ಸಿಎಂ ಬದಲಾವಣೆ ಬಗ್ಗೆ ಸಾರ್ವಜನಿಕವಾಗಿ ಮಾತಾಡದಂತೆ ತಾಕೀತು ಮಾಡಿದೆ. ಎರಡು ದಿನಗಳ ಕಾಲ ಸುಮ್ಮನಿದ್ದ ರಾಜಣ್ಣ ತಮ್ಮ ಹಳೆ ಚಾಳಿಗೆ ವಾಪಸ್ಸಾಗಿದ್ದಾರೆ. ಶಿವಕುಮಾರ್ ಇಶಾ ಫೌಂಡೇಶನ್ ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಇದುವರೆಗೆ ಮಾತಾಡಿಲ್ಲ ಆದರೆ ರಾಜಣ್ಣ ಮಾತಾಡುತ್ತಾರೆ!
ಹಾಸನ, ಮಾರ್ಚ್ 1: ಜಿಲ್ಲೆಯ ಉಸ್ತುವಾರಿ ಸಚಿವ ಕೆಎನ್ ರಾಜಣ್ಣ (KN Rajanna) ಮತ್ತೊಮ್ಮೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬಗ್ಗೆ ಮಾತಾಡಿದ್ದಾರೆ. ಸದ್ಗುರು ಜಗ್ಗಿ ವಾಸುದೇವ್ ಅವರು ರಾಹುಲ್ ಗಾಂಧಿ ಯಾರು ಅಂತ ಗೊತ್ತಿಲ್ಲ ಅಂದಿದ್ದಾರೆ, ರಾಹುಲ್ ಬಗ್ಗೆ ಸಂಸತ್ತಿನಲ್ಲಿ ಏನೇನೆಲ್ಲ ಮಾತಾಡುತ್ತಾರೆ ಅಂತ ತನಗಿಂತ ಹೆಚ್ಚು ಸಂಸದರಾಗಿರುವ ಶ್ರೇಯಸ್ ಪಟೇಲ್ ಅವರಿಗೆ ಗೊತ್ತು ಎನ್ನುತ್ತ ತಮ್ಮ ಜೊತೆಗಿದ್ದ ಹಾಸನ ಸಂಸದನನ್ನು ತೋರಿಸುತ್ತಾ ರಾಜಣ್ಣ ಹೇಳುತ್ತಾರೆ. ರಾಹುಲ್ ಗಾಂಧಿ ಅವರ ಬಗ್ಗೆ ಕೇವಲವಾಗಿ ಮಾತಾಡುವವರ ಜೊತೆ ವೇದಿಕೆ ಹಂಚಿಕೊಳ್ಳುವುದರ ಔಚಿತ್ಯವೇನು ಎಂದು ರಾಜಣ್ಣ ಪ್ರಶ್ನಿಸಿದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಹಾಸನ ಉಸ್ತವಾರಿಯಿಂದ ಬಿಡುಗಡೆ ಕೋರಿ ಪತ್ರ ನೀಡಿದ್ದೇನೆ: ಕೆಎನ್ ರಾಜಣ್ಣ
Latest Videos