ಪಂಚರತ್ನ ರಥಯಾತ್ರೆಯ ಮೊದಲರಾತ್ರಿ  ಗ್ರಾಮವಾಸ್ತವ್ಯ ಹೂಡಿದ ಎಚ್ ಡಿ ಕುಮಾರಸ್ವಾಮಿ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Nov 19, 2022 | 12:55 PM

ಕುಮಾರಸ್ವಾಮಿಯವರು ರಥಯಾತ್ರೆಯ ಮೊದಲರಾತ್ರಿ ಕೋಲಾರ ತಾಲ್ಲೂಕಿನ ಊರಕುಂಟೆ ಮಿಟ್ಟೂರು ಗ್ರಾಮದಲ್ಲಿ ವಾಸ್ತವ್ಯ ಹೂಡಿದರು.

ಕೋಲಾರ: ಇನ್ನಾರು ತಿಂಗಳಲ್ಲಿ ನಡೆಯಲಿರುವ ವಿಧಾನ ಸಭಾ ಚುನಾವಣೆಗೆ (Assembly polls) ರಾಜ್ಯದ ಮೂರು ಪಕ್ಷಗಳು ರಣಕಹಳೆ ಮೊಳಗಿಸಿವೆ. ಜೆಡಿ(ಎಸ್) ಪಕ್ಷವು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ (HD Kumaraswamy) ಮತ್ತು ಪಕ್ಷದ ಅಧ್ಯಕ್ಷ ಸಿಎಮ್ ಇಬ್ರಾಹಿಂ ನೇತೃತ್ವದಲ್ಲಿ ಶುಕ್ರವಾರ ಪಂಚರತ್ನ ರಥಯಾತ್ರೆ ಕೋಲಾರದಿಂದ ಪ್ರಾರಂಭಿದರು. ಮುಖ್ಯಮಂತ್ರಿಗಳಾಗಿದ್ದಾಗ ಗ್ರಾಮ ವಾಸ್ತವ್ಯ (village stay) ಪರಿಪಾಠ ಆರಂಭಿಸಿದ್ದ ಕುಮಾರಸ್ವಾಮಿಯವರು ರಥಯಾತ್ರೆಯ ಮೊದಲರಾತ್ರಿ ಕೋಲಾರ ತಾಲ್ಲೂಕಿನ ಊರಕುಂಟೆ ಮಿಟ್ಟೂರು ಗ್ರಾಮದಲ್ಲಿ ವಾಸ್ತವ್ಯ ಮಾಡಿದರು. ಅದಕ್ಕೂ ಮೊದಲು ಜೆಡಿ(ಎಸ್) ನಾಯಕರು ಮತ್ತು ಕಾರ್ಯಕರ್ತರನ್ನು ಗ್ರಾಮದ ಜನ ಅದ್ದೂರಿಯಾಗಿ ಸ್ವಾಗತಿಸಿದರು.

ಮತ್ತಷ್ಟು ವಿಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ