Pancharatna Yatre:  ಹೆಚ್ ಡಿ ಕುಮಾರಸ್ವಾಮಿ ಭಾಷಣ ಮಾಡುವಾಗ ವೃದ್ಧೆಯೊಬ್ಬರು ವೇದಿಕೆ ಬಳಿ ಬಂದು ಅಳಲು ತೋಡಿಕೊಂಡರು

|

Updated on: Mar 15, 2023 | 6:02 PM

ರೇವಣ್ಣ ಮಹಿಳೆಗೆ ದೂರ ಹೋಗು ಎಂದರೆ ಕುಮಾರಸ್ವಾಮಿ ಮೊದಲು ನಿರ್ಲಕ್ಷಿಸಿದರೂ ನಂತರ ಆಕೆಯ ಮಾತನ್ನು ಆಲಿಸುತ್ತಾರೆ. ಮಹಿಳೆ ಹೇಳಿದ್ದೇನು ಅಂತ ಗೊತ್ತಾಗಿಲ್ಲ

ಹಾಸನ: ಪಕ್ಷದ ಪಂಚರತ್ನ ಯಾತ್ರೆ ಭಾಗವಾಗಿ ಜಿಲ್ಲೆಯ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದ ಹಲವಾರು ಕಡೆಗಳಲ್ಲಿ ಹೆಚ್ ಡಿ ಕುಮಾರಸ್ವಾಮಿ, (HD Kumaraswamy) ಹೆಚ್ ಡಿ ರೇವಣ್ಣ (HD Revanna), ಸೂರಜ್ ರೇವಣ್ಣ ಮತ್ತು ಕಾರ್ಯಕರ್ತರು ರೋಡ್ ಶೋ (road show) ನಡೆಸಿದರು. ಹೊಳೆನರಸೀಪುರದಲ್ಲಿ ಬೃಹತ್ ಸಮಾವೇಶವೊಂದನ್ನು ಉದ್ದೇಶಿಸಿ ಕುಮಾರಸ್ವಾಮಿಯವರು ಮಾತಾಡುತ್ತಿದ್ದಾಗ ಹಿರಿಯ ಮಹಿಳೆಯೊಬ್ಬರು ವೇದಿಕೆ ಮುಂದೆ ಬಂದು ತನ್ನ ಅಳಲು ತೋಡಿಕೊಳ್ಳುವ ಪ್ರಯತ್ನ ಮಾಡಿದರು. ರೇವಣ್ಣ ಆಕೆಗೆ ದೂರ ಹೋಗು ಎಂದರೆ ಕುಮಾರಸ್ವಾಮಿ ಮೊದಲು ನಿರ್ಲಕ್ಷಿಸಿದರೂ ನಂತರ ಆಕೆಯ ಮಾತನ್ನು ಆಲಿಸುತ್ತಾರೆ. ಮಹಿಳೆ ಹೇಳಿದ್ದೇನು ಅಂತ ನಮಗೆ ಗೊತ್ತಾಗಿಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ