Video: ಗೇಟ್ ಹತ್ತಿ ಹಾರಿ ಜಮ್ಮು ಕಾಶ್ಮೀರದ ಸಿಎಂ ಒಮರ್ ಅಬ್ದುಲ್ಲಾ ಹೋಗಿದ್ದೆಲ್ಲಿಗೆ?
ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಗೇಟ್ ಹತ್ತಿ ಹಾರಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಜುಲೈ 13ರಂದು ಹುತಾತ್ಮರ ದಿನದಂದು ಗೌರವ ಸಲ್ಲಿಸಲು ಅಬ್ದುಲ್ಲಾ ತೆರಳಬೇಕಿತ್ತು, ಆದರೆ ಆದರೆ ಅಲ್ಲಿಗೆ ಪ್ರವೇಶಿಸದಂತೆ ಭದ್ರತಾ ಪಡೆಗಳು ತಡೆದಿದ್ದವು ಎಂದು ಆರೋಪಿಸಲಾಗಿದೆ. ಈಗ ವೈರಲ್ ಆಗಿರುವ ಈ ವಿಡಿಯೋದಲ್ಲಿ, ಶ್ರೀನಗರದ ನೌಹಟ್ಟಾದಲ್ಲಿರುವ ಹುತಾತ್ಮರ ಸ್ಮಾರಕದ ಗೋಡೆಯನ್ನು ಸಿಎಂ ಹತ್ತುವುದನ್ನು ಕಾಣಬಹುದು. ನನ್ನನ್ನು ಗೃಹ ಬಂಧನದಲ್ಲಿಡಲಾಗಿತ್ತು. ಹೇಗೋ ತಪ್ಪಿಸಿಕೊಂಡು ಬಂದಿದ್ದೆ, ಭದ್ರತಾ ಪಡೆಗಳು ನಮ್ಮನ್ನು ತಡೆಯಲು ಮಾಡಿದ ಪ್ರಯತ್ನವನ್ನು ನಾನು ವಿಫಲಗೊಳಿಸಿದ್ದೇನೆ ಎಂದು ಹೇಳಿದ್ದಾರೆ.
ಶ್ರೀನಗರ, ಜುಲೈ 14: ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಗೇಟ್ ಹತ್ತಿ ಹಾರಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಜುಲೈ 13ರಂದು ಹುತಾತ್ಮರ ದಿನದಂದು ಗೌರವ ಸಲ್ಲಿಸಲು ಅಬ್ದುಲ್ಲಾ ತೆರಳಬೇಕಿತ್ತು, ಆದರೆ ಆದರೆ ಅಲ್ಲಿಗೆ ಪ್ರವೇಶಿಸದಂತೆ ಭದ್ರತಾ ಪಡೆಗಳು ತಡೆದಿದ್ದವು ಎಂದು ಆರೋಪಿಸಲಾಗಿದೆ. ಈಗ ವೈರಲ್ ಆಗಿರುವ ಈ ವಿಡಿಯೋದಲ್ಲಿ, ಶ್ರೀನಗರದ ನೌಹಟ್ಟಾದಲ್ಲಿರುವ ಹುತಾತ್ಮರ ಸ್ಮಾರಕದ ಗೋಡೆಯನ್ನು ಸಿಎಂ ಹತ್ತುವುದನ್ನು ಕಾಣಬಹುದು. ನನ್ನನ್ನು ಗೃಹ ಬಂಧನದಲ್ಲಿಡಲಾಗಿತ್ತು. ಹೇಗೋ ತಪ್ಪಿಸಿಕೊಂಡು ಬಂದಿದ್ದೆ, ಭದ್ರತಾ ಪಡೆಗಳು ನಮ್ಮನ್ನು ತಡೆಯಲು ಮಾಡಿದ ಪ್ರಯತ್ನವನ್ನು ನಾನು ವಿಫಲಗೊಳಿಸಿದ್ದೇನೆ ಎಂದು ಹೇಳಿದ್ದಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ